ರಜಾ ದಿನಗಳಲ್ಲಿ ರ‍್ಯಾಪಿಡೊ ಓಡಿಸಿದ BBA ವಿದ್ಯಾರ್ಥಿ ಸಂಪಾದಿಸಿದ್ದು ಎಷ್ಟು?

ರಜಾ ದಿನಗಳಲ್ಲಿ ರ‍್ಯಾಪಿಡೊ ಓಡಿಸಿದ BBA ವಿದ್ಯಾರ್ಥಿ ಸಂಪಾದಿಸಿದ್ದು ಎಷ್ಟು?

ರಜಾ ದಿನಗಳಲ್ಲಿ ರ‍್ಯಾಪಿಡೊ ಓಡಿಸಿದ BBA ವಿದ್ಯಾರ್ಥಿ ಸಂಪಾದಿಸಿದ್ದು ಎಷ್ಟು?

ಬೆಂಗಳೂರಿನ ಬಿಬಿಎ ವಿದ್ಯಾರ್ಥಿಯೊಬ್ಬರು 3 ತಿಂಗಳು, ರ‍್ಯಾಪಿಡೊ ಹಾಗೂ ಫುಡ್‌ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡಿರುವ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

‘ರ‍್ಯಾಪಿಡೊ ಓಡಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಬದಲಾಗಿ ರ‍್ಯಾಪಿಡೊ ಹೇಗೆ ಕಾರ್ಯನಿರ್ವಹಿಸುತ್ತದೆ, ಅದರ ಸಂಪರ್ಕ ಜಾಲ ಹೇಗಿದೆ ಹಾಗೂ ಎಷ್ಟು ಹಣ ಸಂಪಾದಿಸಬಹುದು ಎಂಬುದನ್ನು ತಿಳಿದುಕೊಳ್ಳುವುದಾಗಿತ್ತು. ಹೀಗಾಗಿ ಕಾಲೇಜಿನ 3 ತಿಂಗಳ ರಜೆಯನ್ನು ರ‍್ಯಾಪಿಡೊಗಾಗಿ ವಿನಿಯೋಗಿಸಿದೆ’ ಎಂದು ವಿದ್ಯಾರ್ಥಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವಿದ್ಯಾರ್ಥಿ ಹೇಳುವಂತೆ, ‘ಪ್ರತಿದಿನ ಬೆಳಿಗ್ಗೆ 8 ಗಂಟೆಯಿಂದ ಸಂಜೆ 4:30 ರವರೆಗೆ ರ‍್ಯಾಪಿಡೊ ಓಡಿಸುತ್ತಿದ್ದೆ. ಬೈಕ್‌ನ ಪೆಟ್ರೋಲ್‌ ಹಾಗೂ ಇತರೆ ಖರ್ಚುಗಳನ್ನು ಸೇರಿದಂತೆ ದಿನಕ್ಕೆ ಸರಿಸುಮಾರು ₹1,200 ಗಳಿಸುತ್ತಿದ್ದೆ. ರ‍್ಯಾಪಿಡೊ, ಪಾರ್ಟ್‌ಟೈಮ್‌ಗೆ ಹೇಳಿ ಮಾಡಿಸಿದ ಕೆಲಸ. ಆದರೆ, ಕೆಲವರು ಇದನ್ನು ಜೀವನೋಪಾಯಕ್ಕಾಗಿ ಇಡೀ ದಿನ ಮಾಡುತ್ತಾರೆ. ಅವರು ವಿರಾಮ ತೆಗೆದುಕೊಳ್ಳದೆ ದುಡಿಯುತ್ತಾರೆ’ ಎಂದಿದ್ದಾರೆ.

‘ಮಧ್ಯಾಹ್ನದ ವೇಳೆ ರೈಡ್‌ಗಳು ಅಷ್ಟಾಗಿ ಸಿಗುವುದಿಲ್ಲ. ಆಗ ನಾನು ಫುಡ್ ಆರ್ಡರ್‌ಗಳ ಡೆಲಿವರಿಯನ್ನು ಮಾಡುತ್ತಿದೆ. ಕೆಲವೊಮ್ಮೆ ಹೋಟೆಲ್‌ಗಳಲ್ಲಿ ಆರ್ಡರ್ ಮಾಡಿದ ಆಹಾರವನ್ನು ಪಡೆದುಕೊಳ್ಳಲು 20 ರಿಂದ 25 ನಿಮಿಷಗಳವರೆಗೆ ಕಾಯಬೇಕಿತ್ತು. ಸತತ 3 ತಿಂಗಳು ಮೆಜೆಸ್ಟಿಕ್, ರೈಲ್ವೆ ನಿಲ್ದಾಣ ಹಾಗೂ ಇತರೆ ಸ್ಥಳಗಳಲ್ಲಿ ಓಡಾಡುತ್ತಿದೆ. ಆಟೋದವರು ಎಂದಿಗೂ ನನಗೆ ಬೆದರಿಕೆ ಹಾಕಲಿಲ್ಲ’ ಎಂದು ಬರೆದುಕೊಂಡಿದ್ದಾರೆ.

’ಮೇ ತಿಂಗಳಲ್ಲಿ 96 ಆರ್ಡರ್‌ಗಳನ್ನು ಪೂರ್ಣಗೊಳಿಸಿ ₹5,650 ಸಂಪಾದಿಸಿದ್ದೆ. ಜೂನ್‌ ತಿಂಗಳಲ್ಲಿ ₹16,660, ಹಾಗೂ ಜುಲೈನಲ್ಲಿ 233 ಆರ್ಡರ್‌ಗಳನ್ನು ಪೂರ್ಣಗೊಳಿಸಿ ₹14,222 ಗಳಿಸಿದ್ದೆ ಎಂದು ಬರೆದುಕೊಂಡಿದ್ದಾರೆ.

‘ಡೆಲಿವರಿ ಬಾಯ್‌ ಕೆಲಸ ಸುಲಭವಲ್ಲ. ಇಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಗಂಟೆಗಟ್ಟಲೇ ಕಾಯುವಿಕೆ, ಇಂಧನ ವೆಚ್ಚಗಳು, ಫುಡ್‌ ಡೆಲಿವರಿ ವೇದಿಕೆಗಳ ನಿಯಮಗಳು, ಗ್ರಾಹಕರ ಸಮಸ್ಯೆ ಹಾಗೂ ರೆಸ್ಟೋರೆಂಟ್‌ಗಳ ಕಾಯಿಸುವಿಕೆ ಒತ್ತಡವನ್ನು ಉಂಟು ಮಾಡುತ್ತವೆ’ ಎಂದು ವಿದ್ಯಾರ್ಥಿ ಬರೆದುಕೊಂಡಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿಯ ಅನುಭವದ ಕುರಿತು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ‘ ನಿಜಕ್ಕೂ ಡೆಲಿವರಿ ಬಾಯ್‌ಗಳ ಕಷ್ಟಗಳನ್ನು ಹೇಳಿದ್ದೀರಾ’ ಎಂದು ಕಮೆಂಟ್ ಹಾಕಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ