ಮಹಿಳಾ ದೌರ್ಜನ್ಯ: 2022 ರಿಂದ 2026ರ ಅವಧಿಯಲ್ಲಿ 53,665 ಪ್ರಕರಣ

ಮಹಿಳಾ ದೌರ್ಜನ್ಯ: 2022 ರಿಂದ 2026ರ ಅವಧಿಯಲ್ಲಿ 53,665 ಪ್ರಕರಣ

ಮಹಿಳಾ ದೌರ್ಜನ್ಯ: 2022 ರಿಂದ 2026ರ ಅವಧಿಯಲ್ಲಿ 53,665 ಪ್ರಕರಣ

ಹುಬ್ಬಳ್ಳಿ: ಮಹಿಳೆಯರ ರಕ್ಷಣೆಗೆ ಹಲವು ಕಾನೂನುಗಳಿದ್ದರೂ ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ರಾಜ್ಯ ಮಹಿಳಾ ಆಯೋಗಕ್ಕೆ ನಿತ್ಯ ನೂರಾರು ದೂರುಗಳು ಬರುತ್ತಿವೆ.

2022 ರಿಂದ 2026ರ ಜೂನ್‌ 30ರವರೆಗಿನ ಅವಧಿಯಲ್ಲಿ ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ವರದಕ್ಷಿಣೆ ಸಾವು, ಅತ್ಯಾಚಾರ, ಲೈಂಗಿಕ ಕಿರುಕುಳ ಸೇರಿ 53 ಸಾವಿರಕ್ಕೂ ಹೆಚ್ಚು ಮಹಿಳಾ ದೌರ್ಜನ್ಯ ಪ್ರಕರಣಗಳು ಆಯೋಗದಲ್ಲಿ ದಾಖಲಾಗಿವೆ.

‘ಲೈಂಗಿಕ ಕಿರುಕುಳ, ಕೌಟುಂಬಿಕ ಅಥವಾ ಗಂಡನಿಂದ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ರಕ್ಷಣೆ ಒದಗಿಸುವಂತೆ ಮಹಿಳಾ ಆಯೋಗದಲ್ಲಿ 40,729 ಪ್ರಕರಣಗಳು ದಾಖಲಾಗಿವೆ. 2,572 ಅತ್ಯಾಚಾರ ಪ್ರಕರಣಗಳು, 9,751 ವರದಕ್ಷಿಣೆ ಕಿರುಕುಳ ಸಂಬಂಧಿಸಿದ ಪ್ರಕರಣಗಳು ಬಂದಿವೆ’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ತಿಳಿಸಿದರು.

‘ಕೆಲಸದ ಸ್ಥಳಗಳಲ್ಲಿ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ನಿಯಂತ್ರಿಸಲು ಐಟಿಬಿಟಿ ಕಂಪನಿ, ಸಂಘಟಿತ ವಲಯದ ಸಂಘ–ಸಂಸ್ಥೆಗಳಲ್ಲಿ 81 ಸಾವಿರಕ್ಕೂ ಹೆಚ್ಚು ಆಂತರಿಕ ದೂರು ಸಮಿತಿಗಳನ್ನು ರಚಿಸಲಾಗಿದೆ. ರಾಜ್ಯದಲ್ಲಿ ನಾಲ್ಕೂವರೆ ವರ್ಷದಲ್ಲಿ ವರದಕ್ಷಿಣೆ ಕಿರುಕುಳದಿಂದ 617 ಮಹಿಳೆಯರು ಮೃತಪಟ್ಟಿದ್ದಾರೆ. ಇದರಲ್ಲಿ 70 ಪ್ರಕರಣ ಇತ್ಯರ್ಥಗೊಂಡಿದ್ದು, 547 ಪ್ರಕರಣಗಳು ಬಾಕಿ ಇವೆ’ ಎಂದರು.

ಪ್ರಕರಣಗಳ ವಿವರಪ್ರಕರಣ;2022;2023;2024;2025;2026 ಜೂನ್‌ 30ರವರೆಗೆ;ಒಟ್ಟುವರದಕ್ಷಿಣೆ ಸಾವು;161;158;114;115;69;617ಲೈಂಗಿಕ ದೌರ್ಜನ್ಯ;5,857;6,489;6,335;5,843;3,304;27,828ವರದಕ್ಷಿಣೆ ಕಿರುಕುಳ;2,245;2,348;1,999;2,120;1,039;9,751ಗಂಡನಿಂದ ಕಿರುಕುಳ;2,779;2,946;2,894;2,744;1,534;12,897ಅತ್ಯಾಚಾರ ಪ್ರಕರಣಗಳು;537;600;623;550;262;2,572

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260825-24-1901134632

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ