
ಕನ್ನಡ ಮಾಧ್ಯಮ ಶಾಲೆಗಳ ಅಸ್ತಿತ್ವಕ್ಕೆ ಆತಂಕ: ಎ.ಬಿ. ರಾಮಚಂದ್ರಪ್ಪ
ಸಂತೇಬೆನ್ನೂರು: ‘ಕರ್ನಾಟಕ ಪಬ್ಲಿಕ್ ಶಾಲೆ ಯೋಜನೆಯಿಂದ ಕನ್ನಡ ಮಾಧ್ಯಮ ಶಾಲೆಗಳ ಭವಿಷ್ಯ ಡೋಲಾಯಮಾನವಾಗಲಿದೆ ಎಂಬ ಚರ್ಚೆ ಜೋರಾಗಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಬಿ. ರಾಮಚಂದ್ರಪ್ಪ ತಿಳಿಸಿದರು.
ಇಲ್ಲಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಂಗಳವಾರ ಕನ್ನಡ ಜಾಗೃತಿ ಸಮಿತಿ ಜಿಲ್ಲಾ ಘಟಕ ಹಾಗೂ ಸರ್ಕಾರಿ ಪದವಿ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಪನ್ಯಾಸ ಮಾಲಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಕನ್ನಡ ಚೈತನ್ಯಶೀಲ ಭಾಷೆ’ ಎಂದು ಉಪನ್ಯಾಸಕ ವಿಜಯ್ ಕುಮಾರ್ ಹೇಳಿದರು.
ಶಿಕ್ಷಕ ಎಂ. ಮಾರುತಿ ಮಾತನಾಡಿದರು. ಪ್ರಾಂಶುಪಾಲ ಎಸ್. ಸುರೇಶ್, ಪ್ರಾಧ್ಯಾಪಕರಾದ ಎಚ್. ಗಿರಿಸ್ವಾಮಿ, ಜ್ಯೋತಿ ಟಿ.ಪಿ., ದಿವ್ಯಾ ಆರ್, ಎನ್. ಮಲ್ಲಯ್ಯ, ಕೆ.ಎಂ.ವೀರೇಂದ್ರ, ಡಿ.ಜಿ. ಪುನೀತ್ ಕುಮಾರ್, ಡಿ. ಸ್ವಾಮಿ, ಪವನ್ ಕುಮಾರ್, ಕೆ. ಮೋಹನ್, ಕನ್ನಡ ಜಾಗೃತಿ ಸಮಿತಿ ಜಿಲ್ಲಾ ಘಟಕದ ಸದಸ್ಯ ಕೆ.ಎಸ್. ವೀರೇಶ್ ಪ್ರಸಾದ್ ಇದ್ದರು.