Gold: ಲಕ್ಕುಂಡಿ ಆಯ್ತು.. ಈಗ ಸವದತ್ತಿಯಲ್ಲಿ ಚಿನ್ನದ ನಿಧಿ ಪತ್ತೆ, ಕಾರ್ಮಿಕರ ನಡೆಗೆ ಭಾರಿ ಮೆಚ್ಚುಗೆ

Gold: ಲಕ್ಕುಂಡಿ ಆಯ್ತು.. ಈಗ ಸವದತ್ತಿಯಲ್ಲಿ ಚಿನ್ನದ ನಿಧಿ ಪತ್ತೆ, ಕಾರ್ಮಿಕರ ನಡೆಗೆ ಭಾರಿ ಮೆಚ್ಚುಗೆ

Gold: ಲಕ್ಕುಂಡಿ ಆಯ್ತು.. ಈಗ ಸವದತ್ತಿಯಲ್ಲಿ ಚಿನ್ನದ ನಿಧಿ ಪತ್ತೆ, ಕಾರ್ಮಿಕರ ನಡೆಗೆ ಭಾರಿ ಮೆಚ್ಚುಗೆ

Gold: ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಇದೇ ವರ್ಷದ ಜನವರಿಯಲ್ಲಿ ಮನೆ ನಿರ್ಮಾಣಕ್ಕಾಗಿ ಅಡಿಪಾಯ ಅಗೆಯುವ ವೇಳೆ ಚಿನ್ನದ ನಿಧಿ ಪತ್ತೆಯಾಗಿದ್ದು, ಈ ಘಟನೆ ರಾಜ್ಯದಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಬೆಳಗಾವಿ ಜಿಲ್ಲೆ, ಸವದತ್ತಿ ತಲ್ಲೂಕಿನ ಇಂಚಲ ಊರಿನಲ್ಲಿ ಅಂತಹದ್ದೇ ಒಂದು ಘಟನೆ ನಡೆದಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದ ಬಿಸಿಎಂ ಹಾಸ್ಟೆಲ್ ಹತ್ತಿರ ವಿಬಿ-ಜಿ ರಾಮ್ ಜಿ ಯೋಜನೆಯಡಿ ನರೇಗಾ ಮಾದರಿಯ ಕಾಮಗಾರಿಯಲ್ಲಿ ನಿರತರಾಗಿದ್ದ ಕೂಲಿ ಕಾರ್ಮಿಕರಿಗೆ ಹಳೆಯ ಮಣ್ಣಿನ ಗಡಿಗೆಯೊಂದು ದೊರೆತಿದೆ. ಸಂಶಯಗೊಂಡು ಆ ಗಡಿಗೆಯನ್ನು ತೆರೆದು ಪರಿಶೀಲಿಸಿದಾಗ, ಅದರೊಳಗೆ ಪುರಾತನ ಕಾಲದ 14 ಚಿನ್ನದ ನಾಣ್ಯಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಚಿನ್ನದ ನಾಣ್ಯಗಳ ಮೌಲ್ಯ ಮತ್ತು ತೂಕದ ವಿವರ

ಲಭ್ಯವಾಗಿರುವ ಈ 14 ಚಿನ್ನದ ನಾಣ್ಯಗಳ ಒಟ್ಟು ತೂಕ ಸುಮಾರು 54.8 ಗ್ರಾಂ ಆಗಿದ್ದು, ಪ್ರಸ್ತುತ ಮಾರುಕಟ್ಟೆ ದರದಂತೆ ಇವುಗಳ ಅಂದಾಜು ಮೌಲ್ಯ ₹8.27 ಲಕ್ಷಕ್ಕೂ ಅಧಿಕವೆಂದು ಅಂದಾಜಿಸಲಾಗಿದೆ. ಇನ್ನೂ ಇವುಗಳು ಗಂಗರ ಕಾಲಕ್ಕೆ ಸೇರಿವೆ ಎನ್ನಲಾಗಿದ್ದು, ಗ್ರಾಮಸ್ಥರಲ್ಲಿ ಭಾರಿ ಕುತೂಹಲ ಮೂಡಿಸಿದೆ.

ನಾಣ್ಯಗಳ ಮೇಲಿತ್ತು ಆನೆಯ ಚಿತ್ರ

ಪತ್ತೆಯಾದ ಪ್ರತಿಯೊಂದು ಚಿನ್ನದ ನಾಣ್ಯದ ಮೇಲೆಯೂ ಆನೆಯ ಸ್ಪಷ್ಟವಾದ ಚಿತ್ರ ಕೆತ್ತಲ್ಪಟ್ಟಿರುವುದು ವಿಶೇಷ ಆಕರ್ಷಣೆಯಾಗಿದೆ. ದಕ್ಷಿಣ ಕರ್ನಾಟಕವನ್ನು ಸುದೀರ್ಘ ಕಾಲ ಆಳಿದ ತಲಕಾಡಿನ ಗಂಗರ ರಾಜಲಾಂಛನವು ಆನೆಯಾಗಿತ್ತು. ಆದ್ದರಿಂದ ಈ ನಾಣ್ಯಗಳು ಗಂಗರ ಆಡಳಿತಾವಧಿಗೆ ಸೇರಿವೆ ಎಂದು ಹಲವು ತಜ್ಞರು ಮತ್ತು ಸ್ಥಳೀಯರು ಅಂದಾಜಿಸಿದ್ದಾರೆ ಎನ್ನಲಾಗಿದೆ.

ಮಾಹಿತಿ ಪ್ರಕಾರ, ಈ ನಾಣ್ಯಗಳು ಕ್ರಿ.ಶ. 10ರಿಂದ 15ನೇ ಶತಮಾನದ ನಡುವಿನ ಕಾಲಘಟ್ಟಕ್ಕೆ ಸೇರಿದವಾಗಿರಬಹುದು. ಆದರೂ ಇವು ಯಾವ ನಿರ್ದಿಷ್ಟ ಅರಸರ ಅವಧಿಗೆ ಸೇರಿದವು, ಇವುಗಳ ಉತ್ಪಾದನೆ ಮತ್ತು ಶಾಸನಶಾಸ್ತ್ರದ ಹಿನ್ನೆಲೆ ಏನು ಎಂಬುದನ್ನು ನಿಖರವಾಗಿ ತಿಳಿದುಕೊಳ್ಳಲು ಹೆಚ್ಟಿನ ಅಧ್ಯಯನ ಹಾಗೂ ತಾಂತ್ರಿಕ ಪರಿಶೀಲನೆ ನಡೆಯಬೇಕಾಗಿದೆ.

ಕಾರ್ಮಿಕರ ಪ್ರಾಮಾಣಿಕತೆಗೆ ಭಾರಿ ಮೆಚ್ಚುಗೆ

ಚಿನ್ನದ ನಾಣ್ಯಗಳು ಸಿಕ್ಕ ತಕ್ಷಣವೇ ಕೂಲಿ ಕಾರ್ಮಿಕರು ಯಾವುದೇ ದುರಾಸೆಗೆ ಒಳಗಾಗದೆ, ತಮ್ಮಲ್ಲೇ ಬಚ್ಚಿಟ್ಟುಕೊಳ್ಳುವ ಬದಲು ನೇರವಾಗಿ ಗ್ರಾಮ ಪಂಚಾಯಿತಿ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಆಗಮಿಸಿ ಅವುಗಳನ್ನ ತೆಗೆದುಕೊಂಡು ಹೋಗಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮತ್ತು ತಾಲೂಕು ಪಂಚಾಯಿತಿ ಸಿಬ್ಬಂದಿಯ ಸಮ್ಮುಖದಲ್ಲಿ, ಸವದತ್ತಿ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಅವರಿಗೆ ಕಾರ್ಮಿಕರು ಈ ನಾಣ್ಯಗಳನ್ನು ಸುರಕ್ಷಿತವಾಗಿ ಹಸ್ತಾಂತರಿಸಿದರು. ನಿಯಮಾನುಸಾರ, ತಹಶೀಲ್ದಾರ್ ಅವರು ಈ ಪಾರಂಪರಿಕ ಚಿನ್ನದ ನಾಣ್ಯಗಳನ್ನು ಸರ್ಕಾರಿ ಖಜಾನೆಗೆ ಭದ್ರವಾಗಿ ಒಪ್ಪಿಸಿದ್ದಾರೆ.

ಕುತೂಹಲ ಮೂಡಿಸಿದ ಚಿನ್ನದ ನಾಣ್ಯಗಳ ಪತ್ತೆ..

ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರ ಸಿಕ್ಕರೂ ಪ್ರಾಮಾಣಿಕತೆ ಮೆರೆದು ಸರ್ಕಾರಕ್ಕೆ ಒಪ್ಪಿಸಿದ ಬಡ ಕೂಲಿ ಕಾರ್ಮಿಕರ ನಡೆಗೆ ತಾಲೂಕು ಆಡಳಿತ ಹಾಗೂ ಇಂಚಲ ಗ್ರಾಮಸ್ಥರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಈ ಅಪರೂಪದ ನಾಣ್ಯಗಳ ಪತ್ತೆಯಿಂದಾಗಿ ಇಂಚಲ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಶೋಧನೆಗೆ ಹೊಸ ಹಾದಿ ತೆರೆದಂತಾಗಿದ್ದು, ಇಡೀ ಪ್ರದೇಶದಲ್ಲಿ ಹಳೆಯ ಇತಿಹಾಸದ ಕುರಿತು ತೀವ್ರ ಚರ್ಚೆ ಮತ್ತು ಕುತೂಹಲ ಮೂಡಿದೆ. ಒಟ್ಟಿನಲ್ಲಿ ಹೇಳುವುದಾದರೆ ಇವುಗಳು ಯಾವ ಶತಮಾನದ್ದು ಹಾಗೂ ಕಾರ್ಮಿಕರ ನಿಯತ್ತಿನ ನಡೆಗೆ ಸರ್ಕಾರದಿಂದ ಏನು ಬಹುಮಾನ ಸಿಗಲಿದೆಯೋ ಎಂದು ಕಾದುನೋಡಬೇಕಿದೆ.

gold village karnataka

gold village karnataka

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ