ತುಂಗಭದ್ರಾಕ್ಕೆ 57 ಸಾವಿರ ಕ್ಯೂಸೆಕ್‌ ಒಳಹರಿವು

ತುಂಗಭದ್ರಾಕ್ಕೆ 57 ಸಾವಿರ ಕ್ಯೂಸೆಕ್‌ ಒಳಹರಿವು

ತುಂಗಭದ್ರಾಕ್ಕೆ 57 ಸಾವಿರ ಕ್ಯೂಸೆಕ್‌ ಒಳಹರಿವು

ಹೊಸಪೇಟೆ (ವಿಜಯನಗರ): ಮಲೆನಾಡು ಭಾಗದಲ್ಲಿ ಉತ್ತಮವಾಗಿ ಮಳೆ ಆಗುತ್ತಿರುವುದರಿಂದ ತುಂಗಭದ್ರಾ ಜಲಾಶಯದ ಒಳಹರಿವು ಪ್ರಮಾಣ 57,785 ಕ್ಯೂಸೆಕ್‌ಗೆ ಏರಿಕೆಯಾಗಿದ್ದು, ಜಲಾಶಯದ ನೀರಿನ ಸಂಗ್ರಹ 44.19 ಟಿಎಂಸಿ ಅಡಿಗೆ ಹೆಚ್ಚಳವಾಗಿದೆ.

ಗರಿಷ್ಠ 1,633 ಅಡಿ ನೀರಿನ ಮಟ್ಟ ಇರುವ ತುಂಗಭದ್ರಾ ಅಣೆಕಟ್ಟೆಯಲ್ಲಿ ಸದ್ಯ 1,613.16 ಅಡಿಯಷ್ಟು ಮಟ್ಟದಲ್ಲಿ ನೀರಿದೆ. ಒಳಹರಿವು ಉತ್ತಮವಾಗಿ ಆಗುತ್ತಿರುವ ಕಾರಣ ಪ್ರತಿದಿನ 4ರಿಂದ 5 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗುತ್ತಿದೆ. ಜಲಾಶಯದ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯ 105.78 ಟಿಎಂಸಿ ಅಡಿ.

ಜಲಾಶಯದಿಂದ ಕಾಲುವೆಗಳಿಗೆ ಹರಿಸುವ ನೀರಿನ ಪ್ರಮಾಣ ಎರಡು ದಿನದಿಂದ ಕಡಿಮೆಯಾಗಿದೆ. ಸದ್ಯ 1,390 ಕ್ಯೂಸೆಕ್‌ನಷ್ಟು ನೀರನ್ನು ಮಾತ್ರ ಕಾಲುವೆಗಳಿಗೆ ಹರಿಸಲಾಗುತ್ತಿದೆ. ಆಂಧ್ರ ಪ್ರದೇಶದಿಂದ ನೀರಿನ ಬೇಡಿಕೆಗೆ ಅನುಗುಣವಾಗಿ ಬಲದಂಡೆಯ ಮೇಲ್ಮಟ್ಟದ (ಎಚ್‌ಎಲ್‌ಸಿ) ಮತ್ತು ಕೆಳಮಟ್ಟದ (ಎಲ್‌ಎಲ್‌ಸಿ) ಕಾಲುವೆಗಳಲ್ಲಿ ಹರಿಸುವ ನೀರಿನ ಪ್ರಮಾಣವೂ ನಿರ್ಧಾರವಾಗಲಿದೆ.

ಮಳೆ ಇಲ್ಲ: ಹೊಸಪೇಟೆ, ಮರಿಯಮ್ಮನಹಳ್ಳಿ ಭಾಗದಲ್ಲಿ ಭಾನುವಾರ ಸಂಜೆ ಸ್ವಲ್ಪ  ಮಳೆಯಾಗಿತ್ತು. ಉಳಿದಂತೆ ಎಲ್ಲೂ ಮಳೆ ಇಲ್ಲ. ಸೋಮವಾರ ಬೆಳಿಗ್ಗೆ ಚದುರಿದಂತೆ ಮೋಡ ಇದ್ದು, ಬಿಸಿಲು ಸಹ ಇದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ