
ಇತ್ತೀಚಿನ ದಿನಗಳಲ್ಲಿ ಯಾರೂ, ಯಾವಾಗ ಡಿವೋರ್ಸ್ ತಗೊಳ್ತಾರೆ ಅನ್ನೋದೆ ಗೊತ್ತಾಗಲ್ಲ. ಸ್ಟಾರ್ ದಂಪತಿಗಳೇ ದಾಂಪತ್ಯ ಜೀವನದಿಂದ ಹೊರಗೆ ಬರ್ತಿದ್ದಾರೆ. ಇದೀಗ ಆ ಸಾಲಿಗರ ಸ್ಟಾರ್ ಬ್ಯಾಡ್ಮಿಂಟನ್ ಸೈನಾ ನೆಹ್ವಾಲ್ ಕೂಡ ಸೇರಿದ್ದಾರೆ. ಸೈನಾ ನೆಹ್ವಾಲ್ ತಮ್ಮ ಏಳು ವರ್ಷದ ದಾಂಪತ್ಯಕ್ಕೆ ಗುಡ್ ಬೈ ಹೇಳಿದ್ದಾರೆ. ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕೆಲವೊಮ್ಮೆ ಜೀವನವು ನಮ್ಮನ್ನು ವಿಭಿನ್ನ ದಿಕ್ಕುಗಳಲ್ಲಿ ಕರೆದಿಯ್ಯಿತ್ತದೆ. ಸಾಕಷ್ಟು ಚಿಂತನೆ ಮತ್ತು ಪರಿಗಣನೆಯ ನಂತರ ಪರುಪಳ್ಳಿ ಕಶ್ಯಪ್ ಮತ್ತು ನಾನು ಬೇರೆಯಾಗಲು ನಿರ್ಧರಿಸಿದ್ದೇವೆ. ನಾವೂ, ನಮ್ಮಿಬ್ಬರಿಗಾಗಿ ಈ ಮಾರ್ಗವನ್ನು ಆರಿಸಿಕೊಳ್ಳುತ್ತಿದ್ದೇವೆ. ನಮ್ಮ ನೆನಪುಗಳಿಗೆ ಕೃತಜ್ಞನಾಗಿದ್ದೇನೆ. ನಮ್ಮ ಗೌಪ್ಯತೆಯನ್ನು ಅರ್ಥ ಮಾಡಿಕೊಂಡಿದ್ದಕ್ಕೆ ಹಾಗೂ ಗೌರವಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಸೈನಾ ನೆಹ್ವಾಲ್ ಡಿವೋರ್ಸ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಸೈನಾ ಅಧಿಕೃತವಾಗಿ ಡಿವೋರ್ಸ್ ವಿಚಾರ ಹೇಳಿದರು ಸಹ ಅವರ ಪತಿ ಈ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಸುಮಾರು ಒಂದು ದಶಕಗಳ ಕಾಲ ಡೇಟಿಂಗ್ ಮಾಡಿ, ಕಳೆದ ಏಳು ವರ್ಷಗಳಿಂದ ಪ್ರೀತಿಯಲ್ಲಿ ಇದ್ದವರು. ಇಬ್ಬರು ಬ್ಯಾಡ್ಮಿಂಟನ್ ನಲ್ಲಿ ದೊಡ್ಟ ಸಾಧನೆಯನ್ನೇ ಮಾಡಿದವರಾಗಿದ್ದಾರೆ. ಈ ಇಬ್ಬರ ಪ್ರೇಮಕಥೆ ಹೈದ್ರಾಬಾದ್ ನಲ್ಲಿ ಶುರುವಾಗಿತ್ತು. ಪ್ರಯಾಣ ಮಾಡುವಾಗ ಒಟ್ಟಿಗೆ ಹೋಗ್ತಾ ಇದ್ರು, ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಒಬ್ಬರಿಗೊಬ್ಬರು ಸಪೋರ್ಟ್ ಮಾಡ್ತಾ ಮಾಡ್ತಾ ಲವ್ ಆಗಿತ್ತು. ಏಳು ವರ್ಷಗಳ ಹಿಂದೆ ಮದುವೆ ಕೂಡ ಆಗಿ, ಸುಖ ಸಂಸಾರ ನಡೆಸುತ್ತಿದ್ದರು ಎಂದುಕೊಂಡರೆ ಇದೀಗ ಡಿವೋರ್ಸ್ ಹಂತಕ್ಕೆ ಬಂದು ನಿಂತಿದ್ದಾರೆ.


source https://suddione.com/badminton-star-saina-nehwal-says-goodbye-to-7-years-of-marriage-this-couple-grew-up-together/
0 Comments
If u have any queries, Please let us know