
Daily Horoscope: ತೆರೆದುಕೊಳ್ಳುವುದು ಈ ರಾಶಿಯವರ ಅದೃಷ್ಟ; ಸಂಪತ್ತು ಹೆಚ್ಚಿಸಿಕೊಳ್ಳಲು ಸಿಗುವುದು ಅವಕಾಶ
Daily Horoscope: ಇಂದು ದಶಮಿ ತಿಥಿ. ಉತ್ತರ ಆಷಾಢ ನಕ್ಷತ್ರ ನಾಳೆ ಬೆಳಗ್ಗೆ 7.06 ವರೆಗೆ ಇರುವುದು. ಅಲ್ಲದೆ ಇವತ್ತು ರವಿ ಯೋಗದ ಸಂಯೋಜನೆಯೂ ಇರುವುದು. ಇಂದಿನ ದಿನ ಯಾವ ರಾಶಿಯವರಿಗೆ ಶುಭವಾಗಿರಲಿದೆ ಎನ್ನುವ ಮಾಹಿತಿ ಇಲ್ಲಿದೆ.
ವ್ಯವಹಾರ ನಡೆಸುವವರು ಆರ್ಥಿಕ ಲಾಭ ಗಳಿಸುವ ಅವಕಾಶ ಪಡೆಯುವರು. ಮನೆಯಲ್ಲಿ ನಡೆಯಬೇಕಾಗಿರುವ ಶುಭ ಕಾರ್ಯ ಮುಂದೂಡಬೇಕಾಗಬಹುದು. ಸಂಬಂಧಗಳಲ್ಲಿನ ತಪ್ಪು ತಿಳುವಳಿಕೆಗಳು ಕೊನೆಗೊಳ್ಳುವುದು. ಸಂಬಂಧಗಳಲ್ಲಿ ಮಾಧುರ್ಯ ಹೆಚ್ಚಾಗುವುದು. ಆರೋಗ್ಯದ ದೃಷ್ಟಿಯಿಂದ, ಈ ದಿನವು ಉತ್ತಮವಾಗಿರುವುದು.
ವ್ಯವಹಾರ ವಿಷಯಗಳಿಗೆ ಸಂಬಂಧಿಸಿದಂತೆ ವೃತ್ತಿಪರರಿಂದ ಸಲಹೆ ಪಡೆಯಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಶೀಘ್ರದಲ್ಲೇ ಸಕಾರಾತ್ಮಕ ಫಲವನ್ನು ಪಡೆಯುವರು. ಸಂಗಾತಿಯಿಂದ ಸಂಪೂರ್ಣ ಬೆಂಬಲ ಸಿಗುವುದು. ಕೌಟುಂಬಿಕ ಸಮಸ್ಯೆಗಳು ಬಗೆಹರಿಯುವುದು. ಮನೆಯಲ್ಲಿ ಸಂತೋಷದ ವಾತಾವರಣ ಇರುವುದು.
ಇಂದಿನ ದಿನ ಅನುಕೂಲಕರವಾಗಿರುವುದು. ವ್ಯವಹಾರ ವಿಸ್ತರಿಸಲು ಅವಕಾಶ ಸಿಗುವುದು. ಸಾಲದಿಂದ ಮುಕ್ತರಾಗುವಿರಿ. ನಿಮ್ಮ ಆರ್ಥಿಕ ಹೊರೆ ಕಡಿಮೆಯಾಗುವುದು. ತಾಯಿಯ ಆರೋಗ್ಯ ಉತ್ತಮವಾಗಿರುವುದು. ಹೊಸ ಕೆಲಸದಿಂದ ಲಾಭವಾಗುವುದು.
ಇಂದು ಸಂತೋಷದಿಂದ ತುಂಬಿದ ದಿನವಾಗಿರುವುದು. ಉದ್ಯೋಗದಲ್ಲಿ ಪ್ರಗತಿಗೆ ಉತ್ತಮ ಅವಕಾಶಗಳು ಸಿಗುವುದು. ಆದಾಯ ಹೆಚ್ಚಾಗುವುದು. ಮಕ್ಕಳೊಂದಿಗೆ ಸ್ವಲ್ಪ ಸಮಯ ಕಳೆಯುವುದರಿಂದ ಸಂತೋಷ ಹೆಚ್ಚಾಗುವುದು. ಹಣಕಾಸಿನ ವಿಷಯಗಳಲ್ಲಿ ಬೇರೆಯವರ ಮೇಲೆ ಹೆಚ್ಚು ಅವಲಂಬಿತರಾಗಬೇಡಿ.
ಎಲ್ಲಾ ಚಿಂತೆಗಳಿಂದ ಪರಿಹಾರ ಕಂಡುಕೊಳ್ಳುವಿರಿ. ಜೀವನವನ್ನು ಸುಧಾರಿಸಲು ಕೆಲವು ಸಕಾರಾತ್ಮಕ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುವುದು.ಕೆಲಸವನ್ನು ಪೂರ್ಣಗೊಳಿಸಲು ಸ್ನೇಹಿತರು ನಿಮಗೆ ಸಹಾಯ ಮಾಡುವರು. ವೈವಾಹಿಕ ಜೀವನವು ಸಂತೋಷದಿಂದ ಕೂಡಿರುವುದು.
ಇಂದು ನಿಮ್ಮ ಪಾಲಿನ ಅದೃಷ್ಟದ ದಿನವಾಗಿರುವುದು. ಮೊದಲು ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಬಹುರಾಷ್ಟ್ರೀಯ ಕಂಪನಿಗಳಿಂದ ಕೆಲಸದ ಆಫರ್ ಬರುವುದು. ಬಡ್ತಿ ಸಿಗುವ ಸಾಧ್ಯತೆ ಇದೆ. ಆರ್ಥಿಕ ಲಾಭ ಹೆಚ್ಚಾಗುವುದು.
ಇಂದು ನಿಮ್ಮ ಪಾಲಿನ ಲಾಭದಾಯಕ ದಿನವಾಗಿರುವುದು. ವ್ಯವಹಾರದಲ್ಲಿ ಉತ್ತಮ ಲಾಭ ಗಳಿಸುವ ಅವಕಾಶ ಸಿಗುವುದು. ಬಾಕಿ ಇರುವ ಕೆಲಸವು ಪೂರ್ಣವಾಗುವುದು. ಹೆತ್ತವರೊಂದಿಗೆ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು. ಮಾನಸಿಕ ಶಾಂತಿ ಹೆಚ್ಚಾಗುವುದು.
ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು, ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ. ಹೊಸ ಜವಾಬ್ದಾರಿಗಳು ಸಿಗುವುದು. ಮಾಡುವ ಕೆಲಸಗಳಲ್ಲಿ ಯಶಸ್ಸು ಸಿಗುವುದು. ಇವತ್ತು ಯಾರನ್ನೂ ಕುರುಡಾಗಿ ನಂಬಬೇಡಿ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.
ಹಣ ಗಳಿಸಲು ಅನೇಕ ಅತ್ಯುತ್ತಮ ಅವಕಾಶಗಳು ಸಿಗುವುದು. ವ್ಯವಹಾರದಲ್ಲಿ ಲಾಭವಾಗುವುದು. ಹೊಸ ಕೆಲಸಗಳಲ್ಲಿ ಯಶಸ್ಸು ಸಿಗುವುದು. ಆಸಕ್ತಿಗಳ ಆಧಾರದ ಮೇಲೆ ಇವತ್ತು ಹೊಸ ಕೆಲಸ ಆರಂಭಿಸಬಹುದು. ಹಣಕಾಸಿನ ವಿಷಯದಲ್ಲಿ ಲಾಭವಾಗುವುದು.
ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು. ನಿಮಗೆ ವಹಿಸಿರುವ ಕೆಲಸವನ್ನು ಸರಿಯಾಗಿ ಸರಿಯಾದ ಸಮಯದಲ್ಲಿ ಮಾಡಿ ಮುಗಿಸಿ. ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗರೂಕರಾಗಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ವೈವಾಹಿಕ ಜೀವನವು ಸಂತೋಷದಿಂದ ಕೂಡಿರುವುದು. ಒಂದು ನಿರ್ದಿಷ್ಟ ಕಾರ್ಯದಲ್ಲಿ ಯಶಸ್ಸನ್ನು ಕಾಣುವಿರಿ. ಹೊಸ ಆಲೋಚನೆಗಳು ನಿಮ್ಮ ಮನಸ್ಸಿಗೆ ಬರಬಹುದು. ಹಳೆಯ ಸ್ನೇಹಿತರನ್ನು ಭೇಟಿಯಾಗುವಿರಿ. ಮನಸ್ಸಿನ ಸಂತೋಷ ಹೆಚ್ಚಾಗುವುದು.
ಇಂದು ನಿಮಗೆ ಒಳ್ಳೆಯ ದಿನವಾಗಿರಲಿದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುವುದು. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿರುವವರಿಗೆ ಹೆಚ್ಚಿನ ಲಾಭವಾಗುವುದು. ಕೆಲಸಕ್ಕಾಗಿ ದೂರದ ಊರಿಗೆ ತೆರಳಬೇಕಾಗಬಹುದು.