ಬೆಂಗಳೂರಲ್ಲಿ ಕಂಠಮಟ ಕುಡಿದ ಟೆಕ್ಕಿಯ ಪುಂಡಾಟ! 45 ನಿಮಿಷ ಏರ್ ಗನ್‌ನಿಂದ ಫೈರಿಂಗ್, ಬೆಚ್ಚಿಬಿದ್ದ ಸ್ಥಳೀಯರು

ಬೆಂಗಳೂರಲ್ಲಿ ಕಂಠಮಟ ಕುಡಿದ ಟೆಕ್ಕಿಯ ಪುಂಡಾಟ! 45 ನಿಮಿಷ ಏರ್ ಗನ್‌ನಿಂದ ಫೈರಿಂಗ್, ಬೆಚ್ಚಿಬಿದ್ದ ಸ್ಥಳೀಯರು

ಬೆಂಗಳೂರಲ್ಲಿ ಕಂಠಮಟ ಕುಡಿದ ಟೆಕ್ಕಿಯ ಪುಂಡಾಟ! 45 ನಿಮಿಷ ಏರ್ ಗನ್‌ನಿಂದ ಫೈರಿಂಗ್, ಬೆಚ್ಚಿಬಿದ್ದ ಸ್ಥಳೀಯರು

ಬೆಂಗಳೂರು: ಕಾನೂನಿನ ಭಯವಿಲ್ಲದೇ ರಾಜಧಾನಿ ಬೆಂಗಳೂರಿನಲ್ಲಿ ಒಂದಲ್ಲಾ ಒಂದು ಕಡೆ ಪುಂಡಾಡಿಕೆ ಕಂಡು ಬರುತ್ತಲೇ ಇದೆ. ನೆನ್ನೆ ಬುಧವಾರ ರಾತ್ರಿ ಆನೇಕಲ್ ಭಾಗದ ಸೂರ್ಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಟೆಕ್ಕಿಯೊಬ್ಬ ಕಂಠ ಪೂರ್ತಿ ಕುಡಿದು ಏರ್‍‌ ಗನ್‌ನಿಂದ ಫೈರ್ ಮಾಡಿ ಪುಂಡಾಟಿಕೆ ಮೆರೆದ ಘಟನೆ ನಡೆದಿದೆ. ಘಟನೆ ಕುರಿತು ಪೊಲೀಸರು ಆತನನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ.

ಉತ್ತರ ಪ್ರದೇಶದ ಲಕ್ನೋ ಮೂಲದ ಅನುರಾಗ್ ತಿವಾರಿ (40) ಎಂಬಾತನಿಂದ ಫೈರಿಂಗ್ ನಡೆದಿದೆ. ಸುಮಾರು 45 ನಿಮಿಷಗಳ ಕಾಲ ಫೈರಿಂಗ್ ಮಾಡಿದ್ದ ಈತನಿಂದ ಸ್ಥಳದಲ್ಲಿ ರಾತ್ರಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಟೆಕ್ಕಿಯಿಂದ ಏರ್ ಗನ್ ಮತ್ತು ಬಾಲ್ಸ್‌ಗಳನ್ನು ವಶ ಪಡೆದಿದ್ದು, ಪ್ರಕರಣ ದಾಖಲಾಗಿದೆ. ಘಟನೆ ಹಿಂದಿನ ಉದ್ದೇಶ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಫೋನ್‌ನಲ್ಲಿ ಜೋರು ಧ್ವನಿಯಲ್ಲಿ ಟೆಕ್ಕಿ ಟಾಕ್

ಯುಪಿ ಮೂಲದ ವ್ಯಕ್ತಿ ಕಳೆದ ನಗರದ ವೈಟ್ ಫೀಲ್ಡ್ ನ ಖಾಸಗಿ ಕಂಪನಿಯಲ್ಲಿ ಐಟಿ ಕೆಲಸ ಮಾಡುತ್ತಿದ್ದಾರೆ. ಎಂಟು ತಿಂಗಳಿನಿಂದ ಆನೇಕಲ್ ಭಾಗದ ಬಂಡಾಪುರ ಸಮೀಪದ ಸಿಪಾನಿ ಅಪಾರ್ಟ್ಮೆಂಟ್ ಅಪಾರ್ಟ್ಮೆಂಟ್‌ ಬ್ಲೀಸ್-1ರ B304 ಪ್ಲಾಟ್ ನಲ್ಲಿ ಬಾಡಿಗೆಗೆ ವಾಸವಿದ್ದ. ಘಟನೆಗೂ ಮುನ್ನ ಮೊಬೈಲ್‌ನಲ್ಲಿ ಯಾರೊಂದಿಗೋ ಜೋರು ಧ್ವನಿಯಲ್ಲಿ ಮಾತನಾಡುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಫೋನ್ ಸಂಭಾಷಣೆ ಮುಗಿಯುತ್ತಿದ್ದಂತೆ ಅದೇನಾಯಿತೋ ಗೊತ್ತಿಲ್ಲ. ಕಂಠಮಟ ಮದ್ಯ ಸೇವಿಸಿದ್ದ ಈತ ಏರ್ ಗನ್ ಹಿಡಿದು ಬಾಲ್ಕನಿಗೆ ಬಂದು ಕಾರುಗಳು ಹಾಗೂ ಕಾರ್ ಪಾರ್ಕಿಂಗ್ ಶೆಡ್‌ ಮೇಲೆ ನಿರಂತರವಾಗಿ 45 ನಿಮಿಷ ಫೈರಿಂಗ್ ನಡೆಸಿದ್ದಾನೆ. ಏರ್ ಗನ್ ಫೈರಿಂಗ್ ಶಬ್ದ ಕೇಳಿದ ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿ ಗಮನಿಸಿದ್ದಾರೆ.

ಕಾರುಗಳ ಗಾಜು ಪುಡಿ ಪುಡಿ, ಟೆಕ್ಕಿ ವಶಕ್ಕೆ

ಟೆಕ್ಕಿಯ ಪುಂಡಾಟಿಕೆ ನೋಡಿ ಕೂಡಲೇ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಅಷ್ಟರಲ್ಲಾಗಲೇ ಫೈರಿಂಗ್‌ಗೆ ಕಾರಿನ ಗಾಜುಗಳು ಪುಡಿ ಪುಡಿ ಆಗಿವೆ. ಘಟನೆಯಿಂದ ಕೆಲವು ಕಾರುಗಳಿಗೆ ಧಕ್ಕೆ ಉಂಟಾಗಿದೆ ಎನ್ನಲಾಗಿದೆ. ಶೆಡ್ ಮೇಲಿನ ಶೀಟ್‌ಗಳ ಮೇಲೆ ಫೈರಿಂಗ್ ಗುರುತುಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಈ ಘಟನೆಯಿಂದ ಬಂಡಾಪುರ ಬಡಾವಣೆ ನಿವಾಸಿಗಳು ಸುರಕ್ಷತೆ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರಿಗೆ ಹಾನಿ ಆಗುವ ಮುನ್ನ ಇಂಥವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ರಾತ್ರಿಯೇ ಸ್ಥಳಕ್ಕೆ ಬಂದ ಪೊಲೀಸರು ಟೆಕ್ಕಿ ಅನುರಾಗ್ ತಿವಾರಿಯನ್ನು ಬಂಧಿಸಿದ್ದಾರೆ. ಇನ್ನೂ 'ಆರ್ಮ್ಸ್ ರೂಲ್ಸ್ 2016' (Arms Rules 2016) ಅಡಿಯಲ್ಲಿ ನಿಯಮ, ನಿಬಂಧನೆಗೆ ಒಳಪಟ್ಟು ಟೆಕ್ಕಿ ಈ ಏರ್ ಗನ್ ಖರೀದಿಸಿದ್ದಾನಾ? ಅಥವಾ ಅಕ್ರಮವಾಗಿ ತಂದಿಟ್ಟುಕೊಂಡಿದ್ದ? ಎಂದು ವಿವಿಧ ಆಯಾಮಗಳಲ್ಲಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

techie engineer apartment police anekal fire

techie engineer apartment police anekal fire

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ