ಔರಾದ್‌| 20 ದಿನಗಳಿಂದ ಬಾರದ ಕುಡಿಯುವ ನೀರು; ಸಾರ್ವಜನಿಕರಿಗೆ ಸಂಕಷ್ಟ

ಔರಾದ್‌| 20 ದಿನಗಳಿಂದ ಬಾರದ ಕುಡಿಯುವ ನೀರು; ಸಾರ್ವಜನಿಕರಿಗೆ ಸಂಕಷ್ಟ

ಔರಾದ್‌| 20 ದಿನಗಳಿಂದ ಬಾರದ ಕುಡಿಯುವ ನೀರು; ಸಾರ್ವಜನಿಕರಿಗೆ ಸಂಕಷ್ಟ

ಔರಾದ್: ಪಟ್ಟಣದ ಜನರಿಗೆ ಕಳೆದ 20 ದಿನಗಳಿಂದ ನಲ್ಲಿ ನೀರು ಪೂರೈಕೆ ಸ್ಥಗಿತವಾಗಿ ಜಲ ಸಂಕಟ ಎದುರಾಗಿದೆ.ಪಟ್ಟಣಕ್ಕೆ ನೀರು ಪೂರೈಸುವ ಹಾಲಹಳ್ಳಿ ಬ್ಯಾರೇಜ್ 15 ದಿನಗಳ ಹಿಂದೆಯೇ ಖಾಲಿಯಾಗಿದ್ದು, ಬ್ಯಾರೇಜ್‌ಗೆ ಕಾರಂಜಾ ನೀರು ಹರಿಸುವ ಭರವಸೆ ಹುಸಿಯಾಗಿದ್ದು, ಕುಡಿಯುವ ನೀರು ಅಭಾವದಲ್ಲಿ ಜನ ದಸರಾ ಹಬ್ಬ ಆಚರಿಸಬೇಕಾಯಿತು.

ಕುಡಿಯುವ ನೀರು ಪೂರೈಕೆ ಸ್ಥಗಿತವಾದ ಹಿನ್ನೆಲೆಯಲ್ಲಿ ಜನ ಅಹೋರಾತ್ರಿ ಪರದಾಡುತ್ತಿದ್ದಾರೆ. ಕೆಲ ವಾರ್ಡ್‌ಗಳಿಗೆ ಟ್ಯಾಂಕರ್ ನೀರು ಪೂರೈಸಿದರೂ ಜನ ಅದಕ್ಕಾಗಿ ಹೊಡೆದಾಡಬೇಕಿದೆ. ಸಾಕಷ್ಟು ಜನ ₹600ರಿಂದ ₹800 ಕೊಟ್ಟು ಟ್ಯಾಂಕರ್ ನೀರು ಖರೀದಿಸುತ್ತಿದ್ದಾರೆ.

‘ನಮ್ಮ ಗಲ್ಲಿಯಲ್ಲಿ ಒಂದು ಕೊಳವೆ ಬಾವಿ ಇದೆ. ಅದರಲ್ಲೂ ನೀರು ಕಡಿಮೆ ಆಗಿದೆ. ಅದಕ್ಕಾಗಿ ಇಡೀ ದಿನ ಸಾಲುಗಟ್ಟಿ ನಿಲ್ಲಬೇಕಾಗಿದೆ. ಪಟ್ಟಣ ಪಂಚಾಯಿತಿಯವರು ಟ್ಯಾಂಕರ್ ನೀರು ಕಳುಹಿಸುತ್ತಿಲ್ಲ. ಹೀಗಾಗಿ ನಾವು ಹೇಗೆ ಬದುಕಬೇಕು’ ಎಂದು ಬೌದ್ಧ ನಗರ ನಿವಾಸಿ ತಿಪ್ಪಮ್ಮ ರಾಮಣ್ಣ, ಸುನಿತಾ ಶೇಷಾರಾವ, ಲಲಿತಾ ಬಸವರಾಜ ಆಕ್ರೋಶ ವ್ಯಕ್ತಪಡಿಸಿದರು.

‘ನಾವು ಆರಂಭದಲ್ಲೇ ತೇಗಂಪೂರ ಕೆರೆ ಬಳಿ ಬಾವಿಯಲ್ಲಿ ಸಾಕಷ್ಟು ನೀರಿದೆ. ಅದನ್ನು ಪೂರೈಸಲು ವ್ಯವಸ್ಥೆ ಮಾಡಿ ಎಂದು ಹೇಳಿದೆವು. ಆದರೆ ನಮ್ಮ ಮಾತು ಕೇಳದೆ ಕಾರಂಜಾ ನೀರು ಬರುತ್ತೆ ಎಂದು ಹೇಳಿದರು. ಆದರೆ ಈಗ ಅದು ಬರಲ್ಲ ಎಂದು ಜನರಿಗೆ ದಿಕ್ಕು ತಪ್ಪಿಸುವ ಕೆಲಸ ಅಧಿಕಾರಿಗಳು ಮಾಡುತ್ತಿದ್ದಾರೆ. ಹೀಗಾಗಿ ನೀರು ಪೂರೈಸದ ಸ್ಥಳೀಯಾಡಳಿತದ ವಿರುದ್ಧ ಮಾನವ ಹಕ್ಕು ಆಯೋಗಕ್ಕೆ ದೂರು ಕೊಟ್ಟಿದ್ದೇವೆ’ ಎಂದು ಸಾಮಾಜಿಕ ಕಾರ್ಯಕರ್ತ ಅನೀಲ ಜಿರೋಬೆ ತಿಳಿಸಿದರು

‘ಹುಸಿ ಭರವಸೆ ನೀಡಿದ ಅಧಿಕಾರಿಗಳು’

20 ದಿನಗಳ ಹಿಂದೆ ನೀರು ಪೂರೈಕೆ ಸ್ಥಗಿತವಾದಾಗ ಕಾರಂಜಾ ಜಲಾಶಯದಿಂದ ನೀರು ಹರಿಸಿ ನಿಮಗೆ ವಾರದಲ್ಲಿ ಯಥಾಸ್ಥಿತಿ ನೀರು ಪೂರೈಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ಈಗ ಕಾರಂಜಾ ನೀರು ಬರಲ್ಲ, ತೇಗಂಪೂರ ನೀರು ಪೂರೈಸುವುದಾಗಿ ಹೇಳುತ್ತಾ ದಿನ ನೂಕುತ್ತಿದ್ದಾರೆ ಎಂದು ದಲಿತ ಸೇನೆ ತಾಲ್ಲೂಕು ಅಧ್ಯಕ್ಷ ಸುನಿಲ ಮಿತ್ರಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಕಿಡಿಕಾರಿದರು.

‘ಪ.ಪಂ. ಕಚೇರಿಗೆ ಮುತ್ತಿಗೆ‌’

‘ಪಟ್ಟಣದ ಜನರಿಗೆ ಕುಡಿಯುವ ನೀರು ಪೂರೈಸುವಲ್ಲಿ ವಿಫಲವಾದ ಪಟ್ಟಣ ಪಂಚಾಯಿತಿ ಆಡಳಿತ ವ್ಯವಸ್ಥೆ ವಿರುದ್ಧ ಹೋರಾಟ ನಡೆಸಲು ಜನ ತೀರ್ಮಾನಿಸಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳಾಗಲಿ, ಜಿಲ್ಲಾಧಿಕಾರಿಯಾಗಲಿ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸದೇ ಇರುವುದು ಜನವಿರೋಧಿ ಕ್ರಮವಾಗಿದೆ. ಹೀಗಾಗಿ ಇದೇ 30ರಂದು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪಟ್ಟಣ ಪಂಚಾಯಿತಿಗೆ ಮುತ್ತಿಗೆ ಹಾಕಲಾಗುವುದು’ ಎಂದು ಸಾಮಾಜಿಕ ಕಾರ್ಯಕರ್ತ ಅನೀಲ ಜಿರೋಬೆ ತಿಳಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ