ದಲಿತರ ಮೇಲೆ ಹಲ್ಲೆ, ಬಾಲಕಿ ಮೇಲೆ ಅತ್ಯಾಚಾರ: ನ್ಯಾಯಾಧೀಶರಿಂದ ತನಿಖೆಗೆ ಆಗ್ರಹ

ದಲಿತರ ಮೇಲೆ ಹಲ್ಲೆ, ಬಾಲಕಿ ಮೇಲೆ ಅತ್ಯಾಚಾರ: ನ್ಯಾಯಾಧೀಶರಿಂದ ತನಿಖೆಗೆ ಆಗ್ರಹ

ದಲಿತರ ಮೇಲೆ ಹಲ್ಲೆ, ಬಾಲಕಿ ಮೇಲೆ ಅತ್ಯಾಚಾರ: ನ್ಯಾಯಾಧೀಶರಿಂದ ತನಿಖೆಗೆ ಆಗ್ರಹ

ಧಾರವಾಡ: ಕಲಘಟಗಿ ತಾಲ್ಲೂಕಿನ ಮಿಶ್ರಿಕೋಟಿಯ ಅಭಿಷೇಕ್ ಚಲವಾದಿ ಹಾಗೂ ಅಳ್ನಾವರ ತಾಲ್ಲೂಕಿನ ಕೋಗಿಲಗೇರಿಯ ಶ್ರೀಕಾಂತ ಚಲವಾದಿ ಮೇಲೆ ಹಲ್ಲೆ ಹಾಗೂ ಅಳ್ನಾವರ ತಾಲ್ಲೂಕಿನ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಗಳನ್ನು ಜಿಲ್ಲಾ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು. ದೂರು ದಾಖಲಿಸಲು ಕ್ರಮ ವಹಿಸದ, ದೂರುದಾರಗೆ ಬೆದರಿಕೆ ಹಾಕಿದ್ದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ತಪ್ಪಿತಸ್ಥ ಪೊಲೀಸರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆಗಳವರು ಪ್ರತಿಭಟನೆ ನಡೆಸಿದರು.

ನಗರದ ಜುಬಿಲಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಡಿಸಿದರು. ‘ನ್ಯಾಯಕ್ಕಾಗಿ ಹೋರಾಟ’ ಘೋಷಣೆ ಕೂಗಿದರು.

ಯುವಕ ಅಭಿಷೇಕ್ ಚಲವಾದಿ ಅವರ ಮೇಲೆ ಹಲ್ಲೆ ನಡೆದಿದೆ. ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಇದೆ. ಅಭಿಷೇಕ್‌ ಕುಟುಂಬದವರ ಮೇಲೆ ಪ್ರತಿ ದೂರು ದಾಖಲಿಸಿದ್ಧಾರೆ. ಹಣ್ಣಿನ ವ್ಯಾಪಾರಿ ಶ್ರೀಕಾಂತ್‌ ಚಲವಾದಿ ಮೇಲೆ ಹಲ್ಲೆ ನಡೆಸಿ ಹಣ ದೋಚಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ತಂದ ನಂತರ ಮೂರು ದಿನಗಳ ಬಳಿಕ ದೂರು ದಾಖಲಿಸಲಾಗಿದೆ ಎಂಬ ಆರೋಪವಿದೆ. ಪ್ರತಿ ದೂರು ದಾಖಲಿಸಲಾಗಿದೆ.

ಬಾಲಕಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀಸಂಧಾನ ಮಾಡಿಸುವ ಪಯತ್ನ ಅಳ್ನಾವರ ಠಾಣೆಯಲ್ಲಿ ನಡೆದಿತ್ತು ಎಂಬ ಆರೋಪ ಇದೆ. ಈ ಪ್ರಕರಣಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಕಾರರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು.

ಕಲಘಟಗಿ ಇನ್‌ಸ್ಪೆಕ್ಟರ್‌ ಹಾಗೂ ಅಳ್ನಾವರ ಪಿಎಸ್‌ಐ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಪರಮೇಶ್ವರ್ ಕಾಳೆ, ರಾಜೇಶ್ ಕೋಟೆಣ್ಣವರ, ತುಳಜಪ್ಪ ಪೂಜಾರ್, ಲಕ್ಷ್ಮಣ ಬಕ್ಕಾಯಿ, ಲಕ್ಷ್ಮಣ ದೊಡಮನಿ, ಮಲ್ಲಿಕಾರ್ಜುನ ಬೆಳಾರದ, ಲಕ್ಷ್ಮಣ್ ಚಲವಾದಿ, ವಿನಾಯಕ ಕುಂದಕೋಳ, ಶಶಿಧರ ಕೋಲಕಾರ, ರಾಘು ದೊಂಡಬಳ್ಳಿ, ಹರ್ಷವರ್ಧನ್ ಮಲ್ಲಿಗವಾಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ