Numerology: ಈ ದಿನಾಂಕದಲ್ಲಿ ಹುಟ್ಟಿದವರಿಗೆ ಈ ವಾರ ಭರ್ಜರಿ ಅದೃಷ್ಟ: ಬಹುದಿನಗಳ ಕನಸು ನನಸಾಗುವ ಕಾಲ!

Numerology: ಈ ದಿನಾಂಕದಲ್ಲಿ ಹುಟ್ಟಿದವರಿಗೆ ಈ ವಾರ ಭರ್ಜರಿ ಅದೃಷ್ಟ: ಬಹುದಿನಗಳ ಕನಸು ನನಸಾಗುವ ಕಾಲ!

Numerology: ಈ ದಿನಾಂಕದಲ್ಲಿ ಹುಟ್ಟಿದವರಿಗೆ ಈ ವಾರ ಭರ್ಜರಿ ಅದೃಷ್ಟ: ಬಹುದಿನಗಳ ಕನಸು ನನಸಾಗುವ ಕಾಲ!

Numerology: ಸಂಖ್ಯಾಶಾಸ್ತ್ರದಲ್ಲಿ, ಪ್ರತಿಯೊಂದು ಸಂಖ್ಯೆಗೆ ವಿಶೇಷ ಮಹತ್ವವಿದೆ. ವ್ಯಕ್ತಿಯ ಮೂಲಾಂಕ ಅವರ ಜನ್ಮ ದಿನಾಂಕದ ಒಟ್ಟು ಮೊತ್ತವನ್ನು ಆಧರಿಸಿ ನಿರ್ಧಾರವಾಗುತ್ತದೆ. ಈ ವಾರ ಯಾವ ಮೂಲಾಂಕದವರಗೆ ಅದೃಷ್ಟ ಎಂದು ನೋಡುವುದಾದರೆ.

ಸಂಖ್ಯೆ 1 :(ಯಾವುದೇ ತಿಂಗಳ 1, 10, 19, 28 ರಂದು ಜನಿಸಿದವರು)

ಸಮ್ಮೇಳನಗಳು, ವಿಚಾರ ಸಂಕಿರಣಗಳು ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನುಕೂಲಕರ ವಾರ. ನಿಮ್ಮ ಮದುವೆ ಮಾತುಕತೆ ನಡೆಯಬಹುದು. ನಿಮ್ಮ ಮಾತಿಗೆ ಈ ವಾರ ವಿಶೇಷ ಮನ್ನಣೆ ಸಿಗುವುದು. ಹೊಸ ಜನರನ್ನು ಭೇಟಿಯಾಗುವ ಮೂಲಕ ಹೊಸ ಗೆಳೆತನ ಬೆಳೆಯುವುದು. ಹಿಂದೆ ಮಾಡಿದ ಹೂಡಿಕೆಗಳು ಉತ್ತಮ ಲಾಭವನ್ನು ತರುವುದು. ಕೆಲಸ ಹೆಚ್ಚಾಗುವುದರಿಂದ ಮಾನಸಿಕ ಒತ್ತಡ ಹೆಚ್ಚಾಗುವುದು. ಹಾಗಾಗಿ ಮನೆಯಲ್ಲಿ ಸ್ವಲ್ಪ ಕಿರಿಕಿರಿ ವಾತಾವರಣ ಇರಬಹುದು.

ಸಂಖ್ಯೆ 2 (ಯಾವುದೇ ತಿಂಗಳ 2, 11, 20, 29 ರಂದು ಜನಿಸಿದವರು)

ನಿಮಗೆ ತಿಳಿದಿರುವ ಜನರ ಮೂಲಕ ಹೊಸ ಅವಕಾಶಗಳು ಸಿಗುವುದು. ಆದರೂ ಮಾತು ನಿಯಂತ್ರಣದಲ್ಲಿ ಇದ್ದರೆ ಒಳ್ಳೆಯದು. ಅತಿಯಾದ ಭರವಸೆಗಳು ಸಮಸ್ಯೆಗಳಿಗೆ ಕಾರಣವಾಗಬಹುದು. ನಿಮ್ಮ ಮತ್ತು ನಿಮ್ಮ ಕುಟುಂಬದ ಸಂತೋಷ ಹೆಚ್ಚಿಸುವ ಸುದ್ದಿ ಸಿಗಬಹುದು. ವಾರಾಂತ್ಯದಲ್ಲಿ ಶುಭ ಕಾರ್ಯಗಳಲ್ಲಿ ಭಾಗಿಯಾಗುವಿರಿ.

ಸಂಖ್ಯೆ 3 (ಯಾವುದೇ ತಿಂಗಳ 3, 12, 21, 30 ರಂದು ಜನಿಸಿದವರು)

ವ್ಯಾಪಾರ ಮಾಡುವವರಿಗೆ ನಿರೀಕ್ಷಿತ ಫಲಿತಾಂಶಗಳು ಸಿಗದಿರಬಹುದು. ತಾಳ್ಮೆ ಮತ್ತು ಸಂಯಮದಿಂದ ಇರುವುದು ಮುಖ್ಯ. ಈ ವಾರ ಉದ್ಯೋಗಿಗಳಿಗೆ ಕೆಲಸದ ಹೊರೆ ಹೆಚ್ಚಾಗುವುದು. ಇದರಿಂದ ಮಾನಸಿಕ ಒತ್ತಡದ ವಾರವಾಗಿರುವುದು. ಹಿರಿಯರಿಗೆ ಕೆಲಸಗಳನ್ನು ವಹಿಸುವ ಮೊದಲು ಎರಡು ಬಾರಿ ಪರಿಶೀಲಿಸಿ. ಮನೆಯ ವೆಚ್ಚಗಳು ಹೆಚ್ಚಾಗುವ ಸಾಧ್ಯತೆಯಿದೆ. ವಾರಾಂತ್ಯದಲ್ಲಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುವುದು.

ಸಂಖ್ಯೆ 4 (ಯಾವುದೇ ತಿಂಗಳ 4, 13, 22, 31 ರಂದು ಜನಿಸಿದವರು)

ಕುಟುಂಬ ಸದಸ್ಯರಿಂದ ಬರುವ ಬೇಡಿಕೆಗಳು ಮಾನಸಿಕ ಒತ್ತಡವನ್ನು ಹೆಚ್ಚಿಸಬಹುದು. ಅಗತ್ಯವಿದ್ದರೆ ಸ್ನೇಹಿತರಿಂದ ಬೆಂಬಲ ಪಡೆಯಿರಿ. ದೇವಸ್ಥಾನಗಳಿಗೆ ಭೇಟಿ ನೀಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದು. ಶಿಕ್ಷಣ ಮತ್ತು ಕಲಾ ಕ್ಷೇತ್ರಗಳಲ್ಲಿರುವವರಿಗೆ ಇದು ಬಹಳ ಪ್ರಯೋಜನಕಾರಿ ಸಮಯ.ಹಿಂದಿನ ಹೂಡಿಕೆಗಳಿಂದ ಲಾಭವಾಗುವುದು. ಆತುರದ ನಿರ್ಧಾರಗಳು ಮತ್ತು ಮಾತುಗಳಿಂದ ನಷ್ಟ ಉಂಟಾಗಬಹುದು.

ಸಂಖ್ಯೆ 5 (ಯಾವುದೇ ತಿಂಗಳ 5, 14, 23 ರಂದು ಜನಿಸಿದವರು)

ಕಚೇರಿಯಲ್ಲಿನ ಭಿನ್ನಾಭಿಪ್ರಾಯಗಳು ನಿಮ್ಮ ಉತ್ಸಾಹವನ್ನು ಕುಗ್ಗಿಸಬಹುದು. ಮೇಲಧಿಕಾರಿಗಳು ಕಠಿಣವಾಗಿ ವರ್ತಿಸಿದರೂ, ಸೇಡು ತೀರಿಸಿಕೊಳ್ಳುವ ಬದಲು ಮೌನವಾಗಿರುವುದು ಉತ್ತಮ. ವಾದ ಮಾಡಲು ಹೋಗಬೇಡಿ. ಇದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಬಹುದು. ಆರೋಗ್ಯದ ಬಗ್ಗೆ ಗಮನ ಇರಲಿ. ವಾಹನ ಚಲಾಯಿಸುವಾಗ ಎಚ್ಚರ ಇರಲಿ.

ಸಂಖ್ಯೆ 6 (ಯಾವುದೇ ತಿಂಗಳ 6, 15, 24 ರಂದು ಜನಿಸಿದವರು)

ರಹಸ್ಯ ಶತ್ರುಗಳು ತೊಂದರೆ ಕೊಡಲು ಪ್ರಯತ್ನಿಸಬಹುದು. ಜಾಗರೂಕರಾಗಿರಿ. ನೀವು ತೆಗೆದುಕೊಳ್ಳುವ ದಿಟ್ಟ ನಿರ್ಧಾರಗಳು ಕಚೇರಿಯಲ್ಲಿ ನಿಮ್ಮ ಸ್ಥಾನಮಾನವನ್ನು ಹೆಚ್ಚಿಸುತ್ತವೆ. ಹೂಡಿಕೆ ಮಾಡುವ ಮುನ್ನ ತಜ್ಞರ ಸಲಹೆ ಪಡೆಯುವುದು ಮುಖ್ಯ. ಮನೆಯಲ್ಲಿ ಸಂಬಂಧಿಕರು ಮತ್ತು ಸ್ನೇಹಿತರ ಆಗಮನದಿಂದ ಸಂಭ್ರಮ ಹೆಚ್ಚಾಗುವುದು. ಆರ್ಥಿಕ ಲಾಭಗಳು ಹೆಚ್ಚಾಗುವುದು.

ಸಂಖ್ಯೆ 7 (ಯಾವುದೇ ತಿಂಗಳ 7, 16, 25 ರಂದು ಜನಿಸಿದವರು)

ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಮಾನ್ಯತೆ ಸಿಗುವುದು. ನಿಮ್ಮ ತಾಂತ್ರಿಕ ಕೌಶಲ್ಯಗಳನ್ನು ಎಲ್ಲರೂ ಮೆಚ್ಚುವರು. ಸಂಗಾತಿಯ ಆರೋಗ್ಯವು ಸ್ವಲ್ಪ ಕಿರಿ ಕಿರಿ ಉಂಟು ಮಾಡಬಹುದು. ವೈದ್ಯಕೀಯ ಪರೀಕ್ಷೆಗಳು ಅಗತ್ಯವಾಗಿರುವುದು. ಪ್ರಯಾಣ ಮತ್ತು ವಾಹನ ಚಲಾಯಿಸುವಾಗ ಅತ್ಯಂತ ಜಾಗರೂಕರಾಗಿರಿ.

ಸಂಖ್ಯೆ 8 (ಯಾವುದೇ ತಿಂಗಳ 8, 17, 26 ರಂದು ಜನಿಸಿದವರು)

ಅಗತ್ಯವಿದ್ದಾಗ ಇತರರಿಂದ ಸಹಾಯ ಅಥವಾ ಸಲಹೆ ಪಡೆಯಲು ಹಿಂಜರಿಯಬೇಡಿ. ಆತ್ಮವಿಶ್ವಾಸ ಹೆಚ್ಚಾಗಿರುವುದು. ಬಾಕಿ ಇರುವ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಪ್ರಯತ್ನಿಸಿ. ವೆಚ್ಚಗಳು ಹೆಚ್ಚಾಗಬಹುದು. ಹಣಕಾಸಿನ ಸಮಸ್ಯೆಗೆ ಪರಿಹಾರ ಸಿಗುವುದು. ಆದರೂ ಹಣ ಖರ್ಚು ಮಾಡುವಾಗ ಎಚ್ಚರಿಕೆಯಿಂದ ಇರಿ. ವಿವೇಚನೆಯಿಲ್ಲದೆ ಅತಿಯಾಗಿ ಖರ್ಚು ಮಾಡಬೇಡಿ.

ಸಂಖ್ಯೆ 9 (ಯಾವುದೇ ತಿಂಗಳ 9, 18, 27 ರಂದು ಜನಿಸಿದವರು)

ಕೆಲಸದ ಸ್ಥಳದಲ್ಲಿನ ಕೆಲವು ಬೆಳವಣಿಗೆಗಳು ನಿಮ್ಮ ವೃತ್ತಿಜೀವನದ ಮೇಲೆ ದೀರ್ಘಾವಧಿಯ ಪರಿಣಾಮ ಬೀರುವುದು. ಆರ್ಥಿಕ ಲಾಭಗಳು ನಿರೀಕ್ಷಿಸಿದಷ್ಟು ಆಗದಿರಬಹುದು. ಸಣ್ಣಪುಟ್ಟ ಕಾಯಿಲೆಗಳು ಸಮಸ್ಯೆ ಉಂಟು ಮಾಡಬಹುದು.ಸಾಮಾಜಿಕ ಗೌರವ ಹೆಚ್ಚಾಗುವುದು.

success birth horoscope

success birth horoscope

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ