ಬಿಜೆಪಿಗೆ ಅನುಮಾನ ಮೂಡೀತಾ ರಾಜ್ಯದ ರಿಸಲ್ಟ್ ಮೇಲೆ..? ಪಟ್ಟಿ ರಿಲೀಸ್ ಮಾಡದೆ ತಡ ಮಾಡ್ತಿರೋದ್ಯಾಕೆ..?

 

ನವದೆಹಲಿ: ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಈಗಾಗಲೇ ಎರಡು ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್ ಮಾಡಿದ್ದಾರೆ. ಆದರೆ ಬಿಜೆಪಿ ಮಾತ್ರ ಮೊದಲ ಪಟ್ಟಿಯನ್ನು ರಿಲೀಸ್ ಮಾಡುತ್ತಿಲ್ಲ. ಇವತ್ತು ರಿಲೀಸ್ ಮಾಡುವ ನಿರೀಕ್ಷೆ ಇತ್ತು. ಆದರೆ ಇವತ್ತು ಅದು ಕೂಡ ಸುಳ್ಳಾಗಿದೆ. ಇದಕ್ಕೆಲ್ಲಾ ಕಾರಣ ಮತ್ತೆ ಬಿಜೆಪಿ ಹೈಕಮಾಂಡ್, ಸರ್ವೇ ಮಾಡಲು ತಿಳಿಸಿದ್ದಾರೆ ಎನ್ನಲಾಗಿದೆ.

224 ಕ್ಷೇತ್ರದಲ್ಲೂ ತನ್ನ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸದೇ ಹಂತ ಹಂತವಾಗಿಯೇ ಮೂರು ಪಕ್ಷಗಳು ಪ್ರಕಟಿಸಲಿವೆ. ಬಿಜೆಪಿ ಕೂಡ ಅದೇ ಅನುಸರಿಸಲಿದೆ. ಸದ್ಯಕ್ಕೆ ಸಿಎಂ ಬೊಮ್ಮಾಯಿ ಅವರ ಕ್ಷೇತ್ರಕ್ಕೂ ಮರು ಸರ್ವೇ ಮಾಡಲು ತಿಳಿಸಿದೆ. ಈಗಾಗಲೇ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಸಿದ್ಧಗೊಳಿಸಿತ್ತು. ಆ ಸಂಬಂಧ ಸಿಎಂ ಬೊಮ್ಮಾಯಿ ಅವರು ಕೂಡ ಇಂದು ಬೆಳಗ್ಗೆ ಈ ಬಗ್ಗೆ ಮಾತನಾಡಿದ್ದರು.

ಬಿಜೆಪಿ ನಾಯಕರು, ಅಮಿತ್ ಶಾ ನೇತೃತ್ವದಲ್ಲಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡುವ ಮುನ್ನ ಹಲವು ಸುತ್ತಿನ ಚರ್ಚೆ ನಡೆಸಲಾಗಿದೆ. ಆದ್ರೆ ಸದ್ಯ ರೆಡಿಯಾಗಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ 30-40 ಜನ ಗೆಲ್ಲುವ ಭರವಸೆ ಇಲ್ಲದೆ ಇರುವ ಕಾರಣ, ಮತ್ತೆ ಸರ್ವೇಗೆ ನಿರ್ಧಾರ ಮಾಡಲಾಗಿದೆಯಂತೆ.

The post ಬಿಜೆಪಿಗೆ ಅನುಮಾನ ಮೂಡೀತಾ ರಾಜ್ಯದ ರಿಸಲ್ಟ್ ಮೇಲೆ..? ಪಟ್ಟಿ ರಿಲೀಸ್ ಮಾಡದೆ ತಡ ಮಾಡ್ತಿರೋದ್ಯಾಕೆ..? first appeared on Kannada News | suddione.



source https://suddione.com/doubt-for-bjp-on-the-result-of-the-state-why-are-you-delaying-releasing-the-list/

Post a Comment

0 Comments