Karnataka Rains:ತುಮಕೂರು,ಕಲಬುರಗಿ ಜಿಲ್ಲೆ ಹಲವೆಡೆ ಮಳೆ, ಯಾವ ಭಾಗದಲ್ಲಿ ಎಷ್ಟು?

Karnataka Rains:ತುಮಕೂರು,ಕಲಬುರಗಿ ಜಿಲ್ಲೆ ಹಲವೆಡೆ ಮಳೆ, ಯಾವ ಭಾಗದಲ್ಲಿ ಎಷ್ಟು?

Karnataka Rains:ತುಮಕೂರು,ಕಲಬುರಗಿ ಜಿಲ್ಲೆ ಹಲವೆಡೆ ಮಳೆ, ಯಾವ ಭಾಗದಲ್ಲಿ ಎಷ್ಟು?

ಬೆಂಗಳೂರು: ತುಮಕೂರು ಹಾಗೂ ಕಲಬುರಗಿ ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಲ್ಲಿ ಉತ್ತಮ ಮಳೆಯಾಗಿದೆ.

ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ತುಮಕೂರು ಜಿಲ್ಲೆ ಮಧುಗಿರಿಯಲ್ಲಿ 97.75 ಮಿ.ಮೀ ಮಳೆಯಾಗಿದೆ.

ಕಲಬುರಗಿ ಜಿಲ್ಲೆ ಅಳಂದ ತಾಲ್ಲೂಕಿನ ರುದ್ರವಾಡಿಯಲ್ಲಿ 96 ಮಿ.ಮೀ, ಖಜೂರಿಯಲ್ಲಿ 81.75 ಮಿ.ಮೀ, ಕೊಪ್ಪಳ ಜಿಲ್ಲೆ ಕುಕನೂರು ತಾಲ್ಲೂಕಿನ ಕುದ್ರಿಮೋತಿಯಲ್ಲಿ 81.6 ಮಿ.ಮೀ ಮಳೆಯಾಗಿದೆ.

ಅಳಂದ ತಾಲ್ಲೂಕಿನ ಹೊದ್ಲೂರಿನಲ್ಲಿ 79.5 ಮಿ.ಮೀ, ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಎಂ,ಶಿವಾರದಲ್ಲಿ 74 ಮಿ.ಮೀ, ಕೋಲಾರ ತಾಲ್ಲೂಕಿನ ಸೀತಿಯಲ್ಲಿ 73.5 ಮಿ.ಮೀ, ಕುರುಗಲ್‌ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಪಲಿಚೇರ್ಲುವಿನಲ್ಲಿ ತಲಾ 64.5 ಮಿ.ಮೀ, ಇದೇ ತಾಲ್ಲೂಕಿನ ಕುಂದಲಗುರ್ಕಿಯಲ್ಲಿ 63.5 ಮಿ.ಮೀ ಮಳೆಯಾಗಿದೆ.

ಕೋಲಾರದ ಅಮ್ಮನಲ್ಲೂರು, ಚಿಂತಾಮಣಿ ತಾಲ್ಲೂಕಿನ ಮಾಸ್ತೇನಹಳ್ಳಿಯಲ್ಲಿ ತಲಾ 61.5 ಮಿ.ಮೀ, ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಹೊಸಕೆರೆಯಲ್ಲಿ 60.5 ಮಿ.ಮೀ, ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿಯಲ್ಲಿ 57.5 ಮಿ.ಮೀ, ಮಧುಗಿರಿ ತಾಲ್ಲೂಕಿನ ಬಿಜವಾರದಲ್ಲಿ 56.5 ಮಿ.ಮೀ ಮಳೆಯಾಗಿದೆ.

ಕೊರಟಗೆರೆ ತಾಲ್ಲೂಕಿನ ಕ್ಯಾಮೇನಹಳ್ಲಿಯಲ್ಲಿ 56 ಮಿ.ಮೀ, ಅಳಂದ ತಾಲ್ಲೂಕಿನ ತಡೋಲ್ ನಲ್ಲಿ 53.5 ಮಿ.ಮೀ, ಚಿಂತಾಮಣಿ ತಾಲ್ಲೂಕಿನ ತಲಗವಾರದಲ್ಲಿ 53 ಮಿ.ಮೀ, ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಸರಸ್ವತಿಪುರದಲ್ಲಿ 52 ಮಿ.ಮೀ ಮಳೆಯಾಗಿದೆ.

ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲ್ಲೂಕಿನ ತಲ್ಲೂರು, ಅಳಂದ ತಾಲ್ಲೂಕಿನ ನೀರಗುಡಿಯಲ್ಲಿ ತಲಾ 51 ಮಿ.ಮೀ, ರಾಯಚೂರುಜಿಲ್ಲೆ ದೇವದುರ್ಗ ತಾಲ್ಲೂಕಿನ ಅಲ್ಕೋಡದಲ್ಲಿ 50.5 ಮಿ.ಮೀ, ಸವದತ್ತಿ ತಾಲ್ಲೂಕಿನ ಯಕ್ಕುಂಡಿಯಲ್ಲಿ 49.5 ಮಿ.ಮೀ ಮಳೆಯಾಗಿದೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಬಾಗೂರಿನಲ್ಲಿ 49 ಮಿ.ಮೀ, ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲ್ಲೂಕಿನ ಸುಬ್ರಹ್ಮಣ್ಯದಲ್ಲಿ ತಲಾ 48 ಮಿ.ಮೀ, ಶಿಡ್ಲಘಟ್ಟ ತಾಲ್ಲೂಕಿನ ತಿಮ್ಮಸಂದ್ರದಲ್ಲಿ 47.75 ಮಿ.ಮೀ, ಗುಡಿಬಂಡೆ ತಾಲ್ಲೂಕಿನ ಸೋಮೇನಹಳ್ಳಿಯಲ್ಲಿ 47.25 ಮಿ.ಮೀ, ಅರಸೀಕೆರೆ ತಾಲ್ಲೂಕಿನ ಕಲ್ಯಾಡಿಯಲ್ಲಿ 46.5 ಮಿ.ಮೀ ಮಳೆಯಾಗಿದೆ.

ಕೊರಟಗೆರೆ ತಾಲ್ಲೂಕಿನ ವಡ್ಡಗೆರೆಯಲ್ಲಿ 45 ಮಿ.ಮೀ, ದೇವದುರ್ಗ ತಾಲ್ಲೂಕಿನ ಕ್ಯಾದಿಗೇರದಲ್ಲಿ 43.5 ಮಿ.ಮೀ, ಗುಬ್ಬಿ ತಾಲ್ಲೂಕಿನ ಮಂಚಲದೊರೆಯಲ್ಲಿ 42 ಮಿ.ಮೀ. ಚಿಂತಾಮಣಿ ತಾಲ್ಲೂಕಿನ ಕೆಂಚರ್ಲಹಳ್ಳಿ, ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟ, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಕಣಿವೆ ಬಿಳಚಿ, ಬೀದರ್ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಜೋಳಡಬ್ಕದಲ್ಲಿ ತಲಾ 41 ಮಿ.ಮೀ ಮಳೆಯಾಗಿದೆ.

ಮಧುಗಿರಿ ತಾಲ್ಲೂಕಿನ ಚಿಣಕವಜ್ರದಲ್ಲಿ 40 ಮಿ.ಮೀ, ಕೋಲಾರದ ಬೆಳ್ಳೂರು ಹಾಗೂ ಮಧುಗಿರಿ ತಾಲ್ಲೂಕಿನ ಸಿದ್ದಾಪುರದಲ್ಲಿ ತಲಾ 39.5 ಮಿ.ಮೀ ಮಳೆಯಾದ ವರದಿಯಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ