
ಡೋಪಿಂಗ್: ಸಿಕ್ಕಿಬಿದ್ದ ಥಾಯ್ಲೆಂಡ್‌ನ ಬ್ಯಾಡ್ಮಿಂಟನ್ ಆಟಗಾರ್ತಿ ಪಿಚಮೊನ್
ನಾಗೋಯಾ (ಎಎಫ್‌ಪಿ): ಥಾಯ್ಲೆಂಡ್‌ನ ಬ್ಯಾಡ್ಮಿಂಟನ್ ಆಟಗಾರ್ತಿ ಪಿಚಮೊನ್ ಒಪಟ್ನಿಪುತ್ ಅವರು ಉದ್ದೀಪನ ಮದ್ದು ಸೇವಿಸಿರುವುದು ದೃಢಪಟ್ಟಿದೆ. ಇದು, ಹಾಲಿ ಏಷ್ಯನ್ ಕ್ರೀಡಾಕೂಟದಲ್ಲಿ ಪತ್ತೆಯಾದ ಮೊದಲ ಡೋಪಿಂಗ್ ಪ್ರಕರಣವಾಗಿದೆ.
19 ವರ್ಷ ವಯಸ್ಸಿನ ಪಿಚಮೊನ್ ಅವರಿಂದ ಮಾದರಿ ಸಂಗ್ರಹಿಸಿ ಪರಿಶೀಲಿಸಿದ್ದು, ಅವರು ನಿಷೇಧಿತ ವಸ್ತು (ಫ್ಯುರೊಸೆಮೈಡ್) ಸೇವಿಸಿರುವುದು ದೃಢಪಟ್ಟಿದೆ. ಹೀಗಾಗಿ, ಅವರನ್ನು ಏಷ್ಯನ್ ಕ್ರೀಡಾಕೂಟದಿಂದ ಅಮಾನತು ಮಾಡಲಾಗಿದೆ ಎಂದು ಅಂತರರಾಷ್ಟ್ರೀಯ ಪರೀಕ್ಷಾ ಏಜನ್ಸಿ (ಐಟಿಎ) ಸೋಮವಾರ ತಿಳಿಸಿದೆ.
ಸೆಪ್ಟೆಂಬರ್ 17ರಂದು ಪಿಚಮೊನ್ ಅವರಿಂದ ಮಾದರಿ ಸಂಗ್ರಹಿಸಲಾಗಿತ್ತು.
19 ವರ್ಷದ ಪಿಚಮೊನ್ ಅವರಿಂದ ಮಾದರಿ ಸಂಗ್ರಹಿಸಿ ಪರಿಶೀಲಿಸಿದ್ದು, ನಿಷೇಧಿತ ವಸ್ತು (ಫ್ಯುರೊಸೆಮೈಡ್) ಸೇವಿಸಿರುವುದು ದೃಢಪಟ್ಟಿದೆ.
Tags
Sports