ಸುಮಲತಾ ಆಪ್ತರೇ ಸುಮಲತಾಗೆ ಕೈ ಕೊಡುತ್ತಾರಾ..? ಕುಮಾರಸ್ವಾಮಿ ಅವರನ್ನು ಭೇಟಿಯಾದ ಸಚ್ಚಿದಾನಂದ..!

 

ಬೆಂಗಳೂರು: ಮಂಡ್ಯ ಚುನಾವಣೆ ಎಂದಾಕ್ಷಣ ಎಲ್ಲರ ಕಣ್ಣು ಅರಳುತ್ತದೆ. ಅಲ್ಲಿ ಏನಾಗುತ್ತದೆ ಎಂಬ ಚರ್ಚೆ ಶುರುವಾಗುತ್ತದೆ. ಅದರಲ್ಲೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಲ್ಲರ ಚಿತ್ತ ಮಂಡ್ಯದತ್ತ ನೆಟ್ಟಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿರುವ ಕಾರಣ, ಸುಮಲತಾ ಸ್ಪರ್ಧೆ ಅತಂತ್ರವಾಗಿ ಕಾಣುತ್ತಿದೆ. ಕ್ಷೇತ್ರ ಬಿಟ್ಟುಕೊಟ್ಟು ಬಿಜೆಪಿಯಲ್ಲಿಯೇ ಇರುತ್ತಾರಾ ಅಥವಾ ಸ್ವತಂತ್ರವಾಗಿ ಸ್ಪರ್ಧಿಸಿ, ಮತ್ತೆ ಮಂಡ್ಯ ಜನರ ಮನಸ್ಸು ಗೆಲ್ಲುತ್ತಾರಾ ಎಂಬ ಕುತೂಹಲವಿದ್ದೆ ಇರುತ್ತದೆ. ಇದರ ನಡುವೆ ಸುಮಲತಾ ಅವರ ಆಪ್ತ ಕುಮಾರಸ್ವಾಮಿ ಅವರನ್ನು ಭೇಟಿಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

ಇಂದು ಸುಮಲತಾ ಆಪ್ತ ಸಚ್ಚಿದಾನಂದ ಅವರು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದಾರೆ. ಆಪ್ತ ಸಮಾಲೋಚನೆ ನಡೆಸಿದ್ದಾರೆ. ಚರ್ಚೆಯಲ್ಲಿ ಏನಾಗಿದೆ ಎಂಬುದು ಇನ್ನು ತಿಳಿದಿಲ್ಲ. ಆದರೆ ಆ ಫೋಟೋ ಇಟ್ಟುಕೊಂಡು ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿರುವುದಂತು ಸತ್ಯ.

ಈ ಫೋಟೋ ನೋಡಿದ ಕೆಲವರು ಸುಮಲತಾ ಅವರಿಗೆ ಆಪ್ತರೇ ಕೈಕೊಡುತ್ತಿದ್ದಾರಾ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಚುನಾವಣೆಯ ಹೊಸ್ತಿಲಲ್ಲಿ ಈ ರೀತಿಯ ಬೆಳವಣಿಗೆಗಳು ನಡೆದಿದ್ದು ಸಾಕಷ್ಟು ಚರ್ಚೆಯಾಗುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಹಾಗೂ ಕುಮಾರಸ್ವಾಮಿ ಕುಟುಂಬದಲ್ಲಿ ನೇರಾ ನೇರ ಹಣಾಹಣಿ ಇತ್ತು. ಆಗ ನಿಖಿಲ್ ವಿರುದ್ಧ ಸವಾಲು ಹಾಕಿ, ಸುಮಲತಾ ಅವರ ಗೆಲುವಿಗೆ ಕಾರಣವಾದವರಲ್ಲಿ ಸಚ್ಚಿದಾನಂದ ಅವರ ಪಾತ್ರವೂ ಬಹಳ ದೊಡ್ಡದಿದೆ. ಹೀಗಿರುವಾಗ ಈಗ ಇದ್ದಕ್ಕಿದ್ದ ಹಾಗೇ ಅದೇ ಸಚ್ಚಿದಾನಂದ ಅವರು ಕುಮಾರಸ್ವಾಮಿ ಅವರನ್ನು ಭೇಟಿಯಾದರೆ ಅನುಮಾನಗಳು ಮೂಡುವುದಿಲ್ಲವೇ..?

ಜೊತೆಗೆ ಇನ್ನೊಂದು ವಿಚಾರ ಕೂಡ ಚರ್ಚೆಯಾಗುತ್ತಿದೆ. ಸುಮಲತಾ ಕೂಡ ಮಂಡ್ಯದಿಂದಾನೇ ನಿಲ್ಲುವುದು ಎಂಬ ನಿರ್ಧಾರ ಮಾಡಿದ್ದಾರೆ. ಹೀಗಾಗಿ ವೈರತ್ವವನ್ನು ಮರೆತು ದೋಸ್ತಿ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಾ ಇದೆಯಾ. ಅವರೇ ಏನಾದರೂ ಆಪ್ತರನ್ನು ಮುಂದೆ ಬಿಟ್ಟರಾ..? ಎಂಬ ಪ್ರಶ್ನೆಗಳು ಮೂಡಿದ್ದು, ಇದಕ್ಕೆಲ್ಲಾ ಉತ್ತರ ತಿಳಿಯಬೇಕಿದೆ.

The post ಸುಮಲತಾ ಆಪ್ತರೇ ಸುಮಲತಾಗೆ ಕೈ ಕೊಡುತ್ತಾರಾ..? ಕುಮಾರಸ್ವಾಮಿ ಅವರನ್ನು ಭೇಟಿಯಾದ ಸಚ್ಚಿದಾನಂದ..! first appeared on Kannada News | suddione.

[Collection]

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ