ಲಕ್ಷ್ಮೇಶ್ವರ: ಸೂರಣಗಿ ಗ್ರಾಮದಲ್ಲಿ ಕೆರೆ ಪುನಶ್ಚೇತನ ಕಾಮಗಾರಿ ಆರಂಭ

ಲಕ್ಷ್ಮೇಶ್ವರ: ಸೂರಣಗಿ ಗ್ರಾಮದಲ್ಲಿ ಕೆರೆ ಪುನಶ್ಚೇತನ ಕಾಮಗಾರಿ ಆರಂಭ

ಲಕ್ಷ್ಮೇಶ್ವರ: ಸೂರಣಗಿ ಗ್ರಾಮದಲ್ಲಿ ಕೆರೆ ಪುನಶ್ಚೇತನ ಕಾಮಗಾರಿ ಆರಂಭ

ಲಕ್ಷ್ಮೇಶ್ವರ: ತಾಲ್ಲೂಕಿನ ಸೂರಣಗಿ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದಲ್ಲಿ ವಿಬಿ–ಜಿ ರಾಮ್ ಜಿ ಯೋಜನೆಯಡಿ ಮಂಗಳವಾರದಿಂದ ಕೆರೆ ಪುನಶ್ಚೇತನ ಕಾಮಗಾರಿ ಆರಂಭಿಸಲಾಗಿದೆ.

ಮಂಗಳವಾರ 600 ಹಾಗೂ ಬುಧವಾರ 700 ಜನ ಕೂಲಿಕಾರರು ಕಾಮಗಾರಿಯಲ್ಲಿ ಪಾಲ್ಗೊಂಡಿದ್ದರು. ಗ್ರಾಮದ ಎಲ್ಲ ವಾರ್ಡ್‍ಗಳಲ್ಲಿನ ಕಾರ್ಮಿಕರಿಗೆ ಸರದಿ ಪ್ರಕಾರ ಕೆಲಸ ನೀಡಲು ನಿರ್ಧರಿಸಲಾಗಿದ್ದು, ಅಂದಾಜು ಒಂದು ತಿಂಗಳವರೆಗೆ ಕೆಲಸ ನಡೆಯಲಿದೆ.

ಈ ಕುರಿತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುಳಾ ಹಕಾರಿ ಮಾತನಾಡಿ, ‘ತಾಲ್ಲೂಕಿನ ಗ್ರಾಮೀಣ ಭಾಗದ ಜನ ಕೆಲಸ ಅರಸಿಕೊಂಡು ಬೇರೆ ಕಡೆ ಹೋಗಬಾರದು. ಇದ್ದ ಊರಲ್ಲಿಯೇ ಅವರಿಗೆ ಯೋಜನೆಯಡಿ ಕೆಲಸ ಕೊಡಲು ಸರ್ಕಾರ ನಿರ್ಧರಿಸಿದೆ’ ಎಂದರು.

ವಿಬಿ–ಜಿ ರಾಮ್ ಜಿ ಯೋಜನೆಯ ಸಹಾಯಕ ನಿರ್ದೇಶಕ ಕೃಷ್ಣಪ್ಪ ಧರ್ಮರ ಮಾತನಾಡಿ, ‘ಕಾರ್ಮಿಕರು ಸರ್ಕಾರ ನಿಗದಿಪಡಿಸಿದ ರೀತಿಯಲ್ಲಿ ಕೆಲಸ ಮಾಡಬೇಕು. ತಾವು ಮಾಡುವ ಯಾವುದೇ ಕಾಮಗಾರಿ ತಮ್ಮ ಊರಿಗೆ ಅನುಕೂಲ ಆಗುತ್ತದೆ ಎಂಬ ಕಾಳಜಿ ಕಾರ್ಮಿಕರಲ್ಲಿ ಇರಬೇಕು. ಕೆರೆ ಪುನಶ್ಚೇತನಗೊಂಡರೆ ಮಳೆಗಾಲದಲ್ಲಿ ನೀರು ಶೇಖರಣೆ ಆಗಲು ಅನುಕೂಲ ಆಗುತ್ತದೆ’ ಎಂಬ ಅರಿವು ಕಾರ್ಮಿಕರಲ್ಲಿ ಇರಬೇಕು. ತಾಲ್ಲೂಕಿನಲ್ಲಿ ಕೆಲಸ ಬೇಕಾದರೆ ಅರ್ಜಿ ನಮೂನೆ-6 ಸಲ್ಲಿಸಬೇಕು’ ಎಂದು ಹೇಳಿದರು.

ಪಿಡಿಒ ಬಸವರಾಜ ಬಳೂಟಗಿ, ಕಾರ್ಯದರ್ಶಿ ಎಫ್.ಎಸ್. ಹಳ್ಯಾಳ ಇದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ