ಮೂಡಿಗೆರೆಯಲ್ಲಿ ಆಧಾರ್ ಸೇವೆಗಾಗಿ ಸಾರ್ವಜನಿಕರ ಪರದಾಟ

ಮೂಡಿಗೆರೆಯಲ್ಲಿ ಆಧಾರ್ ಸೇವೆಗಾಗಿ ಸಾರ್ವಜನಿಕರ ಪರದಾಟ

ಮೂಡಿಗೆರೆಯಲ್ಲಿ ಆಧಾರ್ ಸೇವೆಗಾಗಿ ಸಾರ್ವಜನಿಕರ ಪರದಾಟ

ಮೂಡಿಗೆರೆ: ಪಟ್ಟಣದಲ್ಲಿ ಆಧಾರ್‌ ತಿದ್ದುಪಡಿ ಸೇವೆಗೆ ಸೂಕ್ತ ವ್ಯವಸ್ಥೆ ಇಲ್ಲದೇ ಜನರು ನಿತ್ಯವೂ ಪರದಾಡುವಂತಾಗಿದೆ.

ಹೊಸದಾಗಿ ಆಧಾರ್ ಮಾಡಿಸಲು, ಕಾರ್ಡ್‌ಗಳಲ್ಲಿ ನಮೂದಾಗಿರುವ ತಪ್ಪು ಸರಿ ಪಡಿಸಲು, ಆಧಾರ್‌ನೊಂದಿಗೆ ಮೊಬೈಲ್‌ ಸಂಖ್ಯೆ ಜೋಡಿಸುವ ಕಾರ್ಯ ಸೇರಿದಂತೆ ವಿವಿಧ ಕೆಲಸಗಳಿಗಾಗಿ ಸಾರ್ವಜನಿಕರು ಪ್ರತಿದಿನವೂ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದಲ್ಲಿ ಈ ಹಿಂದೆ ಆಧಾರ್‌ ನೋಂದಣಿ ಹಾಗೂ ತಿದ್ದುಪಡಿ ಮಾಡುತ್ತಿದ್ದ ಎಸ್‌.ಬಿ.ಐ ಹಾಗೂ ಬಿಎಸ್‌ಎನ್‌ಎಲ್‌ ಕಚೇರಿಯಲ್ಲಿ ಸೇವೆ ಸ್ಥಗಿತಗೊಳಿಸಲಾಗಿದ್ದು, ಅಂಚೆ ಕಚೇರಿ ಹಾಗೂ ಬ್ಯಾಂಕ್‌ ಆಫ್‌ ಬರೋಡದ ಶಾಖೆಯಲ್ಲಿ ಮಾತ್ರ ಆಧಾರ್‌ ತಿದ್ದುಪಡಿ ಮಾಡಲಾಗುತ್ತಿದೆ. ಈ ಕೇಂದ್ರದಲ್ಲಿ ಪ್ರತಿದಿನ ಸೀಮಿತ ಸಂಖ್ಯೆಯ ಜನರಿಗೆ ಮಾತ್ರ ಸೇವೆ ಒದಗಿಸಲು ಸಾಧ್ಯವಾಗುತ್ತಿರುವುದರಿಂದ, ಪ್ರತಿ ದಿನವೂ ಬೆಳಿಗ್ಗೆ ಟೋಕನ್‌ ನೀಡಲಾಗುತ್ತದೆ. ಈ ಟೋಕನ್‌ ಪಡೆದುಕೊಳ್ಳಲು ಗ್ರಾಮೀಣ ಭಾಗದ ಜನರು ನಸುಕಿನಲ್ಲಿಯೇ ಸೇವಾ ಕೇಂದ್ರಗಳ ಮುಂಭಾಗದಲ್ಲಿ ಜಮಾಯಿಸುತ್ತಾರೆ.

ಸೇವಾ ಕೇಂದ್ರವು ಬೆಳಿಗ್ಗೆ 10ಕ್ಕೆ ತೆರೆಯುತ್ತಿದ್ದು ಅಲ್ಲಿಯವರೆಗೂ ಜನರು ಸರದಿಯಲ್ಲಿ ನಿಂತು ಕಾಯುವಂತಾಗಿದೆ. ಪ್ರತಿ ದಿನ 30 ಟೋಕನ್‌ ಮಾತ್ರ ನೀಡಲಾಗುತ್ತದೆ. ಟೋಕನ್‌ ಪಡೆದವರು ತಮ್ಮ ಸರದಿ ಬರುವವರೆಗೂ ಕಾದು ಕುಳಿತು ಸೇವೆ ಪಡೆದರೆ, ಟೋಕನ್‌ ಸಿಗದವರು ಮರುದಿನ ಮತ್ತೆ ಪ್ರಯತ್ನಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಜನರು.

ಹೊಸ ಆಧಾರ್ ಕಾರ್ಡ್ ನೋಂದಣಿ, ಹೆಸರು, ವಿಳಾಸ, ಜನ್ಮದಿನಾಂಕ ತಿದ್ದುಪಡಿ ಹಾಗೂ ಮೊಬೈಲ್ ಸಂಖ್ಯೆ ಜೋಡಣೆ ಸೇರಿದಂತೆ ವಿವಿಧ ಸೇವೆಗಳಿಗಾಗಿ ಜನರು ಕೇಂದ್ರಗಳಿಗೆ ಬರುತ್ತಿದ್ದಾರೆ. ಇಂದಿನ ದಿನಗಳಲ್ಲಿ ಬ್ಯಾಂಕ್ ವ್ಯವಹಾರ, ವಿದ್ಯಾರ್ಥಿವೇತನ, ಸರ್ಕಾರಿ ಸೌಲಭ್ಯಗಳು ಹಾಗೂ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಆಧಾರ್ ಪ್ರಮುಖ ದಾಖಲೆಯಾಗಿರುವುದರಿಂದ ಆಧಾರ್‌ ತಿದ್ದುಪಡಿಯ ಅಗತ್ಯ ಹೆಚ್ಚಾಗಿದೆ. ವಿಶೇಷವಾಗಿ ಪಡಿತರ ಚೀಟಿಯ ಇ-ಕೆವೈಸಿ ಹಾಗೂ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಕೆಲಸಗಳಿಗಾಗಿ ಆಧಾರ್‌ಗೆ ಮೊಬೈಲ್ ಸಂಖ್ಯೆ ಜೋಡಣೆ ಕಡ್ಡಾಯವಾಗಿದ್ದರಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಟ್ಟಣಕ್ಕೆ ಬರುತ್ತಿದ್ದಾರೆ. ಸರ್ಕಾರವು ವಿವಿಧ ಯೋಜನೆಗಳಿಗೆ ಆಧಾರ್‌ ಕಾರ್ಡ್‌ ಕಡ್ಡಾಯಗೊಳಿಸಿದೆ. ಆದರೆ, ಆಧಾರ್‌ ತಿದ್ದುಪಡಿ ಮಾಡಿಸಲು ಇಡೀದಿನ ಕಾದು ಕುಳಿತುಕೊಳ್ಳಬೇಕಾಗಿದೆ. ಸರ್ಕಾರವು ಸೇವಾ ಕೇಂದ್ರಗಳನ್ನು ಹೆಚ್ಚಿಸಿ, ಜನರಿಗಾಗುತ್ತಿರುವ ಸಮಸ್ಯೆಯನ್ನು ತಪ್ಪಿಸಬೇಕು ಎಂದು ಆಧಾರ್‌ ತಿದ್ದುಪಡಿಗಾಗಿ ಬಂದಿದ್ದ ಜನ್ನಾಪುರದ ಮಂಜುಳ ಒತ್ತಾಯಿಸಿದರು.

‘ವೃದ್ಧರು, ಅಂಗವಿಕಲರಿಗೆ ಆದ್ಯತೆ ನೀಡಿ’

ಆಧಾರ್‌ಗೆ ಸಂಬಂಧಪಟ್ಟ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಜನರಿಗೆ ತ್ವರಿತವಾಗಿ ಸೇವೆ ಒದಗಿಸಲು ವಿಶೇಷ ಆಧಾರ್ ಸೇವಾ ಘಟಕಗಳು ಹಾಗೂ ಹೆಚ್ಚುವರಿ ಸಿಬ್ಬಂದಿ ನೇಮಿಸಿ, ಸಕಾಲದಲ್ಲಿ ಸೇವೆ ದೊರೆಯುವಂತೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು. ವೃದ್ಧರು, ವಿಶೇಷಚೇತನರಿಗೆ ಆದ್ಯತೆ ನೀಡಬೇಕು ಎಂದು ಛಲವಾದಿ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್‌ ಬೆಟ್ಟಗೆರೆ ಹೇಳಿದರು.

261024-126-1905558959

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ