ಆದಿ ಚುಂಚನಗಿರಿ‌ ಮಠಕ್ಕೆ ನಾಳೆ ಬರಲಿದ್ದಾರೆ ಪಿಎಂ ನರೇಂದ್ರ ಮೋದಿ

ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿ ಚುಂಚನಗಿರಿಯಲ್ಲಿ ನಿರ್ಮಿಸಲಾಗಿರುವ ಬಾಲಗಂಗಾಧರನಾಥ ಶ್ರೀಗಳ ಗುರು ಭೈರವೈಕ್ಯ ಮಂದಿರ, ಲೋಕಾರ್ಪಣೆಗೆ ಸಜ್ಜಾಗಿದೆ. ಇದರ ಉದ್ಘಾಟನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಗಳೇ ಜಿಲ್ಲೆಗೆ ಬರ್ತಾ ಇದ್ದಾರೆ. ನಾಳೆ ಮಠಕ್ಕೆ ಪಿಎಂ ಮೋದಿ ಅವರು ಬರ್ತಿದ್ದಾರೆ. ಸಿದ್ಧತೆಗಳು ಕೂಡ ಜೋರಾಗಿ ನಡೆದಿವೆ.

80 ಕೋಟಿಗೂ ಅಧಿಕ ವೆಚ್ಚದಲ್ಲಿ ಭೈರವೈಕ್ಯ ಮಂಟಪವನ್ನ ಕಟ್ಟಲಾಗಿದೆ. ಇದು ಒಡಿಶಾದ ಸೂರ್ಯ ದೇಗುಲದ ಕಲೆಯ ರೀತಿಯಲ್ಲಿಯೇ ಕಟ್ಟಲಾಗಿದೆ. ಹೊಯ್ಸಳ, ಚೋಳ, ಚಾಲುಕ್ಯ ಹಾಗೂ ಗಂಗರ ವಾಸ್ತು ಶಿಲ್ಪ ಕೂಡ ಇದರಲ್ಲಿ ಬೆರೆತಿದೆ. ಇದನ್ನ ಉದ್ಘಾಟನೆ ಮಾಡೋದಕ್ಕೆ ಪ್ರಧಾನಿ ಮೋದಿ ಅವರು ಬರ್ತಿದ್ದಾರೆ.

ನಾಳೆ ಬೆಂಗಳೂರಿನ ಹೆಚ್ಎಎಲ್ ಏರ್ಪೋರ್ಟಿನಿಂದ ಹೆಲಿಕಾಪ್ಟರ್ ಮೂಲಕ ಆದಿಚುಂಚನಗಿರಿ ತಪೋವನಕ್ಕೆ ಮೋದಿ ಅವರು ಬಂದು ಇಳಿಯಲಿದ್ದಾರೆ. ಅಲ್ಲಿಂದ ಕಾಲಭೈರವನ ದೇಗುಲಕ್ಕೆ ಬಂದು ದರ್ಶನ ಪಡೆಯಲಿದ್ದಾರೆ. ನಂತರ ಭೈರವೈಕ್ಯ ಮಂದಿರವನ್ನ ಲೋಕಾರ್ಪಣೆ ಮಾಡುತ್ತಾರೆ. ಬಳಿಕ ಮಂದಿರದ ಗರ್ಭಗುಡಿಯ ಪಕ್ಕದಲ್ಲಿ ಇರುವ ಬಾಲಗಂಗಾಧರನಾಥ ಸ್ವಾಮೀಜಿಯವರ ಗದ್ದುಗೆಯ ದರ್ಶನ ಮಾಡಲಿದ್ದಾರೆ. ಬಳಿಕ ಆದಿಚುಂಚನಗಿರಿ ಕ್ರೀಡಾಂಗಣದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಅದೇ ಕಾರ್ಯಕ್ರಮದಲ್ಲಿ ಗೋ ರಕ್ಷಕನಾಥ ಸಿದ್ಧ ಸಿದ್ಧ ಸಿದ್ಧಾಂತ ಎಂಬ ಗ್ರಂಥವನ್ನ ಬಿಡುಗಡೆ ಕೂಡ ಮಾಡಲಿದ್ದಾರೆ. ಕಾರ್ಯಕ್ರಮವನ್ನೆಲ್ಲ ಮುಗಿಸಿ, ವಾಪಾಸ್ ದೆಹಲಿಗೆ ಹೊರಡಲಿದ್ದಾರೆ. ಆದಿಚುಂಚನಗಿರಿ‌ಮಠದ ಭಕ್ತರು ಇದನ್ನ ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಲೋಕಾರ್ಪಣೆ ಮಾಡಿದ ಬಳಿಕ ಭಕ್ತರು ಕೂಡ ನೋಡುವುದಕ್ಕೆ ಅವಕಾಶವನ್ನ ನೀಡಲಾಗುತ್ತದೆ. ಭಕ್ತರು ಕೂಡ ಶ್ರೀ ಗುರು ಭೈರವೈಕ್ಯ ಮಂಟಪವನ್ನ ಕಣ್ತುಂಬಿಕೊಳ್ಳಬಹುದು.



source https://suddione.com/pm-narendra-modi-to-visit-adi-chunchanagiri-mutt-tomorrow/

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ