ನೇಪಾಳ ಪ್ರವಾಸದಲ್ಲಿ ಸಿಲುಕಿದ್ದ 54 ಕನ್ನಡಿಗರು ಬೆಂಗಳೂರಿಗೆ ವಾಪಸ್

ನೇಪಾಳ ಪ್ರವಾಸದಲ್ಲಿ ಸಿಲುಕಿದ್ದ 54 ಕನ್ನಡಿಗರು ಬೆಂಗಳೂರಿಗೆ ವಾಪಸ್

ನೇಪಾಳ ಪ್ರವಾಸದಲ್ಲಿ ಸಿಲುಕಿದ್ದ 54 ಕನ್ನಡಿಗರು ಬೆಂಗಳೂರಿಗೆ ವಾಪಸ್

ಬೆಂಗಳೂರು: ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸಿಲುಕಿದ್ದ 54 ಕನ್ನಡಿಗರು ಶನಿವಾರ ರಾತ್ರಿ ಸುರಕ್ಷಿತವಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ.

ನೇಪಾಳದಿಂದ ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ಆಗಮಿಸಿದ ಅವರು, ಅಲ್ಲಿಂದ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿದ್ದಾರೆ.

ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು, ನಾವು ಬದುಕಿರುವುದೇ ಪವಾಡ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು, ಹಾವೇರಿ, ಶಿವಮೊಗ್ಗ, ಕಡೂರು ಸೇರಿದಂತೆ ರಾಜ್ಯದ ವಿವಿಧೆಡೆಯ ಪ್ರವಾಸಿಗರು ಆಗಸ್ಟ್ 23ರಂದು ನೇಪಾಳಕ್ಕೆ ತೆರಳಿದ್ದರು. ಆಗಸ್ಟ್ 26ರಂದು ಸಂಭವಿಸಿದ ದಿಢೀರ್ ಪ್ರವಾಹದಲ್ಲಿ ಸೇತುವೆಗಳು, ರಸ್ತೆಗಳು ಕೊಚ್ಚಿಹೋಗಿದ್ದರಿಂದ ಅವರು ಸಂಕಷ್ಟಕ್ಕೆ ಸಿಲುಕಿದ್ದರು. ಹೊರಜಗತ್ರಿನ ಸಂಪರ್ಕ ಸಹ ಕಡಿತಗೊಂಡಿದ್ದರಿಂದ ಅವರು ತೀವ್ರ ಪರಿತಪಿಸುವಂತಾಗಿತ್ತು.

ತಮ್ಮ ಅನುಭವ ಹಂಚಿಕೊಂಡ ಹಾವೇರಿ ಜಿಲ್ಲೆಯ ನಿವಾಸಿ ಶಿವನಗೌಡ ಚಿಲೋರು, ಮುಕ್ತಿನಾಥದಿಂದ ಹಿಂದಿರುಗುವಾಗ ಕೂದಲೆಳೆ ಅಂತರದಲ್ಲಿ ಪ್ರವಾಹದಿಂದ ಪಾರಾದೆವು ಎಂದು ತಿಳಿಸಿದ್ದಾರೆ.

ಬದುಕಿರುವುದು ಒಂದು ಪವಾಡವೇ ಸರಿ

‘ನಾವು ಬದುಕಿರುವುದು ಒಂದು ಪವಾಡವೇ ಸರಿ. ಆ ಭೀಕರ ಪ್ರವಾಹ ನೋಡಿದ ಮೇಲೆ ನಾವು ಬದುಕುಳಿಯುತ್ತೇವೆಯಾ ಎಂಬ ಆತಂಕ ಮನೆ ಮಾಡಿತ್ತು. ನಾವು ಪ್ರಯಾಣಿಸುತ್ತಿದ್ದ ಮಾರ್ಗ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿತ್ತು, ರಸ್ತೆಗಳು ಕುಸಿದಿದ್ದನ್ನು ನಾವು ಕಣ್ಣಾರೆ ಕಂಡೆವು’ ಎಂದು ಅವರು ಹೇಳಿದ್ದಾರೆ.

ನಾವು ಒಂದು ಸ್ಥಳದಲ್ಲಿ ಚಹಾ ಕುಡಿಯಲು 30 ನಿಮಿಷಗಳ ಕಾಲ ನಿಂತಿದ್ದೆವು. ಆಗ ನಾವು ಮುಂದೆ ಪ್ರಯಾಣಿಸಬೇಕಿದ್ದ ರಸ್ತೆ ಪ್ರವಾಹದಲ್ಲಿ ಮುಳುಗಿದೆ ಎಂಬ ಮಾಹಿತಿ ಸಿಕ್ಕಿತು. ಸ್ವಲ್ಪದರಲ್ಲೇ ನಾವು ಪಾರಾದೆವು. ದೂರವಾಣಿ ಸಂಪರ್ಕ ಕಡಿತಗೊಂಡವು. ನಾವು ಕೂಡಲೇ ಬೆಂಗಳೂರಿಗೆ ವಾಪಸ್ ಆಗುವ ನಿರ್ಧಾರ ಮಾಡಿದೆವು. ಕಂಪನಿ ನಮಗೆ ವಿಮಾನದ ಟಿಕೆಟ್ ಬುಕ್ ಮಾಡಿಕೊಟ್ಟಿತು ಎಂದಿದ್ದಾರೆ.

ಭೂಕುಸಿತದಿಂದ ರಸ್ತೆಗಳು ಹಾನಿಗೊಳಗಾಗಿದ್ದರಿಂದ ಭೂಮಾರ್ಗದ ಮೂಲಕ ಮರಳುವುದು ಕಷ್ಟವಾಗಿತ್ತು. ಹಾಗಾಗಿ, ಏರ್‌ಲಿಫ್ಟ್‌ಗಾಗಿ ನಾವು ಮನವಿ ಮಾಡಿದೆವು ಎಂದಿದ್ದಾರೆ.

ಟಿಬೆಟ್‌ನ ಡಾರ್ಚೆನ್‌ನಲ್ಲಿ ಈಗಲೂ ಹಲವು ಪ್ರವಾಸಿಗರು ಸಿಲುಕಿದ್ದು, ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅವರ ಸ್ಥಳಾಂತರಕ್ಕೆ ಪ್ರಯತ್ನ ನಡೆಸಿದ್ದಾರೆ. ಪ್ರವಾಹದ ಪ್ರದೇಶದಿಂದ ಅವರನ್ನು ಸ್ಥಳಾಂತರಿಸಲಾಗುತ್ತಿದ್ದು, ಕಠ್ಮಂಡುವಿಗೆ ತಲುಪಲು ಅವರಿಗೆ 12-15 ಗಂಟೆಗಳು ತೆಗೆದುಕೊಳ್ಳುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.

ಸರ್ಕಾರವು ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಪ್ರವಾಹದಲ್ಲಿ ಸಿಲುಕಿರುವವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಶಿವಕುಮಾರ್ ನಮಗೆ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ