
Tahsildars Transfer: ರಾಜ್ಯ ಸರ್ಕಾರದಿಂದ 18 ತಹಶೀಲ್ದಾರ್‌ಗಳ ದಿಢೀರ್ ವರ್ಗಾವಣೆ
Tahsildars Transfer: ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಸರ್ಜರಿ ಮಾಡುತ್ತಲಿರುತ್ತದೆ. ಇದೀಗ ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಕಂದಾಯ ಇಲಾಖೆಯ ವ್ಯಾಪ್ತಿಯ ಗ್ರೇಡ್-1 ಮತ್ತು ಗ್ರೇಡ್-2 ವೃಂದದ ಒಟ್ಟು 18 ತಹಶೀಲ್ದಾರ್‌ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಹಾಗೂ ಸ್ಥಳ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದೆ. ಹಾಗಾದ್ರೆ ಯಾರು ಎಲ್ಲಿಗೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಸ್ಥಳ ನಿರೀಕ್ಷೆಯಲ್ಲಿದ್ದ ಹಲವು ಅಧಿಕಾರಿಗಳಿಗೆ ನೂತನ ಹುದ್ದೆಗಳನ್ನು ನಿಯೋಜನೆ ಮಾಡಲಾಗಿದೆ. ವರ್ಗಾವಣೆಗೊಂಡ ಅಧಿಕಾರಿಗಳು ತಕ್ಷಣವೇ ತಮ್ಮ ನೂತನ ಸ್ಥಳಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿ ಕಾರ್ಯಭಾರ ವರದಿಯನ್ನು ಇಲಾಖೆಗೆ ಇ-ಮೇಲ್ ಮೂಲಕ ಕಳುಹಿಸುವಂತೆ ಸೂಚಿಸಿದೆ. ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಜಿ.ಕೆ.ನರಸಿಂಹಮೂರ್ತಿ ಅವರು ಈ ಅಧಿಸೂಚನೆ ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.
ಯಾರು ಎಲ್ಲಿಗೆ ವರ್ಗಾವಣೆ?
* ಸಂಗಮೇಶ ಜಿಡಗ (ಗ್ರೇಡ್-2): ಇವರನ್ನು ಬಳ್ಳಾರಿ ನಗರಾಭಿವೃದ್ಧಿ ಕೋಶದಿಂದ ಯಾದಗಿರಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಪುರಸಭಾ ತಹಶೀಲ್ದಾರ್ ಹುದ್ದೆಗೆ ವರ್ಗಾಯಿಸಲಾಗಿದೆ.
* ಎಂ.ಆರ್. ಷಣ್ಮುಖ (ಗ್ರೇಡ್-2): ಕಾರಟಗಿಯಿಂದ ರಾಯಚೂರು ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
* ಶಾರದಾ ಬಿರಾದಾರ (ಗ್ರೇಡ್-2): ಸ್ಥಳ ನಿರೀಕ್ಷೆಯಲ್ಲಿದ್ದ ಇವರನ್ನು ಕಲಬುರಗಿಯ ಕೆಕೆಆರ್‌ಡಿಬಿ ಆಪ್ತ ಕಾರ್ಯದರ್ಶಿಯಾಗಿ ನಿಯುಕ್ತಿಗೊಳಿಸಲಾಗಿದೆ.
* ಹೆಚ್.ಸಿ. ಸುಜಾತ (ಗ್ರೇಡ್-2): ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಹಶೀಲ್ದಾರ್ ಆಗಿ ನೇಮಕ ಮಾಡಲಾಗಿದೆ.
* ರುಕಿಯಾ ಬೇಗಂ (ಗ್ರೇಡ್-1): ಇವರ ಹಿಂದಿನ ವರ್ಗಾವಣೆ ಆದೇಶ ರದ್ದುಗೊಳಿಸಿ, ಸಾಲಿಗ್ರಾಮದಲ್ಲೇ ಮುಂದುವರಿಸಲಾಗಿದೆ.
* ರೂಪ. ಡಿ (ಗ್ರೇಡ್-2): ಕರ್ನಾಟಕ ರಾಜ್ಯ ಹಣಕಾಸು ನಿಗಮದ ವಿಶೇಷ ತಹಶೀಲ್ದಾರ್ ಆಗಿ ವರ್ಗಾವಣೆ ಮಾಡಲಾಗಿದೆ.
* ನೀಲಬಾಯಿ ಲಮಾಣಿ (ಗ್ರೇಡ್-2): ಬೆಂಗಳೂರಿನ ಕಿದ್ವಾಯಿ ಸಂಸ್ಥೆಯ ಆಡಳಿತಾಧಿಕಾರಿಯಾಗಿ ಸ್ಥಳನಿಯುಕ್ತಿಗೊಳಿಸಲಾಗಿದೆ.
* ಎಸ್.ಬಿ. ಕಾಯಲಿ (ಗ್ರೇಡ್-2): ಬೀಳಗಿಯಿಂದ ಜಮಖಂಡಿ ತಾಲೂಕು ತಹಶೀಲ್ದಾರ್ ಹುದ್ದೆಗೆ ವರ್ಗಾಯಿಲಾಗಿದೆ.
* ಎಂ.ವಿ. ಬಿರಾದರ ಪಾಟೀಲ (ಗ್ರೇಡ್-2): ರಾಮದುರ್ಗದಿಂದ ಅಥಣಿ ತಾಲೂಕಿಗೆ ವರ್ಗಾವಣೆ ಮಾಡಲಾಗಿದೆ.
* ಆರ್.ಎಸ್. ವಳಸಂಗ (ಗ್ರೇಡ್-2): ಅಥಣಿಯಿಂದ ರಾಮದುರ್ಗ ತಾಲೂಕಿಗೆ ಅದಲು-ಬದಲು ವರ್ಗಾವಣೆ ಮಾಡಲಾಗಿದೆ.
* ಜಯಲಕ್ಷ್ಮಿ ವಸ್ತ್ರದ (ಗ್ರೇಡ್-1): ಗದಗ ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಹುದ್ದೆಗೆ ವರ್ಗಾಯಿಸಲಾಗಿದೆ.
* ಜಿ.ಕೆ. ಮಂಜುನಾಂದ (ಗ್ರೇಡ್-2): ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕು ತಹಶೀಲ್ದಾರ್ ಆಗಿ ನೇಮಕ ಮಾಡಲಾಗಿದೆ.
* ವಿ.ಎಸ್. ರವೀಂದ್ರ (ಗ್ರೇಡ್-2): ಬೆಂಗಳೂರು ಮಹಾನಗರ ಕಾರ್ಯಪಡೆ ತಹಶೀಲ್ದಾರ್ ಹುದ್ದೆಗೆ ವರ್ಗಾಯಿಸಲಾಗಿದೆ.
* ಟಿ. ವಿನೋದ (ಗ್ರೇಡ್-1): ಮೈಸೂರಿನ ಯು.ಪಿ.ಓ.ಆರ್. ತಹಶೀಲ್ದಾರ್ ಆಗಿ ನೇಮಕ ಮಾಡಲಾಗಿದೆ.
* ನರಸಿಂಹಮೂರ್ತಿ ಟಿ.ಎನ್. (ಗ್ರೇಡ್-1): ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಹುದ್ದೆಗೆ.
* ಡಿ.ಜೆ. ಕೋರಿ (ಗ್ರೇಡ್-2): ಬೆಳಗಾವಿ ವಿಶೇಷ ಜಿಲ್ಲಾಧಿಕಾರಿಗಳ ಕಚೇರಿಯ ವಿಶೇಷ ತಹಶೀಲ್ದಾರ್ ಆಗಿ.
* ಜೆ.ವಿ. ತುಳಸಿ (ಗ್ರೇಡ್-2): ಗುಡಿಬಂಡೆಯಿಂದ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ ವರ್ಗಾವಣೆ ಮಾಡಲಾಗಿದೆ.
* ಕಾವ್ಯಶ್ರೀ ಹೆಚ್. (ಗ್ರೇಡ್-1): ಬೆಂಗಳೂರಿನ ಐ.ಎಂ.ಎ ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರ ಕಚೇರಿಯ ತಹಶೀಲ್ದಾರ್ ಆಗಿ ನಿಯುಕ್ತಿಗೊಳಿಸಲಾಗಿದೆ.
ಸರ್ಕಾರದಿಂದ ಮಹತ್ವದ ಸೂಚನೆ
ಇನ್ನೂ ವರ್ಗಾವಣೆಯಾಗಿರುವ ಅಧಿಕಾರಿಗಳು ನಿಯೋಜಿತ ಸ್ಥಳಗಳಲ್ಲಿ ತಕ್ಷಣವೇ ಕರ್ತವ್ಯಕ್ಕೆ ಹಾಜರಾಗಿ, ಚಾರ್ಜ್ ರಿಪೋರ್ಟ್ ಅನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಕಟ್ಟಿನಿಟ್ಟಾಗಿ ಸೂಚನೆ ನೀಡಲಾಗಿದೆ.