ಹಳ್ಳಿ ಪವರ್ ಸೀಸನ್ 2 ಆರಂಭ: ಮೊದಲ ದಿನವೇ ಸ್ಪರ್ಧಿಗಳ ನಡುವೆ ಜಿದ್ದಾಜಿದ್ದಿ

ಹಳ್ಳಿ ಪವರ್ ಸೀಸನ್ 2 ಆರಂಭ: ಮೊದಲ ದಿನವೇ ಸ್ಪರ್ಧಿಗಳ ನಡುವೆ ಜಿದ್ದಾಜಿದ್ದಿ

ಹಳ್ಳಿ ಪವರ್ ಸೀಸನ್ 2 ಆರಂಭ: ಮೊದಲ ದಿನವೇ ಸ್ಪರ್ಧಿಗಳ ನಡುವೆ ಜಿದ್ದಾಜಿದ್ದಿ

ಜೀ ಕನ್ನಡ ವಾಹಿನಿಯಲ್ಲಿ ‘ಹಳ್ಳಿ ಪವರ್ ಸೀಸನ್ 2’ ರಿಯಾಲಿಟಿ ಶೋ ಆರಂಭವಾಗುತ್ತಿದೆ. ಈ ಬಾರಿಯೂ ನಟ ಅಕುಲ್ ಬಾಲಾಜಿ ಅವರು ನಿರೂಪಣೆಯ ಜವಬ್ದಾರಿ ವಹಿಸಿಕೊಂಡಿದ್ದಾರೆ. ಈಗಾಗಲೇ ಮಾಡ್ರನ್ ಕಾರ್ಪೆಟ್‌ನಿಂದ ಹಳ್ಳಿ ಅಂಗಳಕ್ಕೆ 16 ಚೆಲುವೆಯರು ಕಾಲಿಟ್ಟಿದ್ದಾರೆ.

ಜೀ ಕನ್ನಡ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಪ್ರೋಮೊವೊಂದನ್ನು ಹಂಚಿಕೊಂಡಿದೆ. ಅದರಲ್ಲಿ ನಿರೂಪಕ ಅಕುಲ್‌ ಬಾಲಾನಿ ಅವರು ಒಟ್ಟು 16 ಸ್ಪರ್ಧಿಗಳನ್ನು ವೇದಿಕೆಗೆ ಬರಮಾಡಿಕೊಂಡಿದ್ದಾರೆ. ಕಾರ್ಯಕ್ರಮ ಶುರುವಾದ ಮೊದಲ ದಿನವೇ ಸ್ಪರ್ಧಿಗಳು ನಡುವೆ ಜಿದ್ದಾಜಿದ್ದಿ ಶುರುವಾಗಿದೆ. ಈ 16 ಮಂದಿ ಸಿಟಿ ಹುಡುಗಿಯರಿಗೆ ಹಳ್ಳಿಗರು ಬದುಕು ಕಲಿಸೋಕೆ ಸಿದ್ಧರಾಗಿದ್ದಾರೆ.

ಇದೇ ಆಗಸ್ಟ್ 8ರಿಂದ ಶನಿವಾರ ಹಾಗೂ ಭಾನು ರಾತ್ರಿ 9ಕ್ಕೆ ಕಾರ್ಯಕ್ರಮ ಪ್ರಸಾರವಾಗಲಿದ್ದು, ಆ. 9ರಿಂದ ಪ್ರತಿನಿತ್ಯ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9:30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಹಳ್ಳಿ ಪವರ್ ಸೀಸನ್‌ 1ರಲ್ಲಿ ನಗರದಲ್ಲಿ ಬೆಳೆದ ಯುವತಿಯರು ಸಿಟಿ ಜೀವನ ತ್ಯಜಿಸಿ ಹಳ್ಳಿ ಬದುಕು ರೂಢಿಸಿಕೊಳ್ಳಬೇಕಿತ್ತು. ಇಡೀ ಸೀಸನ್‌ನಲ್ಲಿ ಸ್ಪರ್ಧಿಗಳು ಹಳ್ಳಿ ಜೀವನದ ನಿತ್ಯದ ಕೆಲಸ ಹಾಗೂ ಟಾಸ್ಕ್‌ಗಳನ್ನು ಮಾಡಿ ಅಂಕ ಗಳಿಸುವುದು ಈ ಕಾರ್ಯಕ್ರಮದ ನಿಯಮವಾಗಿತ್ತು. ವ್ಯವಸಾಯ, ಜಾನುವಾರುಗಳ ಪೋಷಣೆ ಸೇರಿದಂತೆ ಹಳ್ಳಿ ಜನರು ಮಾಡುವ ಪ್ರತಿಯೊಂದು ಕೆಲಸವನ್ನು ಟಾಸ್ಕ್ ರೂಪದಲ್ಲಿ 'ಹಳ್ಳಿ ಪವರ್' ಸ್ಪರ್ಧಿಗಳಿಗೆ ನೀಡಲಾಗಿತ್ತು.

ರಗಡ್ ರಶ್ಮಿ ಅವರು ಹಳ್ಳಿ ಪವರ್ ಸೀಸನ್ 1ರ ವಿಜೇತರಾಗಿ ಹೊರಹೊಮ್ಮಿದ್ದರು. ಘಾಟಿ ಗಾನವಿ ಅವರು ಮೊದಲ ರನ್ನರ್ ಅಪ್ ಆಗಿದ್ದರು. ಸದ್ಯ ಈ ಬಾರಿಯ ಸೀಸನ್ 2ಗೆ ಯಾರೆಲ್ಲಾ ಯುವತಿಯರು ಬಂದಿದ್ದಾರೆ ಎಂಬುವುದು ಆಗಸ್ಟ್ 8ರಂದು ರಿವೀಲ್‌ ಆಗಲಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ