ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿಗೆ ರಾಷ್ಟ್ರ ಮಟ್ಟದ ಟೈಕೊಂಡೋ ಚಾಂಪಿಯನ್‍ಶಿಫ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ

 

 

ಚಿತ್ರದುರ್ಗ :   ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ, 2ನೇ ತರಗತಿಯ ವಿದ್ಯಾರ್ಥಿನಿ ಪೂರ್ವಿಕಾ.ಎಂ.ನೆಗಳಿ  36ನೇ ರಾಷ್ಟ್ರೀಯ ಸಬ್ ಜೂನಿಯರ್  ಕುರುಗಿ ಮತ್ತು 10ನೇ ರಾಷ್ಟ್ರೀಯ ಸಬ್ ಜೂನಿಯರ್ ಪೂರಿಸೆ” ಟೈಕೊಂಡೋ  ಚಾಂಪಿಯನ್‍ಶಿಫ್ 2022-23ನೇ ಸಾಲಿನ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ  ಭಾಗವಹಿಸಿ ಬೆಳ್ಳಿ ಪದಕ (ದ್ವಿತೀಯ) ಪಡೆದಿದ್ದಾರೆ.

ಸ್ಪರ್ಧೆಯು ದಿನಾಂಕ : 28.03.2023 ರಿಂದ ದಿನಾಂಕ : 31.03.2023 ರವೆರೆಗೆ ರಾಜಾಸ್ಥಾನದ ಸ್ಪೋಟ್ರ್ಸ್ ಕಾಂಪ್ಲೆಕ್ಸ್ ವಿಶ್ವವಿದ್ಯಾಲಯ ಕೋಟಾದಲ್ಲಿ ನಡೆದ ಟೈಕೊಂಡೋ  ಚಾಂಪಿಯನ್‍ಶಿಫ್ 2022-23ನಲ್ಲಿ ಸಬ್ ಜೂನಿಯರ್ 16 ವಿಭಾಗದಲ್ಲಿ ಭಾಗವಹಿಸಿ, ಬಹುಮಾನವನ್ನು ಪಡೆದು ಶಾಲೆಗೆ ಹಾಗೂ ರಾಜ್ಯಕ್ಕೆ  ಕೀರ್ತಿ ತಂದಿದ್ದಾರೆ. ಶ್ರೀಮತಿ ಎಂ.ಅನಿತಾ ಈ ಕ್ರೀಡಾಪಟುವಿಗೆ ನಿರಂತರ ಅಭ್ಯಾಸ ನೀಡುವುದರ ಮೂಲಕ ಈ ಸಾಧನೆ ಮಾಡಲು ಸ್ಪೂರ್ತಿ ತುಂಬಿದ್ದಾರೆ.

ಈ ವಿದ್ಯಾರ್ಥಿನಿಗೆ ಸಂಸ್ಥೆಯ ಕಾರ್ಯದರ್ಶಿಗಳಾದ ಬಿ.ವಿಜಯ ಕುಮಾರ್, ಮತ್ತು ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಎಲ್ಲಾ ಶಿಕ್ಷಕ/ಶಿಕ್ಷಕೇತರ ವೃಂದ  ಶ್ಲಾಘಿಸಿ ಅಭಿನಂದಿಸಿರುತ್ತಾರೆ ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಸಿ.ಡಿ. ಸಂಪತ್ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

The post ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿಗೆ ರಾಷ್ಟ್ರ ಮಟ್ಟದ ಟೈಕೊಂಡೋ ಚಾಂಪಿಯನ್‍ಶಿಫ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ first appeared on Kannada News | suddione.



source https://suddione.com/a-student-of-vidya-vikas-vidya-institute-won-silver-medal-in-national-level-taekwondo-championship-competition/

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ