ಮುಜರಾಯಿ ದೇವಸ್ಥಾನಗಳ ಮಂಗಳದ್ರವ್ಯಕ್ಕೆ ₹5 ಸಾವಿರ ನೀಡಿ: ಸಚಿವರಿಗೆ ಮನವಿ

ಮುಜರಾಯಿ ದೇವಸ್ಥಾನಗಳ ಮಂಗಳದ್ರವ್ಯಕ್ಕೆ ₹5 ಸಾವಿರ ನೀಡಿ: ಸಚಿವರಿಗೆ ಮನವಿ

ಮುಜರಾಯಿ ದೇವಸ್ಥಾನಗಳ ಮಂಗಳದ್ರವ್ಯಕ್ಕೆ ₹5 ಸಾವಿರ ನೀಡಿ: ಸಚಿವರಿಗೆ ಮನವಿ

ಬೆಂಗಳೂರು: ‘ಮುಜರಾಯಿ ಇಲಾಖೆ ವ್ಯಾಪ್ತಿಯ ‘ಸಿ’ ಗುಂಪಿನ ದೇವಸ್ಥಾನಗಳ ಪೂಜಾ ಕಾರ್ಯಗಳ ಮಂಗಳದ್ರವ್ಯಕ್ಕಾಗಿ ಪ್ರತಿ ತಿಂಗಳು ₹ 5 ಸಾವಿರ ಮಂಜೂರು ಮಾಡಬೇಕು’ ಎಂದು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟವು ಸಚಿವ ಕೆ.ಎಸ್‌.ಬಸವಂತಪ್ಪ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದೆ.

ಒಕ್ಕೂಟದ ಅಧ್ಯಕ್ಷ ಕೆ.ಇ.ರಾಧಾಕೃಷ್ಣ, ಪ್ರಧಾನ ಕಾರ್ಯದರ್ಶಿ ಕೆ.ಎಸ್‌.ಎನ್. ದೀಕ್ಷಿತ್ ನೇತೃತ್ವದ ನಿಯೋಗವು ಸಚಿವರಿಗೆ ಎಂಟು ಬೇಡಿಕೆಗಳ ಪ‍ತ್ರವನ್ನು ಸಲ್ಲಿಸಿದ್ದು, ಕೂಡಲೇ ಅವುಗಳನ್ನು ಈಡೇರಿಸಬೇಕೆಂದು ಕೋರಿದೆ.

‘ರಾಜ್ಯದಲ್ಲಿ 36,217 ‘ಸಿ’ ಗುಂಪಿನ ದೇವಸ್ಥಾನಗಳಿದ್ದು, ಅವುಗಳ ಆದಾಯ ಕಡಿಮೆ ಇದೆ. ಗ್ರಾಮೀಣ ಹಾಗೂ ಗ್ರಾಮದೇವತೆಗಳ ದೇವಸ್ಥಾನಗಳಲ್ಲಿ 20 ಸಾವಿರ ಅರ್ಚಕರಿದ್ದು, ಬಹುತೇಕರು ದಲಿತ ಮತ್ತು ಅತಿ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. ಅವರಿಗೆ ರಾಜ್ಯ ಸರ್ಕಾರವು ಮಾಸಿಕ ತಸ್ತೀಕನ್ನು ₹4 ಸಾವಿರದಿಂದ ₹6 ಸಾವಿರಕ್ಕೆ ಏರಿಕೆ ಮಾಡಿರುವುದು ಶ್ಲಾಘನೀಯ. ಅಂತೆಯೇ ಹೂ, ನೈವೇದ್ಯ, ಎಣ್ಣೆ ಸೇರಿದಂತೆ ಪೂಜಾ ಸಾಮಗ್ರಿ ಮತ್ತು ದೇಗುಲ ನಿರ್ವಹಣೆಗೆ ₹ 5 ಸಾವಿರ ನೀಡಬೇಕು’ ಎಂದು ಮನವಿ ಮಾಡಿದೆ.

‘ಇಲಾಖೆಯು ಒತ್ತುವರಿಯಾಗಿದ್ದ ದೇವಸ್ಥಾನಗಳ 10 ಸಾವಿರ ಎಕರೆ ಭೂಮಿಯನ್ನು ವಶಕ್ಕೆ ಪಡೆದಿದ್ದು, ಇದನ್ನು ಸದುಪಯೋಗ ಮಾಡಿಕೊಳ್ಳಲು ಎ.ಟಿ.ರಾಮಸ್ವಾಮಿ ವರದಿ ಅನುಷ್ಠಾನ ಗೊಳಿಸಬೇಕು. ದೇವಸ್ಥಾನಗಳ ಮಳಿಗೆದಾರರ ಬಾಡಿಗೆ ಪರಿಷ್ಕರಣೆ ಮಾಡಬೇಕು. ಅರ್ಚಕರಿಗೆ ಆಗಮದ ಕುರಿತು ತರಬೇತಿ ನೀಡಬೇಕು. ಅರ್ಚಕರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಬೇಕು. ಪ್ರತಿ ದೇವಸ್ಥಾನದಲ್ಲೂ ನಿರ್ಮಲ ಶೌಚಾಲಯ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಕೋರಿದೆ. ‌

‘ಹಿಂದೂ ದೇವಸ್ಥಾನಗಳ ಹುಂಡಿ ಹಣ ಬೇರೆ ಮತಗಳ ಧಾರ್ಮಿಕ ಕೇಂದ್ರಗಳಿಗೆ ವಿನಿಯೋಗ ಆಗುತ್ತಿದೆ ಎಂಬ ಅಪಪ್ರಚಾರ ನಡೆಯುತ್ತಿದ್ದು, ಅದರ ತಡೆಗೆ ಎಲ್ಲ ದೇಗುಲಗಳಲ್ಲಿ ಸೂಚನಾ ಫಲಕ ಅಳವಡಿಸಬೇಕು’ ಎಂದೂ ಮನವಿ ಮಾಡಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ