Breaking

(1) My Facebook Page          (2) My Instagram Page        (3) My Twitter Account   (4) Instagram Account

Sunday, June 9, 2024

ನರೇಂದ್ರ ದಾಮೋದರದಾಸ್ ಮೋದಿ ಎಂಬ ಹೆಸರಿನ ನಾನು : ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ

ಸುದ್ದಿಒನ್, ನವದೆಹಲಿ, ಜೂ.09 : ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಇಂದು ಸಂಜೆ  7.15ಕ್ಕೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೋದಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಬೋಧಿಸಿದರು. ಕೇಂದ್ರ ಸಚಿವರಿಗೂ ಪ್ರಮಾಣ ವಚನ ಬೋಧಿಸಿದರು.

ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಅತಿರಥ ಮಹಾರಥರು ನೆರೆದಿದ್ದರು. ಬಿಗಿ ಭದ್ರತೆಯ ನಡುವೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ದೇಶ-ವಿದೇಶಗಳ ಗಣ್ಯರು ಪಾಲ್ಗೊಂಡಿದ್ದರು.

ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ವಿವಿಧ ದೇಶಗಳ ಪ್ರಧಾನಿಗಳು ಮತ್ತು ಅಧ್ಯಕ್ಷರು ಭಾಗವಹಿಸಿದ್ದರಿಂದ ರಾಷ್ಟ್ರ ರಾಜಧಾನಿಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ರಾಷ್ಟ್ರಪತಿ ಭವನದ ರಕ್ಷಣೆಗೆ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿತ್ತು.  ಅಲ್ಲದೆ ಎನ್‌ಎಸ್‌ಜಿ ಕಮಾಂಡೋಗಳು, ಡ್ರೋನ್‌ಗಳು ಮತ್ತು ಸ್ನೈಪರ್‌ಗಳು ಕೂಡ ಭದ್ರತೆ ಒದಗಿಸಿದ್ದರು. ಕರ್ತವ್ಯ ಪಥ ಪೊಲೀಸ್ ಠಾಣೆ ಸಿಸಿ ಕ್ಯಾಮರಾಗಳ ಮೂಲಕ ವಿವಿಧ ಪ್ರದೇಶಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಪ್ರತಿ ರಾಷ್ಟ್ರದ ಮುಖ್ಯಸ್ಥರ ಪ್ರೋಟೋಕಾಲ್ ಅವಶ್ಯಕತೆಗಳ ಪ್ರಕಾರ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಸೆಲೆಬ್ರಿಟಿಗಳು ಉಳಿದುಕೊಳ್ಳುವ ಹೊಟೇಲ್‌ಗಳಲ್ಲೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

The post ನರೇಂದ್ರ ದಾಮೋದರದಾಸ್ ಮೋದಿ ಎಂಬ ಹೆಸರಿನ ನಾನು : ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ first appeared on Kannada News | suddione.



source https://suddione.com/i-am-narendra-damodardas-modi-sworn-in-as-prime-minister-for-the-third-time/

No comments:

Post a Comment

If u have any queries, Please let us know

Advertisement

Advertisement
(1) My Facebook Page          (2) My YouTube Channel        (3) My Twitter Account   (4) Instagram Account

Pages