ಮೋದಿ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಮೋದಿ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಮೋದಿ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಚಿಕ್ಕಬಳ್ಳಾಪುರ: ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ಶಾರದಾ ನವರಾತ್ರಿ ಆಚರಣೆಯ ಮೂರನೇ ದಿನವಾದ ಮಂಗಳವಾರ ಚಂದ್ರಘಂಟಾ ರೂಪದಲ್ಲಿ ದೇವಿಯನ್ನು ಆರಾಧಿಸಲಾಯಿತು. ಪವಮಾನ ಹೋಮ ಮತ್ತು ಆಶ್ಲೇಷ ಬಲಿಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.

ಹೋಮದ ಪೂರ್ಣಾಹುತಿಯನ್ನು ನೆರವೇರಿಸಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಉಚಿತ ಶಿಕ್ಷಣ ಮತ್ತು ಆರೋಗ್ಯ ಸೇವೆಯ ಮೂಲಕ ಸದ್ಗುರು ಮಧುಸೂದನ ಸಾಯಿ ಅವರು ಜಗತ್ತಿಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಅವರ ಜೊತೆಗೆ ಇಡೀ ಸಮಾಜ, ದೇಶ ನಿಲ್ಲಬೇಕಾಗಿದೆ ಎಂದರು.

ದೇಶದ ಅತ್ಯಂತ ಹಿಂದುಳಿದ ಜಿಲ್ಲೆಗಳ ಪೈಕಿ ಕೆಲವನ್ನು ಆದ್ಯತೆಯ ಮೇರೆಗೆ ಅಭಿವೃದ್ಧಿಪಡಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಪಟ್ಟಿ ಸಿದ್ಧಪಡಿಸಿದ್ದಾರೆ. ಅದರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯೂ ಸೇರಿದೆ. ಇಲ್ಲಿನ ಚಟುವಟಿಕೆಗಳನ್ನು ಅವರು ಸ್ವತಃ ಪರಿಶೀಲಿಸುತ್ತಿರುತ್ತಾರೆ. ಸದ್ಗುರು ಅವರ ಸಂಸ್ಥೆಗಳು ಕಾರ್ಯನಿರ್ವಹಿಸುವ ಮೊದಲಿನ ಪರಿಸ್ಥಿತಿಯನ್ನು ಇಂದಿನ ಸ್ಥಿತಿಗೆ ಹೋಲಿಸಿದರೆ ವ್ಯತ್ಯಾಸ ನಿಚ್ಚಳವಾಗಿ ಗೋಚರಿಸುತ್ತದೆ ಎಂದು ವಿವರಿಸಿದರು.

ಸದ್ಗುರು ಮಧುಸೂದನ ಸಾಯಿ ಮಾತನಾಡಿ, ನಮ್ಮ ದೇಶವು ಮಹಿಳೆಯರು ಪುರುಷರಷ್ಟೇ ಸಮಾನರು ಎನ್ನುವುದಲ್ಲ; ಪುರುಷರಿಗಿಂತಲೂ ಶ್ರೇಷ್ಠ ಎಂದೇ ಪ್ರತಿಪಾದಿಸುತ್ತದೆ. ಜೀವನಕ್ಕೆ ಅಗತ್ಯವಾಗಿ ಬೇಕಿರುವ ಎಲ್ಲಕ್ಕೂ ಮಾತೃತ್ವವನ್ನು ಕಲ್ಪಿಸಿ ಗೌರವಿಸಲಾಗುತ್ತಿದೆ ಎಂದರು.

ಜಗತ್ತಿನ ಯಾವುದೇ ಗಂಡಸು ಪ್ರಸವವೇದನೆ ಅನುಭವಿಸಲಾರ, ಮಗುವನ್ನು ಗರ್ಭದಲ್ಲಿ ಹೊತ್ತು ಸಾಕಲಾರ. ಈ ಮಹತ್ವದ ಜವಾಬ್ದಾರಿಯನ್ನು ಮಹಿಳೆಗೆ ನೀಡಿರುವ ದೇವರು ತನ್ನ ಸೃಷ್ಟಿಯಲ್ಲಿಯೇ ಅವಳಿಗೆ ಆದ್ಯತೆ ನೀಡಿದ್ದಾನೆ. ನಿಜವಾದ ಅರ್ಥದಲ್ಲಿ ಸಮಾಜವನ್ನು ಮಹಿಳೆಯರೇ ಮುನ್ನಡೆಸುತ್ತಿದ್ದಾರೆ ಎಂದು ಹೇಳಿದರು.

ಶೃಂಗೇರಿಯಿಂದ ಬಂದಿರುವ ಋತ್ವಿಜರ ತಂಡದ ಮುಖ್ಯಸ್ಥ ಯಜ್ಞನಾರಾಯಣ ಭಟ್, ನವರಾತ್ರಿಯ 3ನೇ ದಿನದ ಮಹತ್ವ ವಿವರಿಸಿದರು.

ಪುಟ್ಟ ಬಾಲಕಿಯರು ‘ಭಂಡಾಸುರ ವಧೆ’ ನೃತ್ಯ ಪ್ರದರ್ಶಿಸಿದರು. ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಪ್ರಶಾಂತಿ ಬಾಲ ಮಂದಿರ ಟ್ರಸ್ಟ್ ಅಧ್ಯಕ್ಷ ಬಿ.ಎನ್.ನರಸಿಂಹಮೂರ್ತಿ ಇತರರು ಪಾಲ್ಗೊಂಡಿದ್ದರು.

ಸತ್ಯ ಸಾಯಿ ಗ್ರಾಮಕ್ಕೆ ಜಪಾನ್ ರೈತರ ನಿಯೋಗ

ಕರ್ನಾಟಕದ ರಾಗಿ ಬೆಳೆ ಪದ್ಧತಿಯಲ್ಲಿ ಆಗುತ್ತಿರುವ ಪರಿವರ್ತನೆ ತಿಳಿದುಕೊಳ್ಳಲು ಜಪಾನ್‌ನ 15 ರೈತರ ನಿಯೋಗವು ‘ಅಗ್‌ ಬಯೊಟೆಕ್’ ಕಂಪನಿಯ ತಾಕಾ ಮಸಾಸನನ್ ನೇತೃತ್ವದಲ್ಲಿ ಮಂಗಳವಾರ ಸತ್ಯ ಸಾಯಿ ಗ್ರಾಮಕ್ಕೆ ಭೇಟಿ ನೀಡಿತು.

ಜಪಾನ್ ನಿಯೋಗಕ್ಕೆ ‘ಸುಭಿಕ್ಷಾ ಸಾವಯವ ಕೃಷಿಕರ ಬಹುರಾಜ್ಯ ಸಹಕಾರ ಸಂಘ’ದ ಮುಖ್ಯಸ್ಥ ಅ.ಶ್ರೀ.ಆನಂದ ಮತ್ತು ಸಾಯಿ ಶ್ಯೂರ್‌ ನಿರ್ದೇಶಕ ಭರಣಿ ಪ್ರಸಾದ್‌ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಕರ್ನಾಟಕದ ರಾಗಿ ಆಧಾರಿತ ಉತ್ಪನ್ನಗಳಿಗೆ ಜಪಾನ್‌ನಲ್ಲಿ ಮಾರುಕಟ್ಟೆ ಕಲ್ಪಿಸುವುದು, ಬೆಳೆ ಪದ್ಧತಿ ತಂತ್ರಜ್ಞಾನ ವಿನಿಮಯದ ಕುರಿತು ಅರ್ಥಪೂರ್ಣ ಚರ್ಚೆ ನಡೆಯಿತು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ