'ಮಾಡಿ ಕಲಿ' ವಿಧಾನ ಸೂಕ್ತ: ಡಾ.ನಾರಾಯಣ ಸಭಾಹಿತ್

'ಮಾಡಿ ಕಲಿ' ವಿಧಾನ ಸೂಕ್ತ: ಡಾ.ನಾರಾಯಣ ಸಭಾಹಿತ್

'ಮಾಡಿ ಕಲಿ' ವಿಧಾನ ಸೂಕ್ತ: ಡಾ.ನಾರಾಯಣ ಸಭಾಹಿತ್

ಉಡುಪಿ: ವಿದ್ಯಾರ್ಥಿಗಳ ಪ್ರತಿಭೆ ಹಾಗೂ ಕೌಶಲ ವೃದ್ಧಿಗೆ ವಸ್ತುಪ್ರದರ್ಶನಗಳು ಸಹಕಾರಿಯಾಗಿವೆ. ಪಠ್ಯಕ್ರಮದ ಹೊರಗೆ 'ಮಾಡಿ-ಕಲಿ' ವಿಧಾನದಿಂದ ಮಾದರಿಗಳನ್ನು ತಯಾರಿಸಿ, ಅದನ್ನು ಸಮಾಜ ಮುಖಿಯಾಗಿ ಉಪಯೋಗಿಸಲು ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳು ಕಾರ್ಯತತ್ಪರರಾಗಬೇಕು ಎಂದು ಅಕಾಡೆಮಿ ಆಫ್ ಜನರಲ್ ಎಜ್ಯು ಕೇಷನ್‌ನ ಕಾರ್ಯದರ್ಶಿ ಡಾ.ನಾರಾಯಣ ಸಭಾಹಿತ್ ಹೇಳಿದರು.

ಎಂಜಿಎಂ ಕಾಲೇಜಿನ ವಿಜ್ಞಾನ, ಕಂಪ್ಯುಟರ್ ವಿಜ್ಞಾನ, ವಾಣಿಜ್ಯ ಹಾಗೂ ಮಾನವಿಕ ವಿಭಾಗಗಳು ಆಯೋಜಿಸಿದ 'ಸಿನರ್ಜಿ 2026' ವಸ್ತುಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಅಕಾಡೆಮಿ ಅಫ್ ಜನರಲ್ ಎಜ್ಯುಕೇಷನ್‌ನ ಆಡಳಿತಾಧಿಕಾರಿ ಕೆ.ಶ್ರೀಧರ ರಂಗನಾಥ ಪೈ, ಉಪಪ್ರಾಂಶುಪಾಲ ಎಂ.ವಿಶ್ವನಾಥ ಪೈ, ಟಿ.ಮೋಹನದಾಸ್ ಪೈ ಕೌಶಲ ಅಭಿವೃದ್ಧಿ ಕೇಂದ್ರದ ನಿರ್ದೇಶಕ ಟಿ.ರಂಗ ಪೈ, ಪ.ಪೂ.ಕಾಲೇಜಿನ ಪ್ರಾಂಶುಪಾಲೆ ಎ.ಮಾಲತಿ ದೇವಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ವೀರಾ ಐಡಾ ಪಿಂಟೋ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲೆ ಗಾಯತ್ರಿ ಪೈ ಸ್ವಾಗತಿಸಿದರು. ಸಿನರ್ಜಿ ಸಂಚಾಲಕಿ ಶೈಲಜಾ ಎಚ್. ವಂದಿಸಿದರು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಸುಚಿತ್ ಕೋಟ್ಯಾನ್ ನಿರೂಪಿಸಿರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ