ರೈತ ಗೀತೆಗೆ ಅವಮಾನ; ಪ್ರಜಾಸೇವೆ ಅಹವಾಲು ಸ್ವೀಕಾರ ಸಭೆಗೆ ಮುತ್ತಿಗೆ

ರೈತ ಗೀತೆಗೆ ಅವಮಾನ; ಪ್ರಜಾಸೇವೆ ಅಹವಾಲು ಸ್ವೀಕಾರ ಸಭೆಗೆ ಮುತ್ತಿಗೆ

ರೈತ ಗೀತೆಗೆ ಅವಮಾನ; ಪ್ರಜಾಸೇವೆ ಅಹವಾಲು ಸ್ವೀಕಾರ ಸಭೆಗೆ ಮುತ್ತಿಗೆ

ಹಾವೇರಿ: ಇಲ್ಲಿನ ಸಿದ್ದಾರೂಢ ಕಾಲೊನಿಯಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಸಭಾಭವನದಲ್ಲಿ ನಡೆದ ಪ್ರಜಾಸೇವಾ ಇಲಾಖೆಯ ಅಹವಾಲು ಸ್ವೀಕಾರ ಸಭೆಯಲ್ಲಿ ರೈತ ಗೀತೆಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ, ರೈತರು ಸಭೆಗೆ ಮುತ್ತಿಗದ ಹಾಕಿ ಆಕ್ರೋಶ ಹೊರಹಾಕಿದರು. ಸಭೆಯನ್ನು ಮುಂದುವರಿಸದಂತೆ ಆಗ್ರಹಿಸಿದರು.

ಸಕ್ಕರೆ ಮತ್ತು ಜವಳಿ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯ ಆರಂಭದಲ್ಲಿ ರೈತ ಗೀತೆ ಹಾಕಲಾಯಿತು. ಆದರೆ, ಯಾರೊಬ್ಬರೂ ಎದ್ದು ನಿಂತು ಗೌರವ ನೀಡಲಿಲ್ಲ.

ಇದರಿಂದ ಆಕ್ರೋಶಗೊಂಡ ರೈತರು, ಹಸಿರು ಶಾಲು ಹಿಡಿದು ಸಭೆಯೊಳಗೆ ಬಂದು ಮುತ್ತಿಗೆ ಹಾಕಿದರು. 'ಸಚಿವರು, ಅಧಿಕಾರಿಗಳು ರೈತ ಗೀತೆಗೆ ಅವಮಾನ‌ ಮಾಡಿದ್ದಾರೆ. ಇದು, ಅನ್ನದಾತರಿಗೆ ಮಾಡುತ್ತಿರುವ ಅವಮಾನ. ನೀವು, ರೈತರು ಬೆಳೆದ ಆಹಾರ ತಿನ್ನುವುದಿಲ್ಲವೆಂದು ಹೇಳಿ, ವಾಪಸು ಹೋಗುತ್ತೇವೆ ಎಂದು ರೈತು ಹೇಳಿದರು‌.

ರೈತರನ್ನು ಸಮಾಧಾನಪಡಿಸಿದ ಜಿಲ್ಲಾಧಿಕಾರಿ ವಿಜಯ‌ ಮಹಾಂತೇಶ ದಾನಮ್ಮನವರ ಹಾಗೂ ಸಚಿವ ರುದ್ರಪ್ಪ‌ ಲಮಾಣಿ , ರೈತಗೀತೆಯನ್ನು ಪುನಃ ಹಾಕಿದರು‌. ಎಲ್ಲರೂ ಎದ್ದು ನಿಂತು ಗೌರವ ಸೂಚಿಸಿದರು.‌ ನಂತರವೇ ಸಭೆ ಮುಂದುವರಿಯಿತು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ