ಪ್ರಥಮ ಚಿಕಿತ್ಸೆಯ ಅರಿವು ಎಲ್ಲರಿಗೂ ಮುಖ್ಯ: ಗಣನಾಥ ಎಕ್ಕಾರು

ಪ್ರಥಮ ಚಿಕಿತ್ಸೆಯ ಅರಿವು ಎಲ್ಲರಿಗೂ ಮುಖ್ಯ: ಗಣನಾಥ ಎಕ್ಕಾರು

ಪ್ರಥಮ ಚಿಕಿತ್ಸೆಯ ಅರಿವು ಎಲ್ಲರಿಗೂ ಮುಖ್ಯ: ಗಣನಾಥ ಎಕ್ಕಾರು

ಉಡುಪಿ: ಪ್ರಥಮ ಚಿಕಿತ್ಸೆಯ ಅರಿವು ಎಲ್ಲರಿಗೂ ಮುಖ್ಯ ಎಂದು ಜಿಲ್ಲಾ ರೆಡ್ ಕ್ರಾಸ್ ಕಾರ್ಯದರ್ಶಿ ಗಣನಾಥ ಎಕ್ಕಾರು ಹೇಳಿದರು.

ಉಡುಪಿಯ ವಿದ್ಯಾರತ್ನ ನರ್ಸಿಂಗ್ ಕಾಲೇಜಿನಲ್ಲಿ ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆ ಮತ್ತು ವಿದ್ಯಾರತ್ನ ನರ್ಸಿಂಗ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಈಚೆಗೆ ನಡೆದ ಒಂದು ದಿನದ ಪ್ರಥಮ ಚಿಕಿತ್ಸೆ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲೆ ಅನಿತಾ ಸಿ. ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದ್ದರು. ಡಾ. ಎ.ವಿ. ಬಾಳಿಗಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಕಾವ್ಯ ಹಾಗೂ ಮೂಳೆ ತಜ್ಞ ಡಾ. ಸುರೇಶ್ ಶೆಣೈ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ನರ್ಸಿಂಗ್ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕಿ ಪ್ರೀತಿ ಫರ್ನಾಂಡಿಸ್ ಸ್ವಾಗತಿಸಿದರು. ಮೆರಿಟಾ ಮೆಂಡೋನ್ಸಾ ವಂದಿಸಿದರು.

ಉಪಪ್ರಾಂಶುಪಾಲ ಡಾ. ರಮೇಶ್ ಎಂ. ಕೆ., ಆಡಳಿತಾಧಿಕಾರಿ ಡಾ. ರವಿ ಪಾಲನ್, ಮರಿಯಾ ಆಳ್ವ, ಮಾಲಿನಿ ಮೆರಿಟ ಕುಂದರ್ ಉಪಸ್ಥಿತರಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ