Breaking

(1) My Facebook Page          (2) My Instagram Page        (3) My Twitter Account   (4) Instagram Account

Sunday, June 9, 2024

ಕರ್ನಾಟಕದ ಐವರಿದೆ ಸಚಿವ ಸ್ಥಾನ : ಮೋದಿ ಸಂಪುಟದಲ್ಲಿ ಇರುವವರು ಇವರೇ

 

 

ಬೆಂಗಳೂರು: ನರೇಂದ್ರ ಮೋದಿ ಅವರು ಇಂದು ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.‌ ಮೋದಿ ಸಂಪುಟದಲ್ಲಿ ಯಾರೆಲ್ಲಾ ಇರುತ್ತಾರೆ. ಕರ್ನಾಟಕದಿಂದ ಎಷ್ಟು ಜನ ಇರುತ್ತಾರೆ ಎಂಬ ವಿಚಾರ ಎಲ್ಲರಿಗೂ ಸಾಮಾನ್ಯವಾಗಿಯೇ ಕುತೂಹಲ ಮೂಡಿಸಿದೆ. ಒಂದು ಮೂಲದ ಮಾಹಿತಿ ಪ್ರಕಾರ ಐವರಿಗೆ ಕೇಂದ್ರದಲ್ಲಿ ಸ್ಥಾನ ಸಿಗಬಹುದು ಎನ್ನಲಾಗಿದೆ.

ಈಗಾಗಲೇ ಸಂಭಾವ್ಯ ಪಟ್ಟಿ ಬಿಡುಗಡೆಯಾಗಿದ್ದು, ಕುತೂಹಲ ಕೆರಳಿಸಿದೆ. ಕೇಂದ್ರ ಸಚಿವ ಸ್ಥಾನ ಪಡೆಯುವ ಮೂವರಿಗೆ ಇಂದು ಮೋದಿ ಆಹ್ವಾನ ನೀಡಿದ್ದರು. ಪ್ರಹ್ಲಾದ್ ಜೋಶಿ, ಸೋಮಣ್ಣ, ಕುಮಾರಸ್ವಾಮಿ ಅವರನ್ನು ಆಹ್ವಾನ ಮಾಡಲಾಗಿತ್ತು.

ಇಂದು ಮೋದಿ ಮನೆಯಲ್ಲಿಯೇ ಚಹಾಕೂಟದಲ್ಲಿ ಸಾಕಷ್ಟು ಜನ ಸೇರಿದ್ದರು. ಈ ಚಹಾಕೂಟಕ್ಕೆ ವಿ.ಸೋಮಣ್ಣ ಅವರಿಗೂ ಆಹ್ವಾನವಿದ್ದದ್ದು ಮಾತ್ರ ಆಶ್ಚರ್ಯಕ್ಕೆ ಕಾರಣವಾಗಿತ್ತು. ತುಮಕೂರು ಲೋಕಸಭಾ ಕ್ಷೇತ್ರದಿಂದ ಗೆದ್ದಿರುವ ವಿ. ಸೋಮಣ್ಣ ಕೇಂದ್ರ ಸಚಿವರಾಗುವ ಎಲ್ಲಾ ಮುನ್ಸೂಚನೆ ಸಿಕ್ಕಿದೆ.

ಇನ್ನು ಇದೇ ವೇಳೆ ನಿರ್ಮಲಾ ಸೀತರಾಮನ್ ಕೂಡ ಸಭೆಯಲ್ಲಿ ಇದ್ದರು. ಮೋದಿ ಸರ್ಕಾರದಲ್ಲಿಯೇ ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವೆಯಾಗಿದ್ದರು. ಇದೀಗ ಸಭೆಯಲ್ಲಿ ಭಾಗಿಯಾಗಿರುವುದನ್ನು ನೋಡಿದರೆ ಮತ್ತೆ ಕೇಂದ್ರ ಸಚಿವೆಯಾಗುವ ಸಾಧ್ಯತೆ ಇದೆ. ಮತ್ತೊಮ್ಮೆ ಮೋದಿ ಸಂಪುಟದಲ್ಲಿ ಖಾತೆ ಪಡೆಯಲಿದ್ದಾರೆ. ನಿರ್ಮಲಾ ಸೀತರಾಮನ್ ಸದ್ಯ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

The post ಕರ್ನಾಟಕದ ಐವರಿದೆ ಸಚಿವ ಸ್ಥಾನ : ಮೋದಿ ಸಂಪುಟದಲ್ಲಿ ಇರುವವರು ಇವರೇ first appeared on Kannada News | suddione.



source https://suddione.com/there-are-five-ministers-in-karnataka-these-are-the-people-in-modis-cabinet/

No comments:

Post a Comment

If u have any queries, Please let us know

Advertisement

Advertisement
(1) My Facebook Page          (2) My YouTube Channel        (3) My Twitter Account   (4) Instagram Account

Pages