ವೈಯಕ್ತಿಕ ಸಂಘರ್ಷಕ್ಕೂ ಗ್ರಿಡ್ ಹೋರಾಟಕ್ಕೂ ಸಂಬಂಧವಿಲ್ಲ: ಸಚಿನ್‌ ಕೊಪ್ಪ

ವೈಯಕ್ತಿಕ ಸಂಘರ್ಷಕ್ಕೂ ಗ್ರಿಡ್ ಹೋರಾಟಕ್ಕೂ ಸಂಬಂಧವಿಲ್ಲ: ಸಚಿನ್‌ ಕೊಪ್ಪ

ವೈಯಕ್ತಿಕ ಸಂಘರ್ಷಕ್ಕೂ ಗ್ರಿಡ್ ಹೋರಾಟಕ್ಕೂ ಸಂಬಂಧವಿಲ್ಲ: ಸಚಿನ್‌ ಕೊಪ್ಪ

ತ್ಯಾಗರ್ತಿ: ‘ನಾರಗೋಡು ಕೊಪ್ಪ ವ್ಯಾಪ್ತಿಯ ನಿವಾಸಿಗಳಾದ ಸದಾನಂದಗೌಡ ಮತ್ತು ನಾಗರಾಜಗೌಡ ಅವರ ನಡುವಿನ ಸಂಘರ್ಷಕ್ಕೂ ತ್ಯಾಗರ್ತಿ ವಿದ್ಯುತ್ ಗ್ರಿಡ್ ಹೋರಾಟ ಸಮಿತಿಗೂ ಯಾವುದೇ ಸಂಬಂಧವಿಲ್ಲ’ ಎಂದು ವೀರಶೈವ ಯುವ ವೇದಿಕೆಯ ಅಧ್ಯಕ್ಷ ಸಚಿನ್‌ ಕೊಪ್ಪ ಸ್ಪಷ್ಟಪಡಿಸಿದರು.

ಸಮೀಪದ ನಾರಗೋಡು, ಕೊಪ್ಪ, ಕ್ಯಾದಿಕೊಪ್ಪ ಗ್ರಾಮಸ್ಥರ ಜತೆ ನಡೆದ ಸಮಾಲೋಚನಾ ಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ‘ವೈಯಕ್ತಿಕ ಸಂಘರ್ಷವನ್ನು ತಿರುಚಿ ಗ್ರಿಡ್ ಹೋರಾಟಗಾರರ ಮೇಲಿನ ಹಲ್ಲೆ ಎಂಬುದಾಗಿ ಬಿಂಬಿಸುತ್ತಿರುವುದು ಖಂಡನೀಯ’ ಎಂದರು.

‘ಸದಾನಂದಗೌಡ ಮತ್ತು ನಾಗರಾಜಗೌಡರ ನಡುವೆ ಹೊಡೆದಾಟ ನಡೆದಿದ್ದು ಅವರಿಬ್ಬರ ಭಿನ್ನಾಭಿಪ್ರಾಯದಿಂದ. ನಾಗರಾಜಗೌಡ ಅವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಒತ್ತಡ ಹೇರುವ ದುರುದ್ದೇಶದಿಂದ, ಇದು ಗ್ರಿಡ್ ಹೋರಾಟಗಾರರ ಮೇಲೆ ನಡೆದ ಹಲ್ಲೆ ಎಂಬ ತಂತ್ರಗಾರಿಕೆ ಮಾಡಿರುವ ಸದಾನಂದಗೌಡ ಮತ್ತು ಕುಮಾರಗೌಡ ಅವರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಗ್ರಾಮಸ್ಥ ಜಗದೀಶ್‌ ಗೌಡ ಸಭೆಯಲ್ಲಿ ಒತ್ತಾಯಿಸಿದರು.

‘ತಮ್ಮ ಮನೆಯ ಕೆಲಸಕ್ಕೆ ಬರುತ್ತಿಲ್ಲ ಎಂಬ ಕಾರಣಕ್ಕೆ ಸದಾನಂದಗೌಡ ಅವರು ನನ್ನ ಪತಿ ನಾಗರಾಜ ಗೌಡ ಅವರನ್ನು ಪ್ರಚೋದಿಸಿದ್ದಾರೆ. ಈ ವೇಳೆ ಪರಸ್ಪರ ಹಲ್ಲೆಯಾಗಿದೆ. ಸದಾನಂದಗೌಡ ಅವರು ಕುಡುಗೋಲಿನಿಂದ ಪತಿಯ ಬಲಗೈಯನ್ನು ಗಾಯಗೊಳಿಸಿದ್ದಾರೆ. ಜತೆಗೆ ತಮ್ಮ ಕಾಲಿಗೂ ಗಾಯ ಮಾಡಿಕೊಂಡು ಆಸ್ಪತ್ರೆ ಸೇರಿದ್ದು, ಘಟನೆಯನ್ನು ಗ್ರಿಡ್ ಹೋರಾಟಕ್ಕೆ ತಳಕು ಹಾಕುತ್ತಿದ್ದಾರೆ’ ಎಂದು ನಾಗರಾಜಗೌಡ ಅವರ ಪತ್ನಿ ಗೀತಾ ಆರೋಪಿಸಿದರು.

ಸತೀಶ್‌ ಗೌಡ, ರಾಜುಗೌಡ, ಬಸವರಾಜ ಗೌಡ, ನಾಗರಾಜ ಗೌಡ, ಸ್ವಾಮಿಗೌಡ, ಸಂತೋಷ್, ವಿಜಯ ಉಮೇಶ್ ಇದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ