ಚಿತ್ರದುರ್ಗ : ಜುಲೈ 10 ರಂದು ಸಾಯಿ ಸಂಕಲ್ಪ ಸೇವಾ ಸಮಿತಿಯಿಂದ ವಿಶೇಷ ಪೂಜಾ ಕಾರ್ಯಕ್ರಮಗಳು

 

ಸುದ್ದಿಒನ್, ಚಿತ್ರದುರ್ಗ, ಜುಲೈ. 05 : ಚಳ್ಳಕೆರೆ ರಸ್ತೆ ಶನೈಶ್ವರಸ್ವಾಮಿ ದೇವಸ್ಥಾನದ ಹತ್ತಿರ ಸಾಯಿ ಸಂಕಲ್ಪ ಸೇವಾ ಸಮಿತಿಯಿಂದ ಜು.10 ರಂದು ಗುರು ಪೂರ್ಣಿಮೆ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 7-30 ರಿಂದ 9-30 ರವರೆಗೆ ಬಾಲಾಲಯದಲ್ಲಿ ಬಾಬಾರವರಿಗೆ ಕ್ಷೀರಾಭಿಷೇಕ, 10 ಗಂಟೆಯಿಂದ ನೂತನ ಮಂದಿರದ ದರ್ಬಾರ್ ಹಾಲ್‍ನಲ್ಲಿ ಇಷ್ಟಕ ಪೂಜೆ ನಡೆಯಲಿದೆ. ಭಜನೆ, ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗವಿರುತ್ತದೆ.

ಸಂಜೆ 6-30 ರಿಂದ ಭಜನೆ ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗ. ಚಿತ್ರದುರ್ಗದ ಡಾ.ಭವ್ಯಾರಾಣಿ ಇವರಿಂದ ವಯೋಲಿನ್ ವಾದನ. ಸುಜೀತ ಕುಲಕರ್ಣಿಯಿಂದ ಭಕ್ತಿ ಸಂಗೀತ. ದಾವಣಗೆರೆಯ ಅಭಿಷೇಕ್‍ರಿಂದ ತಬಲಾ. ಗುರು ಪೌರ್ಣಿಮೆ ಪ್ರಯುಕ್ತ ಬಾಬಾರವರ ದರ್ಶನಕ್ಕಾಗಿ ದೇವಸ್ಥಾನ ಪೂರ್ಣ ತೆರೆದಿರುತ್ತದೆ. ಸಾಯಿಬಾಬ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬಾಬಾರವರ ಕೃಪೆಗೆ ಪಾತ್ರರಾಗುವಂತೆ ಸಾಯಿ ಸಂಕಲ್ಪ ಸೇವಾ ಸಮಿತಿಯ ಅಧ್ಯಕ್ಷರು ವಿನಂತಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ನೇಹಾ ನಯನ್ ಕುಮಾರ್ ಮೊ : 9686243311, 9845166351, 9886170500 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

{}

Post a Comment

0 Comments