ಕನ್ನಡ ನಾಡು, ನುಡಿ ರಕ್ಷಣೆ ಎಲ್ಲರ ಕರ್ತವ್ಯ: ತಹಶೀಲ್ದಾರ್‌ ಸಂತೋಷ ಮ್ಯಾಗೇರಿ

ಕನ್ನಡ ನಾಡು, ನುಡಿ ರಕ್ಷಣೆ ಎಲ್ಲರ ಕರ್ತವ್ಯ: ತಹಶೀಲ್ದಾರ್‌ ಸಂತೋಷ ಮ್ಯಾಗೇರಿ

ಕನ್ನಡ ನಾಡು, ನುಡಿ ರಕ್ಷಣೆ ಎಲ್ಲರ ಕರ್ತವ್ಯ: ತಹಶೀಲ್ದಾರ್‌ ಸಂತೋಷ ಮ್ಯಾಗೇರಿ

ಕೊಲ್ಹಾರ: ಪಟ್ಟಣದಲ್ಲಿ ತಾಲ್ಲೂಕು ಆಡಳಿತದಿಂದ ಎಂಪಿಎಸ್ ಶಾಲಾ ಮೈದಾನದ ಸಭಾಂಗಣದಲ್ಲಿ ಭಾನುವಾರ ರಾಜ್ಯೋತ್ಸವದ ಆಚರಿಸಲಾಯಿತು.

ತಹಶೀಲ್ದಾರ್‌ ಸಂತೋಷ ಮ್ಯಾಗೇರಿ ಮಾತನಾಡಿ, ‘ಕನ್ನಡ ನಾಡು ಕಟ್ಟಲು ಶ್ರಮಿಸಿದ ಹೋರಾಟಗಾರ ಹಾಗೂ ಕರ್ನಾಟಕ ರಾಜ್ಯ ಚರಿತ್ರೆ ಮತ್ತು ನಾಡು ನುಡಿಯ ರಕ್ಷಣೆ ಎಲ್ಲರ ಕರ್ತವ್ಯವಾಗಿದೆ’ ಎಂದರು.

ಪ.ಗು.ಸಿದ್ದಾಪುರ ಉಪನ್ಯಾಸ ನೀಡಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ದಸ್ತಗೀರ ಕಲಾದಗಿ ಮಾತನಾಡಿದರು.

ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ನೂತನ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎಸ್.ಬಾಲಗೊಂಡ, ಹೆಸ್ಕಾಂ ಅಧಿಕಾರಿ ಬಾಪು ಇಳಗೇರ, ಕೆಎಸ್‌ಆರ್‌ರ್ಟಿಸಿ ಅಧಿಕಾರಿ ಸುರೇಶ ಚಲವಾದಿ, ನಾಡು ನುಡಿಗೆ ಶ್ರಮಿಸಿದ ಕರವೇ ಅಧ್ಯಕ್ಷ ರವಿ ಗೊಳಸಂಗಿ ಸನ್ಮಾನಿಸಲಾಯಿತು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ರಾಜಮಾ ನದಾಫ ,ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಸುನೀಲ ಮದ್ದಿನ, ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂತೋಷ ಗಣಾಚಾರಿ, ಸಿ.ಎಸ್.ಗಿಡ್ಡಪ್ಪಗೋಳ, ಪಿಎಸ್ಐ ಅಶೋಕ ನಾಯ್ಕ, ಲಕ್ಷ್ಮೀ ತಲ್ಲೂರ, ಎಂ.ಕೆ.ಪುರೋಹಿತ, ಎಸ್.ಎ.ಪಾಟೀಲ, ಎಸ್.ಟಿ.ಯಡಹಳ್ಳಿ,ವಿ.ಜಿ.ಕುಲಕರ್ಣಿ ಇದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ