Weekly Horoscope: ಈ 5 ರಾಶಿಯವರಿಗೆ ಅದೃಷ್ಟದ ವಾರ; ಹೆಜ್ಜೆಹೆಜ್ಜೆಗೂ ಯಶಸ್ಸು, ಒಲಿಯಲಿದೆ ಧನಲಕ್ಷ್ಮೀ!

Weekly Horoscope: ಈ 5 ರಾಶಿಯವರಿಗೆ ಅದೃಷ್ಟದ ವಾರ; ಹೆಜ್ಜೆಹೆಜ್ಜೆಗೂ ಯಶಸ್ಸು, ಒಲಿಯಲಿದೆ ಧನಲಕ್ಷ್ಮೀ!

Weekly Horoscope: ಈ 5 ರಾಶಿಯವರಿಗೆ ಅದೃಷ್ಟದ ವಾರ; ಹೆಜ್ಜೆಹೆಜ್ಜೆಗೂ ಯಶಸ್ಸು, ಒಲಿಯಲಿದೆ ಧನಲಕ್ಷ್ಮೀ!

Weekly Horoscope : ಸೆಪ್ಟೆಂಬರ್ ಮೂರನೇ ವಾರವು ಬಹಳ ವಿಶೇಷವಾಗಿರುವುದು. ಈ ವಾರ ಗಣೇಶ ಚತುರ್ಥಿಯೂ ಇದೆ. ಜ್ಯೋತಿಷ್ಯದ ಪ್ರಕಾರ, ಈ ವಾರವು ಅನೇಕರಿಗೆ ಒಂದು ಮಹತ್ವದ ತಿರುವು ನೀಡಲಿದೆ. ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯಿಂದಾಗಿ, ಈ ವಾರ ಕೆಲವು ರಾಶಿಯವರ ಅದೃಷ್ಟ ಹೆಚ್ಚುವುದು. ಆದರೆ, ಇನ್ನು ಕೆಲವರಿಗೆ ಈ ವಾರ ಸವಾಲಿನಿಂದ ಕೂಡಿರಬಹುದು. ಹಾಗಿದ್ದರೆ ಈ ವಾರ ಯಾರಿಗೆ ಶುಭ ಮತ್ತು ಯಾವ ರಾಶಿಯವರಿಗೆ ಅಶುಭ ಫಲವನ್ನು ನೀಡುತ್ತದೆ ನೋಡೋಣ.

ಮೇಷ ರಾಶಿಯವರಿಗೆ ಈ ವಾರವು ಉತ್ತಮವಾಗಿರುವುದು. ಕೆಲಸದಲ್ಲಿ ನಿಮ್ಮ ಪ್ರಯತ್ನಗಳಿಗೆ ಪ್ರಶಂಸೆ ಸಿಗುವುದು. ನಿಮಗೆ ಹೊಸ ಜವಾಬ್ದಾರಿಯನ್ನು ವಹಿಸಬಹುದು. ವ್ಯಾಪಾರಸ್ಥರಿಗೆ ಹೊಸ ಅವಕಾಶಗಳು ಸಿಗುವುದು. ಈ ವಾರ ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಆದರೆ, ಅನಗತ್ಯ ಖರ್ಚುಗಳ ಬಗ್ಗೆಯೂ ಎಚ್ಚರ ಇರಲಿ. ಒಂದು ಪ್ರಮುಖ ಕೌಟುಂಬಿಕ ಸಮಸ್ಯೆ ಚರ್ಚೆಗೆ ಬರಬಹುದು. ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು.

ವೃಷಭ ರಾಶಿಯವರಿಗೆ ಈ ವಾರ ಸ್ಥಿರತೆ ಮತ್ತು ಪ್ರಗತಿಗೆ ದಾರಿ ಮಾಡಿಕೊಡುವುದು. ಕಳೆದ ಕೆಲವು ದಿನಗಳಿಂದ ನಿಂತು ಹೋಗಿದ್ದ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆಯಿದೆ. ಮೇಲಧಿಕಾರಿಗಳಿಂದ ನಿಮ್ಮ ಕೆಲಸಕ್ಕೆ ಬೆಂಬಲ ಸಿಗುವುದು. ಆರ್ಥಿಕ ಲಾಭ ಗಳಿಸುವುದಕ್ಕೆ ಉತ್ತಮ ಅವಕಾಶ ಸಿಗುವುದು. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರುವುದು. ಆರೋಗ್ಯವು ಉತ್ತಮವಾಗಿರುವುದು.

ಈ ವಾರ ಕೆಲಸದ ಹೊರೆ ಹೆಚ್ಚಾಗುವುದು. ಒಂದೇ ಸಮಯದಲ್ಲಿ ಅನೇಕ ಕೆಲಸಗಳನ್ನು ನಿರ್ವಹಿಸಬೇಕಾಗುವುದು. ಸರಿಯಾದ ಯೋಜನೆ ಬಹಳ ಮುಖ್ಯವಾಗಿರುತ್ತದೆ. ಉದ್ಯೋಗ ಅಥವಾ ವ್ಯವಹಾರದಲ್ಲಿ ಹೊಸ ಅವಕಾಶಗಳು ಒಲಿದು ಬರವುದು. ಆದಾಯ ಮತ್ತು ಖರ್ಚಿನ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವುದು ಅವಶ್ಯಕ. ಅನಿರೀಕ್ಷಿತವಾಗಿ ಖರ್ಚು ಎದುರಾಗಬಹುದು. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ. ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ.

ಈ ವಾರ ಕರ್ಕಾಟಕ ರಾಶಿಯವರಿಗೆ ವಿಶೇಷವಾಗಿ ಸಕಾರಾತ್ಮಕವಾಗುವ ಸಾಧ್ಯತೆಯಿದೆ. ಕಚೇರಿಯಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು. ನಿಮ್ಮ ಕೆಲಸಕ್ಕೆ ಮೇಲಧಿಕಾರಿಗಳಿಂದ ಮೆಚ್ಚುಗೆ ಸಿಗುವುದು. ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಅವಕಾಶ ಸಿಗುವುದು. ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಉತ್ತಮ ಅವಕಾಶ ಸಿಗುವುದು. ಕುಟುಂಬಕ್ಕೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಿರಿ. ಆರೋಗ್ಯದ ದೃಷ್ಟಿಯಿಂದ ನಿದ್ರೆ ಮತ್ತು ವಿಶ್ರಾಂತಿಗೆ ವಿಶೇಷ ಗಮನ ಕೊಡಿ.

ಈ ವಾರ ಸಿಂಹ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗುವುದು.ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಸಿಗುವುದು. ಪ್ರಮುಖ ಕೆಲಸವನ್ನು ಪೂರ್ಣಗೊಳಿಸುವಿರಿ. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಒಣ ಪ್ರತಿಷ್ಟೆಗೆ ಬಿದ್ದು ಅನಗತ್ಯವಾಗಿ ಖರ್ಚು ಮಾಡವ ಬುದ್ದಿಯನ್ನು ನಿಲ್ಲಿಸಿ. ಕುಟುಂಬದ ಸದಸ್ಯರಿಗೆ ನಿಮ್ಮ ಸಹಾಯ ಬೇಕಾಗಬಹುದು. ಅಹಂಕಾರ ಬದಿಗಿಟ್ಟು ನಿಮ್ಮ ಸಂಗಾತಿಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಿ. ಸಂಬಂಧವು ಬಲಗೊಳ್ಳುವುದು.

ಕನ್ಯಾ ರಾಶಿಯವರಿಗೆ ಈ ವಾರ ವಿಶೇಷವಾಗಿರುವುದು. ಕೆಲಸದಲ್ಲಿ ಉತ್ತಮ ಪ್ರಗತಿಯಾಗುವುದು. ಹೊಸ ಉದ್ಯೋಗ ಅಥವಾ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ಹಣಕಾಸಿನ ವಿಷಯಗಳಲ್ಲಿ ಲಾಭವಾಗುವುದು. ಎಲ್ಲಾ ವಿಷಯಗಳನ್ನು ಸರಿಯಾಗಿ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳಿ. ಮನೆಯಲ್ಲಿ ಸಂತೋಷದ ವಾತಾವರಣ ಇರುವುದು. ಹಳೆಯ ತಪ್ಪು ತಿಳುವಳಿಕೆ ನಿವಾರಣೆಯಾಗುವುದು.

ತುಲಾ ರಾಶಿಯವರಿಗೆ ಇದು ಅದೃಷ್ಟದ ವಾರವಾಗಿರುವುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಹೊಸ ಅವಕಾಶಗಳು ಸಿಗಬಹುದು. ಕಚೇರಿಯಾಗಲಿ, ಮನೆಯಾಗಲಿ ನಿಮ್ಮ ಮಾತಿಗೆ ಮನ್ನಣೆ ಸಿಗುವುದು. ಹಣದ ಸಮಸ್ಯೆ ನೀಗುವುದು. ನಿಮ್ಮ ಕೆಲಸಕ್ಕೆ ಮೇಲಧಿಕಾರಿಗಳಿಂದ ಮೆಚ್ಚುಗೆ ಸಿಗುವುದು.
ಕೈಯ್ಯಲ್ಲಿ ಹಣ ಉಳಿಯುವುದು ಆದರೂ ಹೂಡಿಕೆ ಮಾಡುವಲ್ಲಿ ಆತುರ ಬೇಡ.

ವೃಶ್ಚಿಕ ರಾಶಿ (Scorpio)

ಕಠಿಣ ಪರಿಶ್ರಮಕ್ಕೆ ಉತ್ತಮ ಫಲ ಸಿಗುವುದು. ವೃತ್ತಿಜೀವನದಲ್ಲಿ ಹೊಸ ಜವಾಬ್ದಾರಿಗಳು ಸಿಗಬಹುದು. ನಿಮ್ಮ ಕೆಲಸಕ್ಕೆ ಮೇಲಧಿಕಾರಿಗಳ ಬೆಂಬಲ ಸಿಗುವುದು. ಆರ್ಥಿಕ ಲಾಭಕ್ಕಾಗಿ ಅವಕಾಶಗಳು ಸಿಗುವುದು. ನಿಂತು ಹೋಗಿರುವ ಕೆಲಸಗಳು ಮತ್ತೆ ಚುರುಕು ಪಡೆಯುವುದು. ಆರೋಗ್ಯವು ಸಾಮಾನ್ಯವಾಗಿಯೇ ಇರುವುದು. ಆದರೆ ಅತಿಯಾದ ಕೆಲಸದ ಒತ್ತಡದಿಂದಾಗಿ ದಣಿವಾಗಬಹುದು.

ಧನು ರಾಶಿ (Sagittarius)

ಈ ವಾರ ನಿಮ್ಮ ವೃತ್ತಿ ಮತ್ತು ಆರ್ಥಿಕ ಪ್ರಗತಿಯಾಗುವ ಲಕ್ಷಣಗಳಿವೆ. ಕೆಲಸದಲ್ಲಿ ಹೊಸ ಅವಕಾಶಗಳು ಸಿಗುವುದು. ವ್ಯವಹಾರದಲ್ಲಿ ಹೊಸ ಒಪ್ಪಂದಗಳನ್ನು ಮಾಡಿಕೊಳ್ಳಬೇಕಾಗಬಹುದು. ಆರ್ಥಿಕ ಪರಿಸ್ಥಿತಿ ಕ್ರಮೇಣ ಸುಧಾರಿಸುವುದು. ಹಳೆಯ ಸ್ನೇಹಿತರ ಭೇಟಿಯಿಂದ ಲಾಭವಾಗುವುದು. ಆರೋಗ್ಯ ವಿಷಯದ ಬಗ್ಗೆ ಕಾಳಜಿ ಅಗತ್ಯ. ಪ್ರಯಾಣ ಮಾಡುವಾಗ ಸಾಕಷ್ಟು ಎಚ್ಚರಿಕೆ ವಹಿಸಿ.

ಈ ವಾರ ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸುವುದು ಸಾಧ್ಯವಾಗುತ್ತದೆ. ವೃತ್ತಿಜೀವನದಲ್ಲಿ ಹೊಸ ಜವಾಬ್ದಾರಿಗಳು ಸಿಗುತ್ತವೆ. ವ್ಯವಹಾರದಲ್ಲಿ ಹೊಸ ಸಂಪರ್ಕಗಳು ಬೆಳೆಯುತ್ತವೆ. ಬಾಕಿ ಇರುವ ಹಣಕಾಸಿನ ವಹಿವಾಟನ್ನು ಬಗೆಹರಿಸಬೇಕಾಗುವುದು. ಕುಟುಂಬದ ವಾತಾವರಣವು ಸಂತೋಷವಾಗಿರುವುದು. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.

ಕೆಲಸದಲ್ಲಿ ಕೆಲವು ಸಕಾರಾತ್ಮಕ ಬದಲಾವಣೆಗಳಾಗುವುದು. ಹೊಸ ಜನರನ್ನು ಭೇಟಿಯಾಗುವ ಸಾಧ್ಯತೆ ಇದೆ. ವೃತ್ತಿ ಅಥವಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಯೋಜನವಾಗುವುದು. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು. ಅನಗತ್ಯ ಖರೀದಿಗಳು ಮತ್ತು ಹಠಾತ್ ಖರ್ಚುಗಳನ್ನು ನಿಯಂತ್ರಿಸುವ ಅವಶ್ಯಕತೆ ಇದೆ. ಸಂಗಾತಿಯೊಂದಿಗೆ ಶಾಂತವಾಗಿ ವರ್ತಿಸಿ.

ಈ ವಾರ ವೆಚ್ಚಗಳು ಹೆಚ್ಚಾಗುವುದು. ಕೆಲಸದಲ್ಲಿ ಕೆಲಸದ ಒತ್ತಡ ಹೆಚ್ಚಾಗಬಹುದು. ತಾಳ್ಮೆಯಿಂದ ಕೆಲಸ ಮಾಡಿದರೆ ಜಯ ಸಿಗುವುದು. ವ್ಯವಹಾರಕ್ಕೆ ಸಂಬಂಧಿಸಿದಂತೆ ನಿರ್ಧಾರ ತಗೆದುಕೊಳ್ಳುವಾಗ ಸರಿಯಾಗಿ ಯೋಚಿಸಿ ತೀರ್ಮಾನ ತೆಗೆದುಕೊಳ್ಳಿ. ಆತುರಪಡಬೇಡಿ. ಮಾತಿನ ಮೇಲೂ ನಿಯಂತ್ರಣ ಇರಲಿ. ನಿಮ್ಮ ಮಾತಿನಿಂದ ಯಾರಿಗೂ ನೋವಾಗದಂತೆ ನೋಡಿಕೊಳ್ಳಿ.

horoscope zodiac signs

horoscope zodiac signs

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ