
ಇಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನೀಟ್-ಯುಜಿ 2025ರ ಫಲಿತಾಂಶ ಪ್ರಕಟ ಮಾಡಿದೆ. ಮೆಡಿಕಲ್ ಪ್ರವೇಶ ಪರೀಕ್ಷೆಗೆ ಕಾಯ್ತಾ ಇದ್ದಂತವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ದೇಶದಾದ್ಯಂತ ಒಟ್ಟು 12 ಲಕ್ಷದ 36 ಸಾವಿರ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಮೆಡಿಕಲ್ ಪ್ರವೇಶ ಪರೀಕ್ಷೆಗೆ ಈ ಬಾರಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ರಾಜಸ್ಥಾನ ಮೂಲದ ಮಹೇಶ್ ಕುಮಾರ್ ಅವರು ನೀಟ್ – ಯುಜಿ 2025ರಲ್ಲಿ ಇಡೀ ಭಾರತದಲ್ಲೇ ಮೊದಲ ಸ್ಥಾನ ಪಡೆದಿದ್ದಾರೆ.

ಈ ಬಾರಿ ಹತ್ತು ಸ್ಥಾನಗಳನ್ನ ಯಾರೆಲ್ಲಾ ಪಡೆದಿದ್ದಾರೆ ಎಂಬ ಮಾಹಿತಿ ಇಲ್ಲಿದೆ. ಅದರಲ್ಲೂ ನೀಟ್ – ಯುಜಿ ನಲ್ಲೂ ಮಹಿಳೆಯರು ಕೂಡ ಒಳ್ಳೆ ಸ್ಥಾನ ಪಡೆದಿದ್ದಾರೆ. ಅದರಲ್ಲೂ ದೆಹಲಿಯ ಅವಿಜಾ ಅಗರ್ವಾಲ್ ಮಹಿಳೆಯರಲ್ಲಿಯೇ ಅಗ್ರಸ್ಥಾನ ಪಡೆದಿದ್ದಾರೆ. ಮಧ್ಯಪ್ರದೇಶದ ಉತ್ಕರ್ಷ್ ಅವದಿಯಾ ದ್ವಿತೀಯಾ ಸ್ಥಾನದಲ್ಲಿದ್ದಾರೆ.

ಹತ್ತು ಸ್ಥಾನ ಪಡೆದವರು ಯಾರೆಲ್ಲಾ ಎಂಬ ಲೀಸ್ಟ್ ಇಲ್ಲಿದೆ. ಮಹೇಶ್ ಕುಮಾರ್ ರಾಜಸ್ಥಾನ, ಉತ್ಕರ್ಷ್ ಅವದಿಯಾ ಮಧ್ಯಪ್ರದೇಶ, ಕೃಷ್ಣಾಗ್ ಜೋಶಿ ಮಹಾರಾಷ್ಟ್ರ, ಮೃಣಾಲ್ ಕಿಶೋರ್ ದೆಹಲಿ, ಅವಿಕಾ ಅಗರ್ವಾಲ್ ದೆಹಲಿ, ಜೆನಿಲ್ ವಿನೋಬಾಯ್ ಗುಜರಾತ್, ಕೇಶವ್ ಮಿಠಾಲ್ ಪಂಜಾಬ್, ಭವ್ಯಾ ಚಿರಾಗ್ ಗುಜರಾತ್, ಹರ್ಷ್ ದೆಹಲಿ, ಆರವ್ ಅಗರ್ವಾಲ್ ಮಹಾರಾಷ್ಟ್ರದವರು ಹತ್ತನೇ ರ್ಯಾಂಕ್ ಬಂದಿದ್ದಾರೆ. ನೀಟ್ – ಯುಜಿ ಫಲಿತಾಂಶವನ್ನು ವೆಬ್ ಸೈಟ್ ಮೂಲಕ ವೀಕ್ಷಿಸಬಹುದಾಗಿದೆ. NEET ಅಧಿಕೃತ ವೆಬ್‌ಸೈಟ್ ಆದ neet.nta.nic.in ಅಲ್ಲಿ ವೀಕ್ಷಿಸಬಹುದು. ಯಾರೆಲ್ಲಾ ನೀಟ್ ಪರೀಕ್ಷೆ ಬರೆದಿದ್ದಾರೆ ಅವರೆಲ್ಲರು ಈ ವೆಬ್ಸೈಟ್ ಮೂಲಕ ನೋಡಬಹುದು. ಮೆಡಿಕಲ್ ಮಾಡಬೇಕು ಎಂದು ಕನಸು ಕಂಡವರಿಗೆ ಇದೀಗ ಫಲಿತಾಂಶ ಬಂದಿದ್ದು, ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ.


source https://suddione.com/neet-ug-results-announced-who-is-in-the-top-10-list/
0 Comments
If u have any queries, Please let us know