
ಇಂಡಿಯನ್ ಆರ್ಮಿ ಟೆರಿಯರ್ ಸೈಬರ್ ಕ್ವೆಸ್ಟ್–2026: ಯಾರೆಲ್ಲಾ ಭಾಗವಹಿಸಬಹುದು ?
ಭಾರತೀಯ ಸೇನೆಯ ಟೆರಿಟೋರಿಯಲ್ ಆರ್ಮಿ ಹಾಗೂ ಸೈಬರ್ ಪೀಸ್ ಸಂಸ್ಥೆ ಜಂಟಿಯಾಗಿ 'ಟೆರಿಯರ್ ಸೈಬರ್ ಕ್ವೆಸ್ಟ್-2026' ರಾಷ್ಟ್ರೀಯ ಹ್ಯಾಕಥಾನ್ ಮತ್ತು ಸೈಬರ್ ಸೆಕ್ಯೂರಿಟಿ ಸ್ಪರ್ಧೆ ಆಯೋಜಿಸಿವೆ. ಸೈಬರ್ ಭದ್ರತೆ, ಕೃತಕ ಬುದ್ಧಿಮತ್ತೆ (AI) ಹಾಗೂ ಡಿಜಿಟಲ್ ಜಾಗೃತಿಯಲ್ಲಿ ಪ್ರತಿಭಾವಂತರನ್ನು ಗುರುತಿಸಲು ಈ ಸ್ಪರ್ಧೆ ನಡೆಸಲಾಗುತ್ತಿದೆ.
ಅರ್ಜಿ ಸಲ್ಲಿಕೆ ಪ್ರಾರಂಭ ಜುಲೈ– 30
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್– 31
ಆನ್‌ಲೈನ್ ಶಾರ್ಟ್ ಲಿಸ್ಟಿಂಗ್ ಹಂತ ಸೆಪ್ಟೆಂಬರ್– 1ರಿಂದ 10
ಗ್ರ್ಯಾಂಡ್ ಫಿನಾಲೆ (ನವದೆಹಲಿ) ಅಕ್ಟೋಬರ್– 6ರಿಂದ 8 (36 ಗಂಟೆಗಳ ಲೈವ್ ಹ್ಯಾಕಥಾನ್)
ಪ್ರಶಸ್ತಿ ಪ್ರದಾನ ಸಮಾರಂಭ ಅಕ್ಟೋಬರ್– 9
ಅರ್ಜಿ ಸಲ್ಲಿಕೆ ಪ್ರಾರಂಭ ಜುಲೈ– 30
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್– 31
ಆನ್‌ಲೈನ್ ಶಾರ್ಟ್ ಲಿಸ್ಟಿಂಗ್ ಹಂತ ಸೆಪ್ಟೆಂಬರ್– 1ರಿಂದ 10
ಗ್ರ್ಯಾಂಡ್ ಫಿನಾಲೆ (ನವದೆಹಲಿ) ಅಕ್ಟೋಬರ್– 6ರಿಂದ 8 (36 ಗಂಟೆಗಳ ಲೈವ್ ಹ್ಯಾಕಥಾನ್)
ಪ್ರಶಸ್ತಿ ಪ್ರದಾನ ಸಮಾರಂಭ ಅಕ್ಟೋಬರ್– 9
ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
ವಿದ್ಯಾರ್ಥಿಗಳು ಮತ್ತು ಸಂಶೋಧಕರು
ಸೈಬರ್ ಸೆಕ್ಯೂರಿಟಿ ಪ್ರೊಫೆಷನಲ್ಸ್
ಎಥಿಕಲ್ ಹ್ಯಾಕರ್ಸ್ ಮತ್ತು ಸಾಫ್ಟ್‌ವೇರ್ ಡೆವಲಪರ್ಸ್
ಎಐ ಸಂಶೋಧಕರು ಹಾಗೂ ತಂತ್ರಜ್ಞಾನ ಆಸಕ್ತರು
ಕಂಟೆಂಟ್ ಕ್ರಿಯೇಟರ್ಸ್, ಸಾಮಾಜಿ ಮಾಧ್ಯಮದ ಪ್ರಭಾವಿಗಳು ಮತ್ತು ಸಾರ್ವಜನಿಕರು
ಸ್ಟಾರ್ಟ್ ಅಪ್‌ಗಳು
ಭಾರತೀಯ ಸಶಸ್ತ್ರ ಪಡೆಗಳ ಸಿಬ್ಬಂದಿ
ವಿದ್ಯಾರ್ಥಿಗಳು ಮತ್ತು ಸಂಶೋಧಕರು
ಸೈಬರ್ ಸೆಕ್ಯೂರಿಟಿ ಪ್ರೊಫೆಷನಲ್ಸ್
ಎಥಿಕಲ್ ಹ್ಯಾಕರ್ಸ್ ಮತ್ತು ಸಾಫ್ಟ್‌ವೇರ್ ಡೆವಲಪರ್ಸ್
ಎಐ ಸಂಶೋಧಕರು ಹಾಗೂ ತಂತ್ರಜ್ಞಾನ ಆಸಕ್ತರು
ಕಂಟೆಂಟ್ ಕ್ರಿಯೇಟರ್ಸ್, ಸಾಮಾಜಿ ಮಾಧ್ಯಮದ ಪ್ರಭಾವಿಗಳು ಮತ್ತು ಸಾರ್ವಜನಿಕರು
ಭಾರತೀಯ ಸಶಸ್ತ್ರ ಪಡೆಗಳ ಸಿಬ್ಬಂದಿ
ಬಗ್ ಹಂಟಿಂಗ್ (Bug Hunting):
ಸೈಬರ್ ಮೂಲ ಸೌಕರ್ಯದಲ್ಲಿರುವ ಭದ್ರತಾ ಲೋಪಗಳನ್ನು ಗುರುತಿಸುವುದು. ಕ್ಯಾಪ್ಚರ್-ದಿ-ಫ್ಲ್ಯಾಗ್ (CTF) ಮಾದರಿಯಲ್ಲಿ ಆನ್‌ಲೈನ್ ಪರೀಕ್ಷೆ ನಡೆಯಲಿದೆ.
ತಂಡದ ಮಿತಿ: ಗರಿಷ್ಠ 3 ಸದಸ್ಯರು.
ಸೈಬರ್ ದಾಳಿಗಳನ್ನು ತಡೆಯಲು ಮತ್ತು ಗುರುತಿಸಲು ಕೃತಕ ಬುದ್ಧಿಮತ್ತೆ (AI) ಆಧಾರಿತ ತಂತ್ರಜ್ಞಾನ ಮತ್ತು ಆಟೋಮೇಟೆಡ್ ಟೂಲ್‌ಗಳನ್ನು ಅಭಿವೃದ್ಧಿಪಡಿಸುವುದು. ಅರ್ಜಿ ಸಲ್ಲಿಸುವಾಗ 5-ಸ್ಲೈಡ್‌ಗಳ ಪಿಪಿಟಿ ಸಲ್ಲಿಸಬೇಕು.
ತಂಡದ ಮಿತಿ: ಗರಿಷ್ಠ 3 ಸದಸ್ಯರು.
ಕ್ರಿಯೇಟರ್ಸ್ ಚಾಲೆಂಜ್ (Creators Challenge):
ಡಿಪ್‌ಫೇಕ್, ಫಿಷಿಂಗ್ ಹಾಗೂ ಸೈಬರ್ ವಂಚನೆಗಳ ವಿರುದ್ಧ ಜಾಗೃತಿ ಮೂಡಿಸಲು 1 ರಿಂದ 3 ನಿಮಿಷಗಳ ವಿಡಿಯೋ, ರೀಲ್ಸ್ ಅಥವಾ ಕ್ಯಾರೋಸೆಲ್ ಪೋಸ್ಟ್ ರಚಿಸುವುದು.
ತಂಡದ ಮಿತಿ: ಗರಿಷ್ಠ 4 ಸದಸ್ಯರು.
ವಿಜೇತರಿಗೆ ಸಿಗುವ ಪ್ರಯೋಜನಗಳು
ಭಾರತೀಯ ಸೇನೆಯ ಟೆರಿಟೋರಿಯಲ್ ಆರ್ಮಿಯಿಂದ ಮೆಡಲ್ ಮತ್ತು ಪ್ರಮಾಣಪತ್ರ, ನಗದು ಬಹುಮಾನಗಳು, ಹಿರಿಯ ರಕ್ಷಣಾ ಅಧಿಕಾರಿಗಳು ಮತ್ತು ಸರ್ಕಾರಿ ಗಣ್ಯರೊಂದಿಗೆ ಸಂವಹನ ನಡೆಸುವ ಅವಕಾಶ ಸಿಗಲಿದೆ.
ರಕ್ಷಣಾ ಸಂಸ್ಥೆಗಳಿಗೆ ಭೇಟಿ ನೀಡುವ ಮತ್ತು ಟೆರಿಟೋರಿಯಲ್ ಆರ್ಮಿ ಜೊತೆ ಭವಿಷ್ಯದ ಸೈಬರ್ ಯೋಜನೆಗಳಲ್ಲಿ ಭಾಗವಹಿಸುವ ಅವಕಾಶ ಕೂಡ ದೊರೆಯಲಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತರು ಟೆರಿಯರ್ ಸೈಬರ್ ಕ್ವೆಸ್ಟ್‌ನ (Terrier Cyber Quest) ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ, ತಮ್ಮ ವಿಭಾಗವನ್ನು ಆಯ್ಕೆ ಮಾಡಿಕೊಂಡು ಆನ್‌ಲೈನ್ ಮೂಲಕ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು.