
ಶಿಕ್ಷಕರಿಗೆ SIR ಡ್ಯೂಟಿ; ಮಕ್ಕಳ ಪಾಠಕ್ಕೆ ಬ್ರೇಕ್! ಬೆಂಗಳೂರಿನ ಶಾಲೆಗಳಲ್ಲಿ ಏನಾಗ್ತಿದೆ? CJP ಭೇಟಿ ಬಗ್ಗೆ ನೆಟ್ಟಿಗರು ಹೇಳಿದ್ದೇ
ಬೆಂಗಳೂರು: ಭಾರತೀಯ ಚುನಾವಣೆ ಆಯೋಗದ ವತಿಯಿಂದ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಸರ್ಕಾರಿ ನೌಕರರನ್ನು, ಅದರಲ್ಲೂ ಹೆಚ್ಚಾಗಿ ಶಿಕ್ಷಕರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದರಿಂದಾಗಿ ಮಕ್ಕಳ ಶಿಕ್ಷಣ, ಕಲಿಕೆ ಮೇಲೆ ಪರಿಣಾಮ ಬೀರುತ್ತದೆ. ಎಂಟು ಮಂದಿ ಶಿಕ್ಷಕರಲ್ಲಿ ಒಬ್ಬರೇ ಒಬ್ಬರು ಶಿಕ್ಷಕರು ಎಲ್ಲ ಜವಾಬ್ದಾರಿ ಹೊರಬೇಕಾಗುತ್ತದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ. ಬೆಂಗಳೂರಿನ ಶಾಲೆಯೊಂದಕ್ಕೆ ಭೇಟಿ ನೀಡಿ ಪೋಸ್ಟ್ ಹಂಚಿಕೊಂಡ CJP ಸಹ ಸಂಚಾಲಕರ ವಿರುದ್ಧ ಕೆಲವರು ಕಿಡಿ ಕಾರಿದ್ದಾರೆ.
ಗಣತಿ, ಸರ್ವೇ, ಮತದಾರರ ಪಟ್ಟಿ, ದಾಖಲಾತಿ ಪರಿಶೀಲನೆ ಹೆಸರಲ್ಲಿ ಶಿಕ್ಷಕರ ಬಳಕೆ ಹೆಚ್ಚಾಗುತ್ತಿದೆ. ಇದರಿಂದ ಪಾಠ ಮಾಡಬೇಕಾದ ಶಿಕ್ಷಕರು ಶಿಕ್ಷಣೇತರ ಕಾರ್ಯಗಳಲ್ಲಿ ತೊಡಗಿದಾಗ ಮಕ್ಕಳಿಗೆ ಪಾಠ ಮಾಡೋರು ಯಾರು? ಹೀಗೆ ಮುಂದುವರಿದರೆ ಮಕ್ಕಳ ಭವಿಷ್ಯದ ಕಥೆ ಏನು ಎನ್ನುವ ಆತಂಕವು ಎದುರಾಗುತ್ತದೆ. ಈ ಬಗ್ಗೆ ಅನೇಕ ಬಾರಿಯು ಚರ್ಚೆಗಳು ಆಗಿದ್ದು, ಇದೀಗ CJP ಸಹ ಸಂಚಾಲಕ ಆಶುತೋಶ್ ರಂಕಾ ಅವರು ಪೋಸ್ಟ್ ಬಗ್ಗೆ ಮತ್ತೆ ಚರ್ಚೆಗಳು ಆಗುತ್ತಿವೆ.
ಇತ್ತೀಚೆಗೆ ಬೆಂಗಳೂರಿನ ಕೈಕೊಂಡರಹಳ್ಳಿಯ ಮತ್ತೊಂದು ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದೇನೆ ಎಂದು ಆಶುತೋಶ್ ರಂಕಾ ಪೋಸ್ಟ್ ಮಾಡಿದ್ದಾರೆ. ಅವರು ಅಲ್ಲಿನ ಚಿತ್ರಣ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ ''ಇಲ್ಲಿ, ಪ್ರಾಂಶುಪಾಲರು ತಮ್ಮ ವಿದ್ಯಾರ್ಥಿಗಳ ಬಗ್ಗೆ ಅಪಾರ ಪ್ರೀತಿ ಹೊಂದಿದವರಾಗಿದ್ದಾರೆ. ಮಕ್ಕಳ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಇವರು ಹೆಚ್ಚಾಗಿ ಶ್ರಮಿಸುತ್ತಿದ್ದರು. ಶಾಲೆಯ ಮೂಲಸೌಕರ್ಯ ಉತ್ತಮವಾಗಿದೆ' ಎಂದು ಹೊಗಳಿದ್ದಾರೆ.
ಶಿಕ್ಷಕರು ಇರುವುದು ಪಾಠ ಮಾಡಲು, ಮತದಾರರ ಪಟ್ಟಿ ಪರಿಷ್ಕರಣೆಗಲ್ಲ!
ಆಘಾತಕಾರಿ ಸಂಗತಿ ಏನೆಂದರೆ ಶಾಲೆಗೆ ನಿಯೋಜಿಸಲಾಗಿರುವ 8 ಶಿಕ್ಷಕರಲ್ಲಿ 7 ಮಂದಿ ಜೂನ್‌ನಿಂದ SIR ಕರ್ತವ್ಯದಲ್ಲಿದ್ದಾರೆ. ಈ ಪ್ರಕ್ರಿಯೆ ಮುಂದಿನ ಅಕ್ಟೋಬರ್ ಅಂತ್ಯದವರೆಗೆ ನಡೆಯಲಿದ್ದು, ಅಲ್ಲಿಯವರೆಗೆ ಶಿಕ್ಷಕರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಮಾಡಲಿದ್ದಾರೆ. ಇದರಿಂದಾಗಿ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಪಾಠ ಮಾಡುವಂತಾಗಿದೆ ಎಂದು ಅವರು ತಿಳಿಸಿದ್ದಾರೆ.
ಶಿಕ್ಷಕರನ್ನು SIR ಕೆಲಸ ಮಾಡಲು ಏಕೆ ಒತ್ತಾಯಿಸಲಾಗುತ್ತಿದೆ? ಶಿಕ್ಷಕರು ಈ ರೀತಿಯ ಕೆಲಸ ಮಾಡುತ್ತಾ ಹೋದರೆ ಅವರ ಬೋಧನೆಯ ಕಳೆದುಹೋದ ಸಮಯದಲ್ಲಿ ಮಕ್ಕಳಿಗೆ ಪಾಠ ಮಾಡುವವರು ಯಾರು? ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದಯವಿಟ್ಟು ಇದನ್ನು ಪರಿಶೀಲಿಸುವಂತೆ ಅವರು ವಿನಂತಿಸಿಕೊಂಡಿದ್ದಾರೆ. ಶಿಕ್ಷಕರು ಮಕ್ಕಳಿಗೆ ಪಾಠ ಮಾಡಲು ಇರಬೇಕೇ ವಿನಃ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲು ಅಲ್ಲ' ಎಂದು ಅವರು ಆಗ್ರಹಿಸಿದ್ದಾರೆ.
2000 ಕೋಟಿ ರೂ. ಅಕ್ರಮ ಕಾಣ್ತಿಲ್ಲವಾ?
ಈ ಪೋಸ್ಟ್‌ಗೆ ಅನೇಕ ಸೋಷಿಯಲ್ ಮೀಡಿಯ ಬಳಕೆದಾರರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ದೆಹಲಿಯಲ್ಲಿ ಶಾಲಾ ಕೋಠಡಿಗಾಗಿ ಇಟ್ಟಿದ್ದ 2000 ಕೋಟಿ ರೂಪಾಯಿ ಅಕ್ರಮದಲ್ಲಿ ಎಎಪಿ ಪಕ್ಷದ ಪ್ರಮುಖ ನಾಯಕನ ಹೆಸರಿದ್ದು, ನೀವು ಏನು ಮಾಡುತ್ತಿರುವಿರಿ ಎಂದು ನೆಟ್ಟಿಗರೊಬ್ಬರು ಕೇಳಿದ್ದಾರೆ.
ಮತ್ತೊಬ್ಬರು ನಿಮ್ಮ ಈ ಶಾಲಾ ಭೇಟಿಯಲ್ಲಿ ಪಕ್ಷಪಾತ ಕಾಣಿಸುತ್ತಿದೆ. ಬೇಕಾದಾಗ ಶ್ಲಾಘಿಸುವುದು ಬೇಡವಾದಾಗ ಟಿವಿಕೆ, ಕಾಂಗ್ರೆಸ್ ಸ್ನೇಹಿ ಧೋರಣೆ ತಾಳುವುದು ಗೊತ್ತಾಗುತ್ತದೆ. ಈ ಸತ್ಯ ಮರೆ ಮಾಚುವಂತಿಲ್ಲ, ನೋಡುಗರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಎರಡನೇ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು 'ಇವರೆಲ್ಲ ಇಷ್ಟು ಸಲೀಸಾಗಿ ಶಾಲೆಗಳನ್ನು ಪ್ರವೇಶಿಸಿ, ವಿದ್ಯಾರ್ಥಿಗಳ ಜೊತೆಗೆ ಮಾತನಾಡುತ್ತಿದ್ದು, ಇವರ ಅರ್ಹತೆ ಏನು? ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ.
ವಿದ್ಯಾರ್ಥಿಗಳ ಮೇಲೆ ಛಾವಣಿ ಬಿದ್ದ ದುರ್ಘಟನೆ ಸಂಭವಿಸಿದಾಗ ಐದು ವಿದ್ಯಾರ್ಥಿಗಳು ಮೃತಪಟ್ಟರು. ಆಗ ನೀವು ಎಲ್ಲಿದ್ದೀರಿ, ಶಾಲೆಗೆ ಭೇಟಿ ನೀಡಿದ್ದೀರಾ. ಸಾಮಾಜಿಕ ಮಾಧ್ಯಮದಲ್ಲಿ ಖಂಡಿಸಿ ಕೇವಲ ಸಂದೇಶ ಪೋಸ್ಟ್ ಮಾಡಿದರೆ ಸಾಲದು. ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳ ರಾಜೀನಾಮೆಗೆ ನೀವು ಏಕೆ ಒತ್ತಾಯಿಸಲಿಲ್ಲ ಏಕೆ? ಎಂದು ಕೋರಿದರು.
ಇಂದು ಮಧ್ಯಾಹ್ನ ಇದೇ ಸಿಜೆಪಿ ಸಹ ಸಂಚಾಲಕರು ಮತ್ತವರ ತಂಡ ಬೇರೆ ಬೇರೆ ಶಾಲೆಗಳಿಗೆ ಭೇಟಿ ನೀಡಿದೆ. ನೆನ್ನೆ ವರ್ತೂರು ಶಾಲೆಗೆ ಭೇಟಿ ನೀಡಿದಾಗ ಮೇಲ್ಛಾವಣಿ ಕುಸಿದು, ಶೀಲಿಂಗ್‌ನಲ್ಲಿನ ಕಬ್ಬಿಣ ಕಾಣಿಸುವ ವಿಡಿಯೋ ಹಂಚಿಕೊಂಡಿದ್ದರು. ಇಂದು ಆ ಶೀಲಿಂಗ್ ದುರಸ್ತಿ ಮಾಡಲಾಗುತ್ತಿದೆ. ಈ ಕುರಿತು ಆಶುತೋಶ್ ರಾಂಕಾ ಅವರು ಹಂಚಿಕೊಂಡಿದ್ದಾರೆ.
Visited another govt school in Kaikondrahalli, Bengaluru.
— Ashutosh Ranka (@AshutoshRanka) September 9, 2026
Here, the Principal was extremely passionate about his students, and was working hard to provide them with basic facilities. The school’s infrastructure was largely good.
However, shockingly, out of the 8 teachers… pic.twitter.com/bl0wzcWa90
Visited another govt school in Kaikondrahalli, Bengaluru.
Here, the Principal was extremely passionate about his students, and was working hard to provide them with basic facilities. The school’s infrastructure was largely good.
However, shockingly, out of the 8 teachers… pic.twitter.com/bl0wzcWa90