Toll Pass Update: ಲೋಕಲ್ ಡ್ರೈವರ್ಸ್‌ಗೆ ಗುಡ್‌ನ್ಯೂಸ್: ಕೇವಲ ₹350ಗೆ ತಿಂಗಳಿಡೀ ಟೋಲ್ ಟೆನ್ಶನ್ ಇಲ್ಲ

Toll Pass Update: ಲೋಕಲ್ ಡ್ರೈವರ್ಸ್‌ಗೆ ಗುಡ್‌ನ್ಯೂಸ್: ಕೇವಲ ₹350ಗೆ ತಿಂಗಳಿಡೀ ಟೋಲ್ ಟೆನ್ಶನ್ ಇಲ್ಲ

Toll Pass Update: ಲೋಕಲ್ ಡ್ರೈವರ್ಸ್‌ಗೆ ಗುಡ್‌ನ್ಯೂಸ್: ಕೇವಲ ₹350ಗೆ ತಿಂಗಳಿಡೀ ಟೋಲ್ ಟೆನ್ಶನ್ ಇಲ್ಲ

Toll Pass Good News: ಒಂದು ನಗರದಿಂದ ಇನ್ನೊಂದು ನಗರಕ್ಕೆ ಹೆದ್ದಾರಿ ಮೂಲಕ ಸಾಗುವವರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಗುಡ್‌ನ್ಯೂಸ್ ನೀಡಿದೆ. ನಿಯಮಿತವಾಗಿ ಸಂಚಾರ ಮಾಡುವ ಸವಾರರನ್ನು ಗುರಿಯಾಗಿಟ್ಟುಕೊಂಡು 350 ರೂ. ಮೌಲ್ಯದ ತಿಂಗಳ ಟೋಲ್ ಪಾಸ್ ಅನ್ನು ಪ್ರಾಧಿಕಾರ ಪರಿಚಯಿಸಿದೆ. ಇದು ಹೆಚ್ಚಾಗಿ ಸ್ಥಳೀಯ ತ್ರಿಚಕ್ರ, ನಾಲ್ಕು ಚಕ್ರ ಅದಕ್ಕೂ ಹೆಚ್ಚಿನ ಚಕ್ರದ ವಾಹನ ಸವಾರರಿಗೆ ಅನುಕೂಲವಾಗಲಿದೆ.

ಹೊಸದಾಗಿ 350 ರೂಪಾಯಿ ಮಾಸಿಕ ಟೋಲ್ ಪಾಸ್ ಮೂಲಕ ಪ್ಲಾಜಾಗಳಲ್ಲಿ ಟೋಲ್ ಶುಲ್ಕ ಪಾವತಿ ಸುಗಮಗೊಳಿಸಲು ಮುಂದಾಗಿದೆ. ನಿರಂತರವಾಗಿ ಯಾರೆಲ್ಲ ಪ್ರಯಾಣಿಸುತ್ತಾರೆ ಅವರಿಗೆ ಶುಲ್ಕ ಪಾವತಿ ಮತ್ತಷ್ಟು ಸರಳವಾಗುತ್ತದೆ. ಜೊತೆಗೆ ಕಿರಿಕಿರಿ ತಪ್ಪಲಿದ್ದು, ಮಾಸಿಕ ಖರ್ಚು ವೆಚ್ಚದ ಲೆಕ್ಕವು ಅವರಿಗೆ ಸಿಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ.

ಆಸಕ್ತ ಅರ್ಹರಿಂದ ಟೋಲ್ ಪಾಸ್‌ಗೆ ಅರ್ಜಿ ಆಹ್ವಾನಿಸಲಾಗಿದೆ. ಉಚಿತವಾಗಿ ನೋಂದಣಿ ಸಹ ಮಾಡಿಕೊಂಡು ಆನ್‌ಲೈನ್‌ನಲ್ಲಿ ಅಥವಾ ಗೊತ್ತುಪಡಿಸಿದ ಸ್ಥಳಗಳಲ್ಲಿ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಿ ನೀವು ಮಾಸಿಕ ಪಾಸ್ ಪಡೆಯಲು ಅವಕಾಶ ಇದೆ. ಇದರ ಲಾಭ ಪಡೆದುಕೊಳ್ಳುವಂತೆ ಸವಾರರಿಗೆ ಪ್ರಾಧಿಕಾರ ಮನವಿ ಮಾಡಿದೆ.

ಮಾಸಿಕ ಪಾಸ್ ಪ್ರಯೋಜನವೇನು?

ಮಾಸಿಕ ಪಾಸ್ ಪಡೆದರೆ ಸವಾರರು ಟೋಲ್ ಪ್ಲಾಜಾಗಳಲ್ಲಿ ಸರತಿ ಸಾಲುಗಳಲ್ಲಿ ನಿಲ್ಲುವುದು ತಪ್ಪಲಿದೆ. ಮೇಲಿಂದ ಮೇಲೆ ಒಂದೇ ಮಾರ್ಗದಲ್ಲಿ ನೀವು ಸಂಚಾರ ಮಾಡುತ್ತೀರಿ ಎಂದಾದರೆ ನಿಮ್ಮ ಪ್ರಯಾಣಕ್ಕೆ ವೇಗ ಸಿಗಲಿದೆ. ಕಾಯುವುದು ತಪ್ಪುತ್ತದೆ. ಆಗಾಗ ಪ್ರಯಾಣದ ವೇಳೆ ಟೋಲ್ ಫಾವತಿಗಿಂತ ತಿಂಗಳಿಗೆ ಇಂತಿಷ್ಟು ಖರ್ಚು ಎದುರಾಗಲಿದೆ ಎಂಬುದನ್ನು ನೀವು ಸುಲಭವಾಗಿ ಊಹಿಸಬಹುದು. ಪುನರಾವರ್ತಿತ ಪಾಯಿಂಟ್-ಆಫ್-ಸೇಲ್ ವಹಿವಾಟು ತಪ್ಪಿಸಬಹುದು.

ಈ ಪಾಸ್ ಮತ್ತೆ ನವೀಕರಣ ಮಾಡಿಕೊಳ್ಳಬಹುದೇ, ಬಳಕೆಯ ಮೇಲಿನ ಮಿತಿಗಳ ಕುರಿತು ಅಧಿಕೃತ ಪೋರ್ಟಲ್‌ನಲ್ಲಿ ಮಾಹಿತಿ ನೀಡಲಾಗಿದೆ. ಹೆಚ್ಚಿನ ಮಾಹಿತಿಯನ್ನು ನೀವು ಟೋಲ್ ಆಪರೇಟರ್‌ಗಳಿಂದಲೂ ಪಡೆಯಬಹುದು. ಮುಖ್ಯವಾಗಿ ನಗದು ಹಣ ಒಯ್ಯವುದು, ಚಿಲ್ಲರೆ ತಲೆ ಬಿಸಿ ತಪ್ಪಿಸುತ್ತದೆ. ಟೋಲ್ ಬಳಕೆದಾರರ ಒಮ್ಮೆ ಹಣ ಪಾವತಿಸಿದರೆ ತಿಂಗಳ ಪೂರ್ತಿ ಓಡಾಡಬಹದು. ಅಲ್ಲದೇ ಟೋಲ್ ಆಪರೇಟರ್‌ಗಳಿಗೆ ಡಿಜಿಟಲ್ ವಹಿವಾಟನ್ನು ಸರಳಗೊಳಿಸುತ್ತದೆ.

ಇಂಟರ್ ಸಿಟಿ ಬಳಕೆದಾರರಿಗೆ ಹೆಚ್ಚು ಅನುಕೂಲ

ಈ ಹೊಸ ಉಪಕ್ರಮದಿಂದ ನಿಯಮಿತವಾಗಿ ಮತ್ತು ಸ್ಥಳೀಯ ಹಂತದಲ್ಲಿ ಹೈವೇ ಬಳಸುವ ಇಂಟರ್‍‌ ಸಿಟಿ ಬಳಕೆದಾರರಿಗೆ ಭಾರೀ ಲಾಭ ನೀಡುತ್ತದೆ. ಅರ್ಜಿ ಸಲ್ಲಿಕೆಗೆ ವಾಹನ ಮತ್ತು ಗುರುತಿನ ಚೀಟಿ ಪರಿಶೀಲನೆಯ ಅಗತ್ಯವಿರುತ್ತದೆ. ಅರ್ಜಿ ಸಲ್ಲಿಸುವ ಮೊದಲು ಅರ್ಹತಾ ಮಾನದಂಡಗಳನ್ನು ಪರಿಶೀಲಿಸಲು ಪ್ರಾಧಿಕಾರವು ಸಲಹೆ ನೀಡಿದೆ. ನಿರ್ದಿಷ್ಟ ಮಾರ್ಗಗಳಲ್ಲಿ ಶುಲ್ಕ, ನಿಯಮಗಳು ಮತ್ತು ಮಾರ್ಗಸೂಚಿಗಳಿದ್ದು ಪಾಲಿಸಬೇಕಿದೆ.

ಮಾಸಿಕ ಪಾಸ್, ಟೋಲ್ ಶುಲ್ಕಕ್ಕೆ ಸಂಬಂಧಪಟ್ಟಂತೆ ಯಾವುದಾದರೂ ವ್ಯತ್ಯಾಸಗಳು ಕಂಡು ಬಂದಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವೆಬ್‌ಸೈಟ್ (https://nhai.gov.in/#/) ಮತ್ತು ಅಧಿಕೃತ ಸಹಾಯವಾಣಿ ಸಂಪರ್ಕಿಸುವಂತೆ ಕೋರಲಾಗಿದೆ. ಈ ಯೋಜನೆ ಟೋಲ್ ನಿರ್ವಹಣೆ ಆಧುನೀಕರಿಸಲು ಮತ್ತು ರಸ್ತೆ ಬಳಕೆದಾರರ ಅನುಭವ ಸುಧಾರಣೆಯ ಪ್ರಯತ್ನದ ಭಾಗವಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ