ರಾಜಾಜಿನಗರದ ಲುಲು ಮಾಲ್‌ನಲ್ಲಿ ‘ಕರುನಾಡ ಸವಿಯೂಟ’ ಸ್ಪರ್ಧೆ ಆ.16ರಂದು

ರಾಜಾಜಿನಗರದ ಲುಲು ಮಾಲ್‌ನಲ್ಲಿ ‘ಕರುನಾಡ ಸವಿಯೂಟ’ ಸ್ಪರ್ಧೆ ಆ.16ರಂದು

ರಾಜಾಜಿನಗರದ ಲುಲು ಮಾಲ್‌ನಲ್ಲಿ ‘ಕರುನಾಡ ಸವಿಯೂಟ’ ಸ್ಪರ್ಧೆ ಆ.16ರಂದು

ಬೆಂಗಳೂರು: ‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್’ ಹಾಗೂ ‘ಫ್ರೀಡಂ ಕುಕ್ಕಿಂಗ್ ಆಯಿಲ್’ ಸಹಯೋಗದಲ್ಲಿ ಆ.16ರಂದು (ಭಾನುವಾರ) ಮಧ್ಯಾಹ್ನ 12.30ಕ್ಕೆ ರಾಜಾಜಿನಗರದ ಲುಲು ಮಾಲ್‌ನಲ್ಲಿ ‘ಕರುನಾಡ ಸವಿಯೂಟ’ ಸ್ಪರ್ಧೆ ಆಯೋಜಿಸಲಾಗಿದೆ.

₹ 50 ಸಾವಿರ ಮೌಲ್ಯದ ಬಹುಮಾನ ಗೆಲ್ಲುವ ಅವಕಾಶವಿದ್ದು, ಗೆಳೆಯರು ಅಥವಾ ಕುಟುಂಬ ಸದಸ್ಯರೊಂದಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು.

ಬೆಂಗಳೂರಿನಲ್ಲಿ ನಡೆಯುತ್ತಿರುವ 5ನೇ ಆವೃತ್ತಿಯ ಸ್ಪರ್ಧೆಯನ್ನು ‘ಎಲ್‌.ಜಿ. ಸಂಯೋಜಿತ ಹಿಂಗು’ ಪ್ರಸ್ತುತಪಡಿಸುತ್ತಿದೆ. ಸ್ಪರ್ಧೆಗೆ ಹಾಲಿನ ಉತ್ಪನ್ನಗಳ ಪ್ರಾಯೋಜಕತ್ವವನ್ನು ‘ನಂದಿನಿ’, ಅಡುಗೆ ಅನಿಲ ಪ್ರಾಯೋಜಕತ್ವವನ್ನು ‘ಗೇಲ್‌ ಗ್ಯಾಸ್’, ಸಹ ಪ್ರಾಯೋಜಕತ್ವವನ್ನು ‘ದಿ ಚೆನ್ನೈ ಸಿಲ್ಕ್ಸ್‌–ಶ್ರೀಕುಮರನ್‌ ಜ್ಯುವೆಲರ್ಸ್‌’, ‘ಪೂರ್ವಿಕಾ ಮೊಬೈಲ್’, ‘ವೆಂಕೋಬ್ ಚಿಕನ್’ ಸಂಸ್ಥೆಗಳು ವಹಿಸಿವೆ.

ಸೆಲೆಬ್ರಿಟಿ ಶೆಫ್‌ ಆಗಿರುವ ‘ಒಗ್ಗರಣೆ ಡಬ್ಬಿ’ ಮುರುಳಿ ಮತ್ತು ಸುಚಿತ್ರಾ ಅವರನ್ನು ಭೇಟಿ ಆಗಬಹುದು. ಅಡುಗೆ ಸಿದ್ಧಪಡಿಸುವ ಕುರಿತು ನಡೆಸಿಕೊಡುವ ‘ಮಾಸ್ಟರ್‌ಕ್ಲಾಸ್‌’ಗೆ ಹಾಜರಾಗಬಹುದು. ಅಡುಗೆ ಕೌಶಲದಿಂದ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿ ಆಕರ್ಷಕ ಬಹುಮಾನ ಗೆಲ್ಲಬಹುದಾಗಿದೆ. ‘ಸುಧಾ’ ವಾರಪತ್ರಿಕೆಯಲ್ಲಿ ಕಾಣಿಸಿಕೊಳ್ಳುವ ಅವಕಾಶವನ್ನೂ ಪಡೆಯಬಹುದು.

ಎಲ್‌ಜಿ ಹಿಂಗು ಮತ್ತು ಮಸಾಲೆಗಳನ್ನು ಬಳಸಿ ಮನೆಯಲ್ಲಿ ತಯಾರಿಸಿದ ಕರುನಾಡಿನ ತಿನಿಸನ್ನು ತರಬೇಕು. ರುಚಿ, ನಾವೀನ್ಯತೆ, ಪ್ರಸ್ತುತಿ ಆಧರಿಸಿ ಫಲಿತಾಂಶ ದೊರೆಯಲಿದೆ. ಪ್ಲೇಟಿಂಗ್‌, ಆಲಂಕಾರಿಕ ವಸ್ತುಗಳೊಂದಿಗೆ ಬರಬೇಕು. ಅತಿಥಿಗಳು ಸ್ಪರ್ಧೆಯಲ್ಲಿನ ಆಹಾರ ಪದಾರ್ಥಗಳನ್ನು ಸವಿದು ತೀರ್ಪು ನೀಡಲಿದ್ದಾರೆ.

ಆಸಕ್ತರು ಕ್ಯೂಆರ್‌ ಕೋಡ್ ಸ್ಕ್ಯಾನ್ ಮಾಡಿ ಹೆಸರು ನೋಂದಾಯಿಸಬಹುದು. ಮೊಬೈಲ್‌ ಸಂಖ್ಯೆ: 73380 18541 ಸಂಪರ್ಕಿಸಬಹುದು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260814-4-1725743161

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ