ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಸಂದೇಶ: ₹50 ಸಾವಿರ ಕಳೆದುಕೊಂಡ ಉಪನಿರ್ದೇಶಕ

ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಸಂದೇಶ: ₹50 ಸಾವಿರ ಕಳೆದುಕೊಂಡ ಉಪನಿರ್ದೇಶಕ

ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಸಂದೇಶ: ₹50 ಸಾವಿರ ಕಳೆದುಕೊಂಡ ಉಪನಿರ್ದೇಶಕ

ಚಿಕ್ಕಮಗಳೂರು: ಜಿಲ್ಲಾಧಿಕಾರಿ ಹೆಸರಿನಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ಚಾಟ್ ಮಾಡಿದ ವ್ಯಕ್ತಿಯನ್ನು ಜಿಲ್ಲಾಧಿಕಾರಿ ಎಂದು ನಂಬಿದ ಆಹಾರ ಇಲಾಖೆ ಉಪನಿರ್ದೇಶಕ ಯೋಗಾನಂದ ಅವರು, ಬ್ಯಾಂಕ್ ಖಾತೆಯೊಂದಕ್ಕೆ ₹50 ಸಾವಿರ ಪಾವತಿಸಿ ಕಳೆದುಕೊಂಡಿದ್ದಾರೆ. ಎರಡು ದಿನಗಳ ನಂತರ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

ಆ.8ರಂದು ಮಧ್ಯಾಹ್ನ 1.22ರ ಸುಮಾರಿನಲ್ಲಿ ಯೋಗಾನಂದ ಅವರ ಮೊಬೈಲ್ ದೂರವಾಣಿ ಸಂಖ್ಯೆಗೆ ವಾಟ್ಸ್‌ಆ್ಯಪ್ ಮೆಸೇಜ್ ಬಂದಿದ್ದು, ಅದರ ಡಿಪಿಯಲ್ಲಿ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅವರ ಹೆಸರು ಮತ್ತು ಭಾವಚಿತ್ರ ಇತ್ತು.

‘ಹಲೊ ಯೋಗಾನಂದ್ ಹೌ ಆರ್ ಯು’ ಎಂಬ ಸಂದೇಶದಿಂದ ಆರಂಭವಾಗಿ ‘ನನ್ನ ಬ್ಯಾಂಕಿನ ಆನ್‌ಲೈನ್ ವ್ಯವಹಾರ ಸಮಸ್ಯೆಯಾಗಿದ್ದು, ನಾನು ಕಳುಹಿಸುವ ಆಕೌಂಟ್ ನಂಬರ್‌ಗೆ ₹50 ಸಾವಿರ ಕಳುಹಿಸಿ. ನಾನು ನಂತರ ಅದನ್ನು ಮರಳಿ ನೀಡುವೆ’ ಎಂಬ ಸಂದೇಶ ಬಂದಿದೆ.

ಅದಕ್ಕೆ ಒಪ್ಪಿದ ಯೋಗಾನಂದ ಅವರು ಹೆಮಣ್ಣಗೌಡ ಗುಡ್ಡಣ್ಣಗೌಡ ಪಾಟೀಲ ಎಂಬ ಹೆಸರಿನ ಅಕೌಂಟ್ ನಂಬರ್‌ಗೆ ₹50 ಸಾವಿರ ನಗದನ್ನು ಎಡಿಎಂನಲ್ಲಿನ ಡೆಪಾಸಿಟರ್ ಮೂಲಕ ಪಾವತಿಸಿದ್ದಾರೆ. ಬಳಿಕ ಅನುಮಾನಗೊಂಡು ಜಿಲ್ಲಾಧಿಕಾರಿ ಅವರ ಅಪ್ತ ಸಹಾಯಕರಿಗೆ ಕರೆ ಮಾಡಿ ಕೇಳಿದ್ದಾರೆ.

‘ಜಿಲ್ಲಾಧಿಕಾರಿ ಅವರ ಹೆಸರಿನಲ್ಲಿ ಈ ರೀತಿ ಹಲವರಿಗೆ ಮೆಸೇಜ್‌ ಬಂದಿವೆ. ಪ್ರತಿಕ್ರಿಯೆ ನೀಡುವುದು ಬೇಡ’ ಎಂದು ಅವರು ತಿಳಿಸಿದ್ದಾರೆ. ನಕಲಿ ಖಾತೆ ಎಂಬುದು ಗೊತ್ತಾದ ಬಳಿಕ ಯೋಗಾನಂದ ಅವರು ಸೈಬರ್ ಠಾಣೆಗೆ ಸೋಮವಾರ ದೂರು ನೀಡಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ