
Anupama: ಆ ಸಂಬಂಧದಿಂದ ನಾನು ಖಿನ್ನತೆಗೆ ಒಳಗಾಗಿದ್ದೆ: ಕೊನೆಗೂ ಬ್ರೇಕ್‌ಅಪ್ ಬಗ್ಗೆ ಮೌನ ಮುರಿದ ನಟಿ ಅನುಪಮಾ ಪರಮೇಶ್ವರನ್
Anupama Parameshwar: ನಾನು ತೀವ್ರತೆ ಖಿನ್ನತೆಗೆ ಒಳಗಾಗಿದ್ದೆ, ದಕ್ಷಿಣ ಭಾರತದ ಪ್ರಮುಖ ನಟನೊಂದಿಗೆ ಎಂಗೇಜ್ಮೆಂಟ್ ಮುಂದೂಡಿದೆ ಎಂದು ನಟಿ ಅನುಪಮಾ ಪರಮೇಶ್ವರ್ (Anupama Parameshwar) ಅವರು ಹೇಳಿದ್ದಾರೆ. ಆ ಸಂಬಂಧದಿಂದ ನಾನು ತೀವ್ರ ಸಂಕಷ್ಟ ಅನುಭವಿಸಿದೆ. ಕಳೆದ ಎರಡು ವರ್ಷಗಳಿಂದಲೂ ನಾನು ತೀವ್ರ ನೋವು ಅನುಭವಿಸಿದ್ದೇನೆ. ಆ ವ್ಯಕ್ತಿಯೊಂದಿಗೆ ಸಂಬಂಧದಲ್ಲಿ ಇದ್ದಾಗ ನಾನು ಪಿರಿಯಡ್ಸ್ (Periods) ಬಗ್ಗೆ ಮುಜುಗರಕ್ಕೆ ಒಳಗಾಗಿದ್ದೇನೆ. ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾಯಿತು.
ಒಂದು ಕಾಲದಲ್ಲಿ ನಾನು 11 ಮಕ್ಕಳು ಬೇಕು ಎಂದು ಅಂದುಕೊಳ್ಳುತ್ತಿದ್ದೆ. ಆದರೆ ನಾನು ಈಗ ಇರುವ ಪರಿಸ್ಥಿತಿಯಲ್ಲಿ ಮಗುವೇ ಬೇಡ ಎನ್ನುವಂತ ಮನಸ್ಥಿಗೆ ಬಂದಿದ್ದೇನೆ. ಕಳೆದ ಎರಡು ವರ್ಷಗಳಲ್ಲಿ ನಾನು ನಾನಗಿಯೇ ಇರಲಿಲ್ಲ, ಕೆಲಸದ ವಿಚಾರದಲ್ಲಿ ನಾನು ತುಂಬಾ ಕಟ್ಟುನಿಟ್ಟು, ಜವಾಬ್ದಾರಿಯುತವಾಗಿ ಕೆಲಸ ಮಾಡುವುದು ಹಾಗೂ ಜವಾಬ್ದಾರಿಯುತವಾಗಿ ಇರುವುದನ್ನು ರೂಢಿಸಿಕೊಂಡಿರುವವಳು ನಾನು. ಆದರೆ ಕಳೆದ ಎರಡು ವರ್ಷಗಳ ಅವಧಿಯಲ್ಲಿ ನಾನು ಕೆಲಸದಲ್ಲೂ ಏಕಾಗ್ರತೆ (Concentration)ಯಿಂದ ಇರಲು ಸಾಧ್ಯವಾಗಲಿಲ್ಲ ಎಂದು ಅನುಪಮಾ ಅವರು ಹೇಳಿಕೊಂಡಿದ್ದಾರೆ.
ತಮಿಳಿನ ಪ್ರಖ್ಯಾತ ನಟ ವಿಕ್ರಮ್ ಅವರ ಪುತ್ರ ಹಾಗೂ ನಟ ಧ್ರುವ್ ವಿಕ್ರಮ್ ಅವರೊಂದಿಗೆ ನಟಿ ಅನುಪಮಾ ಪರಮೇಶ್ವರ್ ಅವರು ಡೇಟಿಂಗ್ ಮಾಡುತ್ತಿದ್ದರು ಎನ್ನುವ ವಿಷಯವು ಸೋಶಿಯಲ್ ಮೀಡಿಯಾದಲ್ಲಿ ಮೊದಲಿನಿಂದಲೂ ಚರ್ಚೆ ಆಗುತ್ತಿತ್ತು. ಇದೀಗ ಅನುಪಮಾ ಪರಮೇಶ್ವರ್ ಅವರು ಮಾತನಾಡಿರುವುದು ಸಹ ಇದೇ ವಿಚಾರದ ಬಗ್ಗೆ ಎಂದು ಹೇಳಲಾಗಿದೆ. ಆದರೆ, ಅನುಪಮಾ ಪರಮೇಶ್ವರ್ ಅವರು ನಟನ ಹೆಸರನ್ನು ಉಲ್ಲೇಖ ಮಾಡದೆಯೇ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
Anupama Parameshwar: ಅದೊಂದು ಟಾಕ್ಸಿಕ್ ರಿಲೇಷನ್‌ಶಿಪ್ ಆಗಿತ್ತು!
ಖ್ಯಾತ ನಟಿ ಅನುಪಮಾ ಪರಮೇಶ್ವರನ್ ಅವರ ತಮ್ಮ ಹಿಂದಿನ ರಿಲೇಷನ್ ಶಿಪ್ ತುಂಬಾ ಟಾಕ್ಸಿಕ್ ಆಗಿತ್ತು ಅಂತ ಹೇಳಿದ್ದಾರೆ. ಅನುಪಮಾ ಅವರು ನಟ ಧ್ರುವ ವಿಕ್ರಮ್ ಅವರೊಂದಿಗೆ ಸಂಬಂಧ ಹೊಂದಿದ್ದರು ಎಂಬ ವದಂತಿ ಇತ್ತು. ಅಲ್ಲದೆ ಎರಡೂ ಕುಟುಂಬಗಳಿಗೆ ಈ ಸಂಬಂಧದ ಬಗ್ಗೆ ತಿಳಿದಿದೆ ಎಂದು ಬಹಿರಂಗಪಡಿಸಿರುವ ಅವರು, ಡೇಟಿಂಗ್ ಮಾಡಿದ ಮೂರು ತಿಂಗಳೊಳಗೆ ಅವರ ಸಂಗಾತಿ ತಮ್ಮ ನಿಶ್ಚಿತಾರ್ಥದ ಬಗ್ಗೆ ಮಾತನಾಡಲು ಪ್ರಾರಂಭಿಸಿದರು ಎಂದಿದ್ದಾರೆ. ಆದರೆ ಮೂರೇ ತಿಂಗಳಿನಲ್ಲಿ ಎಂಗೇಜ್ಮೆಂಟ್ ಮಾಡಿಕೊಳ್ಳುವುದು ಆತುರದ ನಿರ್ಧಾರ ಎಂದು ನನಗೆ ಅನಿಸಿತು.
ಆದಾಗ್ಯೂ ಇದು ತುಂಬಾ ಅವಸರದ ನಿರ್ಧಾರವೆನ್ನುವ ಕಾರಣಕ್ಕೆ ಅದನ್ನು ಮುಂದೂಡುತ್ತಲೇ ಇದ್ದೆ. ಮೊದಲ ಎರಡು ಡೇಟ್‌ಗಳ ನಂತರ, ಅವರು ತಮ್ಮ ಕುಟುಂಬದವರಿಗೆ ಪರಿಚಯಿಸಿದರು ಎಂದು ಅನುಪಮಾ ಹೇಳಿದ್ದಾರೆ. ಮೂರು ತಿಂಗಳೊಳಗೆ ನಿಶ್ಚಿತಾರ್ಥದ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. ಇದು ಪ್ರೀತಿ ಅಲ್ಲ ಎಂದು ನನಗೆ ತಿಳಿದಿದ್ದರಿಂದ ನಾನು ಆ ನಿಶ್ಚಿತಾರ್ಥವನ್ನು ನಿರಂತರವಾಗಿ ವಿಳಂಬ ಮಾಡುತ್ತಿದ್ದೆ. ನಟನೆ ಮಾಡುವುದನ್ನು ಬಿಡುವಂತೆಯೂ ಅವರು ನನ್ನನ್ನು ಒತ್ತಾಯಿಸಿದರು ಎಂದು ಅವರು ನಿರಾಶೆ ವ್ಯಕ್ತಪಡಿಸಿದ್ದಾರೆ. ಧನ್ಯಾ ವರ್ಮಾ ಎನ್ನುವವರಿಗೆ ನೀಡಿದ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಅನುಪಮಾ ಪರಮೇಶ್ವರನ್ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಆದರೆ ಎಲ್ಲಿಯೂ ಆ ಹುಡುಗ ಯಾರು ಅಥವಾ ನಟನ ಹೆಸರೇನು ಅಂತ ಹೇಳಿಲ್ಲ.
ನಟಿ ಮುಂದುವರಿದು ಅವರು ಕೇಳಿದಾಗಲೆಲ್ಲಾ, ನಾನು ಹೇಳುತ್ತಿದ್ದೆ. ಆ ವ್ಯಕ್ತಿ ತುಂಬಾ ಚಿಕ್ಕವನು ಎಂದು ನನಗೆ ಅನಿಸುತ್ತದೆ; ನಮಗೆ ಸ್ವಲ್ಪ ಹೆಚ್ಚು ಸಮಯ ಬೇಕು ಮುಂದಿನ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಇದು ಸರಿಯಾದ ಸಮಯವಲ್ಲ. ಮಕ್ಕಳನ್ನು ಹೊಂದುವ ವಿಷಯದಲ್ಲಿ, ನಾವು (Egg Freezing) ಬೇರೆ ಆಯ್ಕೆಗಳನ್ನು ಬೇಕಾದರೆ ಪರಿಗಣಿಸಬಹುದು ಎಂದಿದ್ದೆ. ಅಲ್ಲದೆ ಈ ಸಂಬಂಧದಲ್ಲಿ ನಾನು ನಿಶ್ಚಿತಾರ್ಥವನ್ನು ಹಲವು ಬಾರಿ ಮುಂದೂಡಿದೆ ಎಂದೂ ಅನುಪಮಾ ಅವರು ಹೇಳಿದ್ದಾರೆ.
ನಾವಿಬ್ಬರು ಮದುವೆಯಾಗಿದ್ದರೆ ಅದು ಡಿವೋರ್ಸ್‌ನಲ್ಲಿ ಅಂತ್ಯವಾಗುತ್ತಿತ್ತು. "ನಾರ್ಸಿಸಿಸ್ಟಿಕ್ ನಿಂದನೆ" (Narcissistic abuse) ಸಂಬಂಧದಿಂದ ನಾನು ತುಂಬಾ ಸಂಕಷ್ಟ ಅನುಭವಿಸಿದ್ದೇನೆ ಅಂತಲೂ ಅವರು ತಮ್ಮ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.