ಭಾರತೀಯ ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಅತ್ಯಂತ ಪ್ರಭಾವಶಾಲೀ ಹಸಿರೌಷಧವಾದ ಬೆಟ್ಟದ ನೆಲ್ಲಿಕಾಯಿ ಒಂದು ಮಾಂತ್ರಿಕ ಕಾಯಿಯಾಗಿದ್ದು, ಅನೇಕ ವ್ಯಾಧಿಗಳನ್ನು ನಿವಾರಿಸುತ್ತದೆ.ಹಿಂದಿನ ಕಾಲದಲ್ಲಿ ಜನರು ಆಯುರ್ವೇದ ಪದ್ಧತಿ ಅನುಸರಿಸುತ್ತಿದ್ದರಿಂದ, ನೆಲ್ಲಿಕಾಯಿಯ ಬಳಕೆ ದಿನನಿತ್ಯದ ವಾಡಿಕೆಯಾಗಿ,ಜನರ ಜೀವನ ಶೈಲಿಯ ಅವಿಭಾಜ್ಯ ಅಂಗವಾಗಿತ್ತು. .
ನೆಲ್ಲಿಕಾಯಿಯನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ,ತಲೆಯಲ್ಲಿ ಕೂದಲು ಉದರುವುದು ನಿಂತು,ಕೂದಲಿನ ಬೆಳವಣಿಗೆ ತುಂಬಾ ಚೆನ್ನಾಗಿ ಆಗುತ್ತದೆ. ನೆಲ್ಲಿಕಾಯಿಯ ಕೆಲವು ಗೃಹೌಷಧಿಗಳು ಕೂದಲಿನ ನೆರತಕ್ಕೆ ಅತ್ಯುತ್ತಮ ಔಷಧಿಯಾಗಿದೆ.
ನೆಲ್ಲಿಕಾಯಿಯನ್ನು ಸಣ್ಣಸಣ್ಣ ತುಂಡುಗಳಾಗಿ ಕತ್ತರಿಸಿ,ಅವುಗಳನ್ನು ನೆರಳಿನಲ್ಲಿ ಚೆನ್ನಾಗಿ ಒಣಗಿಸಿ,
ಒಣಗಿಸಿದ ಚೂರುಗಳನ್ನು ಕರಕಲಾಗುವವರೆಗೆ ತೆಂಗಿನ ಎಣ್ಣೆಯಲ್ಲಿ ಹಾಕಿ ಕುದಿಸಿ.ಕುದಿಸಿದ ಈ ಗಾಢ ಬಣ್ಣದ
ಎಣ್ಣೆ ಕೂದಲಿನ “ನೆರೆತವನ್ನು” ತಡೆಗಟ್ಟಲು ಅತ್ಯುತ್ತಮ
ದಿವ್ಯೌಷಧಿ.
ಒಣಗಿದ ನೆಲ್ಲಿಕಾಯಿ ಚೂರುಗಳನ್ನು ರಾತ್ರಿ ನೀರಿನಲ್ಲಿ ನೆನಸಿ,ಅದನ್ನು ಮರುದಿನ ಬೆಳಿಗ್ಗೆ, ಸ್ನಾನದ
ನಂತರ ಕಡೆಯ ಬಾರಿಗೆ, ನೆಲ್ಲಿಕಾಯಿ ನೆನಸಿಟ್ಟಿದ್ದ
ನೀರೆರೆದುಕೊಳ್ಳಲು ಬಳಸಿದರು ದೇಹಕ್ಕೆ ಹಾಗೂ ಕೂದಲಿಗೆ ಪೋಷಣೆ ನೀಡುತ್ತದೆ.
ನೆಲ್ಲಿಕಾಯಿ ಒಂದು ನೈಸರ್ಗಿಕ ಪ್ರಭಾವಶಾಲಿ ಉತ್ಕರ್ಷಣ ನಿರೋಧಕವಾಗಿದ್ದು,ವಿಟಮಿನ್ C ಯಿಂದ ಹೆಚ್ಚು ಸಮೃದ್ಧವಾಗಿದೆ.
ನೆಲ್ಲಿಕಾಯಿ ಎಣ್ಣೆಯಿಂದ ಕೂದಲನ್ನು ಚೆನ್ನಾಗಿ ಮಸಾಜ್ ಮಾಡಿಕೊಂಡರೆ….! ಸುಖ ನಿದ್ರೆ ಬರುತ್ತೆ.
ನೆಲ್ಲಿಕಾಯಿ ನೆನಸಿದ ನೀರಿನಿಂದ ಮುಖ ತೊಳೆಯುವುದರಿಂದ ಕಣ್ಣಿನ ದೃಷ್ಠಿ ಸುಧಾರಿಸುತ್ತದೆ.
ಅದೇ ನೀರನ್ನು ಕುಡಿಯುವುದರಿಂದ ಮಲಬದ್ಧತೆ
ನಿವಾರಣೆಯಾಗುತ್ತದೆ.
ನೆಲ್ಲಿಕಾಯಿ ಸೇವನೆಯಿಂದ ಮೆದಳು ತುಂಬಾ ಚುರುಕಾಗಿ ಕಾರ್ಯ ನಿರ್ವಹಿಸುತ್ತೆ,ಮರುವಿನ ಸಮಸ್ಯೆ ಸಹಾ ದೂರವಾಗುತ್ತೆ. ತಲೆಭಾರ, ತಲೆನೋವು ನಿವಾರಣೆಯಾಗುತ್ತೆ.

