ವಿಜಯಪುರ: ಕಸಾಯಿಖಾನೆಗೆ ಸಾಗಿಸುತ್ತಿದ್ದ 4 ಗೋವುಗಳ ರಕ್ಷಣೆ

ವಿಜಯಪುರ: ಕಸಾಯಿಖಾನೆಗೆ ಸಾಗಿಸುತ್ತಿದ್ದ 4 ಗೋವುಗಳ ರಕ್ಷಣೆ

ವಿಜಯಪುರ: ಕಸಾಯಿಖಾನೆಗೆ ಸಾಗಿಸುತ್ತಿದ್ದ 4 ಗೋವುಗಳ ರಕ್ಷಣೆ

ಚಡಚಣ: ಕಸಾಯಿಖಾನೆಗೆ ರವಾನಿಸುತ್ತಿದ್ದ ನಾಲ್ಕು ಗೋವುಗಳನ್ನು ಗ್ರಾಮಸ್ಥರು ರಕ್ಷಿಸಿದ ಘಟನೆ ಬುಧವಾರ ರಾತ್ರಿ ತದ್ದೇವಾಡಿ ಗ್ರಾಮದಲ್ಲಿ ಜರುಗಿದೆ.

ಮರಗೂರ ಗ್ರಾಮದಿಂದ ತದ್ದೇವಾಡಿ ಗ್ರಾಮದ ಮೂಲಕ ಟಂಟಂ ವಾಹನದಲ್ಲಿ ವಿಜಯಪುರಕ್ಕೆ ಸಾಗಿಸಲು ಯತ್ನಿಸುತ್ತಿದ್ದಾಗ, ಗ್ರಾಮಸ್ಥರು ಸಂಶಯ ಬಂದು ವಾಹನವನ್ನು ಪರಿಶೀಲಿಸಿದಾಗ ಅದರಲ್ಲಿ 4 ಹಸುಗಳನ್ನು ಕಸಾಯಿಖಾನೆಗೆ ರವಾನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕೂಡಲೇ ಅವರನ್ನು ತಡೆ ಹಿಡಿದು ಝಳಕಿ ಪೊಲೀಸ್ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದಾಗ ಸ್ಥಳಕ್ಕೆ ಝಳಕಿ ಪೊಲೀಸರು ಧಾವಿಸಿ, ಹಸುಗಳನ್ನು ಹಾಗೂ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ರಾಜ್ಯ ರೈತೋದಯ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ನಾಗನಾಥಗೌಡ ಬಿರಾದಾರ, ಇಂತಹ ದುಷ್ಕರ್ಮಿಗಳ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರಾಯಗೊಂಡ (ಮುತ್ತಣ್ಣಗೌಡ) ಬಿರಾದಾರ, ತುಕಾರಾಮ ವಡಗಾಂವ, ಬಾಪುರಾಯ ಬಿರಾದಾರ, ಸೋಮಶೇಖರ ಬಿರಾದಾರ, ಸುನೀಲ ಗೌಡನೂರ, ಬಸಣ್ಣ ನಾಯಕೋಡಿ, ದುಂಡಪ್ಪ ಜೇವೂರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260807-26-1412942012

Post a Comment

If u have any queries, Please let us know

Previous Post Next Post