24 ಆಗಸ್ಟ್ 2026: ಈ ದಿನದ ಪ್ರಮುಖ 10 ಸುದ್ದಿಗಳು...

24 ಆಗಸ್ಟ್ 2026: ಈ ದಿನದ ಪ್ರಮುಖ 10 ಸುದ್ದಿಗಳು...

24 ಆಗಸ್ಟ್ 2026: ಈ ದಿನದ ಪ್ರಮುಖ 10 ಸುದ್ದಿಗಳು...

ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ದೆಹಲಿಯಲ್ಲಿ ಕಾರುಗಳ ಅಪಘಾತ: ಶಾಸಕ ಅಭಯ ಪಾಟೀಲ ಸೇರಿ ಆರು ಮಂದಿಗೆ ಗಾಯ

ಸೆಂಟ್ರಲ್‌ ದೆಹಲಿಯ ಲೋಕೋಪಯೋಗಿ ಇಲಾಖೆ ಕಚೇರಿ ಬಳಿ ಭಾನುವಾರ ರಾತ್ರಿ 9.30ರ ಸುಮಾರಿಗೆ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು, ಕರ್ನಾಟಕದ ಬಿಜೆಪಿ ಶಾಸಕ ಅಭಯ ಪಾಟೀಲ, ದೆಹಲಿ ಶಾಸಕ ಅನಿಲ್‌ ಝಾ ಸೇರಿದಂತೆ ಆರು ಜನರಿಗೆ ಗಾಯಗಳಾಗಿವೆ.

ಎಸ್‌ಐಆರ್‌ | ಮತದಾರರ ಕರಡು ಪಟ್ಟಿ ಇಂದು ಪ್ರಕಟ

ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಭಾಗವಾಗಿ ರಾಜ್ಯದ ಕರಡು ಮತದಾರರ ಪಟ್ಟಿಯು ಆಗಸ್ಟ್‌ 24ರ ಸೋಮವಾರ ಪ್ರಕಟವಾಗಲಿದೆ.

ಮುಖ್ಯಮಂತ್ರಿ ಡಿಕೆಶಿ ನಿವಾಸಕ್ಕೆ ಅದಾನಿ ಭೇಟಿ, ಮಾತುಕತೆ

ಬೆಂಗಳೂರಿನ ಸದಾಶಿವನಗರದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ನಿವಾಸಕ್ಕೆ ಭಾನುವಾರ ಭೇಟಿ ನೀಡಿದ್ದ ಉದ್ಯಮಿ ಗೌತಮ್ ಅದಾನಿ ಕೆಲಹೊತ್ತು ಸಮಾಲೋಚನೆ ನಡೆಸಿದರು.

ಅಮರಾವತಿ ಜಿಲ್ಲಾಸ್ಪತ್ರೆಯಲ್ಲಿ ಬೆಂಕಿ; ಮೂರು ನವಜಾತ ಶಿಶುಗಳ ಸಾವು

ಮಹಾರಾಷ್ಟ್ರದ ಅಮರಾವತಿ ಜಿಲ್ಲಾ ಮಹಿಳಾ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (ಎನ್‌ಐಸಿಯು) ಸೋಮವಾರ ಮುಂಜಾನೆ ಅಗ್ನಿ ಅವಘಡ ಸಂಭವಿಸಿದ್ದು, ಮೂರು ನವಜಾತ ಶಿಶುಗಳು ಮೃತಪಟ್ಟಿವೆ.

ಎಂಜಿನಿಯರಿಂಗ್, ವೈದ್ಯಕೀಯ ಸೀಟು ಹಂಚಿಕೆ: ಆಕ್ಷೇಪಣೆಗೆ ಸಂಜೆ 4ರವರೆಗೆ ಅವಕಾಶ

ಎಂಜಿನಿಯರಿಂಗ್ ಸೇರಿದಂತೆ ಇತರ ಸಿಇಟಿ ಕೋರ್ಸ್‌ಗಳ ಎರಡನೇ ಸುತ್ತು ಹಾಗೂ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶದ ಮೊದಲ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಿಸಿದೆ.

ದೇಶದಲ್ಲಿ H1N1 ಹೊಸ ತಳಿ ಪತ್ತೆಯಾಗಿಲ್ಲ, ಆತಂಕ ಬೇಡ: ಐಸಿಎಂಆರ್

ದೇಶದಲ್ಲಿ ಎಚ್1ಎನ್1ನ ಹೊಸ ತಳಿ ಪತ್ತೆಯಾಗಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಮೂಲಗಳು ಭಾನುವಾರ ತಿಳಿಸಿವೆ. ಜನರು ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದೂ ಅದು ಹೇಳಿದೆ.

ಮೋದಿ–ಟ್ರಂಪ್ ಸಭೆ ಬಳಿಕ ಮಾಧ್ಯಮದವರು ಪ್ರಶ್ನಿಸಬಾರದು ಎಂದು ಭಾರತ ಕೋರಿತ್ತು: ಗೋರ್

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಫ್ರಾನ್ಸ್‌ನಲ್ಲಿ ಭೇಟಿಯಾದ ನಂತರ ನಡೆದ ಸಂವಾದದ ವೇಳೆ ಮಾಧ್ಯಮದವರಿಗೆ ಪ್ರಶ್ನೆಗಳನ್ನು ಕೇಳಲು ಅವಕಾಶ ನೀಡಬಾರದು ಎಂಬುದಾಗಿ ಭಾರತವು ಮನವಿ ಮಾಡಿತ್ತು ಎಂದು ಇಲ್ಲಿರುವ (ಭಾರತದಲ್ಲಿರುವ) ಅಮೆರಿಕದ ರಾಯಭಾರಿ ಸರ್ಗಿಯೊ ಗೋರ್‌ ಅವರು ಭಾನುವಾರ ಬಹಿರಂಗಪಡಿಸಿದ್ದಾರೆ.

ಐಎಎಸ್‌ ಅಧಿಕಾರಿ ಗಂಗ್ವಾರ್ ಮನೆಯಲ್ಲಿ ಇ.ಡಿ ಶೋಧ

ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆ ಮತ್ತು ನೇಮಕಾತಿಯಲ್ಲಿನ ಅಕ್ರಮಗಳ ತನಿಖೆಯನ್ನು ಚುರುಕುಗೊಳಿಸಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು, ಆಯೋಗದ ಹಿಂದಿನ ಪರೀಕ್ಷಾ ನಿಯಂತ್ರಕ ಐಎಎಸ್‌ ಅಧಿಕಾರಿ ಘ್ಯಾನೇಂದ್ರ ಕುಮಾರ್‌ ಗಂಗ್ವಾರ್‌ ಅವರ ಇಲ್ಲಿನ ಜಯಮಹಲ್‌ನಲ್ಲಿರುವ ಸರ್ಕಾರಿ ನಿವಾಸದ ಮೇಲೆ ಭಾನುವಾರ ದಾಳಿ ನಡೆಸಿದ್ದಾರೆ.

ಮಂಡ್ಯ: ಹತ್ತಾರು ಮಂದಿ ಎರಡು ದಿನ ಎಣಿಸುವಷ್ಟು ಹಣ ಕೂಡಿಟ್ಟಿದ್ದ ಭಿಕ್ಷುಕಿ!

ಮಂಡ್ಯ ನಗರದ ಗುತ್ತಲು ಬಡಾವಣೆಯಲ್ಲಿದ್ದ ಭಿಕ್ಷುಕಿ ನೂರ್‌ ವಯೋಸಹಜ ಕಾಯಿಲೆಯಿಂದ ಶನಿವಾರ ಮೃತಪಟ್ಟಿದ್ದು, ಅವರ ಮನೆಯಲ್ಲಿ ₹8 ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದೆ. 

ಆಳ ಅಗಲ | ಸಕ್ಕರೆಯೂ ಈಗ ‘ಕಹಿ’

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಕ್ಕಿ, ಬೇಳೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಸವಳಿದಿರುವ ಜನರ ಜೇಬಿಗೆ ಈಗ ಸಕ್ಕರೆಯೂ ಹೊರೆಯಾಗಿದೆ. ಕೆಲವೇ ದಿನಗಳ ಅಂತರದಲ್ಲಿ ಕೆ.ಜಿ. ಸಕ್ಕರೆ ದರ ₹25ರಿಂದ ₹30ರಷ್ಟು ಹೆಚ್ಚಾಗಿದೆ. ಹಬ್ಬಗಳ ಸಡಗರದಲ್ಲಿರುವ ಜನರಿಗೆ ಸಿಹಿಯಾದ ಸಕ್ಕರೆಯೂ ಕಹಿಯ ಅನುಭವ ನೀಡುತ್ತಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ