
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದ್ದು, ಮುಂಬೈನ ಅಂಬೋಲಿ ಪೊಲೀಸರಿಂದ FIR ದಾಖಲಾಗಿದೆ. ನಿರ್ದೇಶಕನಿಗೆ ವಂಚನೆ ಮಾಡಿದ ಆರೋಪದಲ್ಲಿ FIR ದಾಖಲಾಗಿದೆ. ಚಿತ್ರ ನಿರ್ದೇಶಕ ರಾಘವೇಂದ್ರ ಹೆಗಡೆಯಿಂದ 3.15 ಕೋಟಿ ಪಡೆದ ಆರೋಪ ಕೇಳಿ ಬಂದಿದೆ.

ಹೆಗಡೆಯವರು 2018 ಮತ್ತು 2021ರ ನಡುವೆ ನಟನಿಗೆ ಹಣವನ್ನು ನೀಡಿದ್ದರಂತೆ. ಹಣವನ್ನು ಪಡೆದ ನಂತರ ತನ್ನ ನಟನೆಯ ಬದ್ಧತೆಗಳನ್ನು ಪೂರೈಸುವಲ್ಲಿ ವಿಳಂಬ ಮಾಡಿದ್ದಾರೆ. ಯಾವುದೇ ನಟನೆಯ ಪಾತ್ರಕ್ಕೆ ಹಾಜರಾಗಲಿಲ್ಲ ಎಂದು ಆರೋಪಿಸಿರುವ ರಾಘವೇಂದ್ರ ಹೆಗಡೆಯವರು FIR ದಾಖಲು ಮಾಡಿದ್ದಾರೆ.
ಈ ಸಿನಿಮಾ ಮಾಡುವುದಾಗಿ 3ಕೋಟಿ ಪಡೆದು ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ. ಧೃವ ಸರ್ಜಾ ಅವರೇ ರಾಘವೇಂದ್ರ ಹೆಗ್ಡೆ ಭೇಟಿ ಸಿನಿಮಾ ಮಾಡುವುದಾಗಿ ಹೇಳಿದ್ರಂತೆ. ಸೋಲ್ಜರ್ ಎಂಬ ಸಿನಿಮಾ ಮಾಡುವುದಾಗಿ ಸ್ಕ್ರಿಪ್ಟ್ ಮಾಡಿದ್ದ ಧೃವ ಸರ್ಜಾ, ಒಪ್ಲಂದಕ್ಕೆ ಸಹಿ ಹಾಕುವ ಮೊದಲು 3ಕೋಟಿ ಹಣ ಪಡೆದಿದ್ದರಂತೆ. ಧ್ರುವ ಸರ್ಜಾ ಅವರು ಹಣ ಪಡೆದು ಅಪಾರ್ಟ್ಮೆಂಟ್ ಖರೀದಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಹಣ ಪಡೆದ ಬಳಿಕ ಸಿನಿಮಾ ಮಾಡಿಕೊಡುವ ಭರವಸೆ ನೀಡಿದ್ದರಂತೆ. ರಾಘವೇಂದ್ರ ಹೆಗ್ಡೆ ಹೆಚ್ಚಿನ ಬಡ್ಡಿಗೆ 3.15 ಕೋಟಿ ಸಾಲಪಡೆದು ಧೃವ ಗೆ ನೀಡಿದ್ದಾರಂತೆ. ಧೃವ ಒಡೆತನದ ಆರ್ಹೆಚ್ ಎಂಟರ್ಟೈನ್ಮೆಂಟ್ ಗೆ ಹಣ ವರ್ಗಾವಣೆ ಮಾಡಿದ್ದರು. ಈ ಹಣದ ವ್ಯವಹಾರ ಒಪ್ಪಂದ ಮಾಡಿಕೊಳ್ಳುವ ಮುನ್ನವೇ ನಡೆದಿತ್ತಂತೆ. 2019 ಫೆ.21 ಒಪ್ಪಂದ ಆಗಿತ್ತು.
ಸ್ಕ್ರಿಪ್ ರೈಟರ್ ಗೆ ಹಾಗೂ ಪಬ್ಲಿಸಿಟಿ ಗಾಗಿ ಮತ್ತೆ ನಂತರ 28 ಲಕ್ಷ ಪಡೆಸಿದ್ದ ಸರ್ಜಾ ಅವರು ನಂತರ ರಾಘವೇಂದ್ರ ಹೆಗ್ಡೆ ಜೊತೆ ಅಂತರ ಕಾಯ್ದುಕೊಂಡಿದ್ದರಂತೆ. ಈ ಸಂಬಂಧ ಕರ್ನಾಟಕ ಫಿಲ್ಮ್ ಚೆಂಬರ್ ಸೇರಿ ಹಲವರಿಗೆ ದೂರು ನೀಡಿದ್ದರಂತೆ ಹೆಗ್ಡೆ ಅವರು.
ನಂತರ ಮುಂಬೈನ ಅಂಬೋಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಹೆಗ್ಡೆ ದೂರು ಆಧರಿಸಿ ಎಫ್ಐಆರ್ ದಾಖಲಾಗಿದೆ. ಅದರಲ್ಲೂ 18%ಗೆ ಸಾಲ ಪಡೆದಿದ್ದು, ಈಗ ಆ ಹಣ 9.58 ಕೋಟಿಗೆ ಏರಿಕೆ ಆಗಿದೆ ಎನ್ನಲಾಗಿದೆ.


