
ಬಿಗ್‌ಬಾಸ್: ಚಿತ್ರೀಕರಣದ ವೇಳೆ ಪಾಪರಾಜಿಗಳ ವಿರುದ್ಧ ಸಲ್ಮಾನ್ ಖಾನ್ ಗರಂ
ಜನಪ್ರಿಯ ರಿಯಾಲಿಟಿ ಶೋ ‘ಬಿಗ್‌ಬಾಸ್ ಸೀಸನ್ 20’ರ ಎಪಿಸೋಡ್‌ನ ಚಿತ್ರೀಕರಣ ಈಗಾಗಲೇ ಆರಂಭಗೊಂಡಿದೆ. ಚಿತ್ರೀಕರಣದ ವೇಳೆ ಬಾಲಿವುಡ್ ನಟ ಹಾಗೂ ಬಿಗ್‌ಬಾಸ್ ನಿರೂಪಕ ಸಲ್ಮಾನ್ ಖಾನ್ ಅವರು ಪಾಪರಾಜಿಗಳ (ಫೋಟೊಗ್ರಾಫರ್) ವಿರುದ್ಧ ಸಿಟ್ಟಾಗಿದ್ದಾರೆ.
ಬಿಗ್‌ಬಾಸ್ ಚಿತ್ರೀಕರಣದ ಸಂದರ್ಭದಲ್ಲಿ ಆಗಮಿಸಿದ್ದ ಪಾಪರಾಜಿಗಳಿಗೆ ವೇದಿಕೆಯಿಂದ ಅಂತರ ಕಾಯ್ದುಕೊಳ್ಳಲು ಸಲ್ಮಾನ್ ಖಾನ್ ಹೇಳುತ್ತಾರೆ. ಆದರೆ ಅವರು ಹಿಂದೆ ಸರಿಯಲು ನಿರಾಕರಿಸಿ ಅಲ್ಲಿಯೇ ಫೋಟೊ ತೆಗೆಯುತ್ತಿರುತ್ತಾರೆ. ಆಗ ತಾಳ್ಮೆ ಕಳೆದುಕೊಂಡ ನಟ ಅವರನ್ನು ಪಾಪರಾಜಿಗಳು ಎಂದು ಕರೆದಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಸಲ್ಮಾನ್ ಖಾನ್, ‘ಇದು ನನ್ನ ಕೆಲಸವಲ್ಲ. ನನಗೆ ಕ್ಯಾಮೆರಾ ಮುಂದೆ ಬರುವ ಅಗತ್ಯವಿಲ್ಲ, ಫೋಟೊ... ಫೋಟೊ... ಫೋಟೊ’ ಎಂದು ಕೋಪದಿಂದ ಗೊಣಗಿದ್ದಾರೆ.
ಮಾತ್ರವಲ್ಲ, ಫೋಟೊಗೆ ಫೋಸ್ ನೀಡುವಂತೆ ಸಲ್ಮಾನ್ ಖಾನ್ ಅವರನ್ನು ಪಾಪರಾಜಿಗಳು ಕೇಳುತ್ತಲೇ ಇದ್ದರು. ಆಗ ಸಲ್ಮಾನ್ ಖಾನ್ ಕೋಪಗೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಅವರು ಕೌ ಬಾಯ್ ಲುಕ್‌ನಲ್ಲಿ ಗಮನಸೆಳೆದರು.
2010ರಲ್ಲಿ ಬಿಗ್‌ಬಾಸ್ ಶೋನ ‘ಸೀಸನ್ 4’ರಲ್ಲಿ ಸಲ್ಮಾನ್ ಖಾನ್ ಅವರು ನಿರೂಪಣೆಯನ್ನು ವಹಿಸಿಕೊಂಡರು. ಇಂದಿಗೂ ಬಿಗ್‌ಬಾಸ್ ನಿರೂಪಕರಾಗಿ ಪ್ರತಿ ಸೀಸನ್ ಅನ್ನು ನಡೆಸಿಕೊಡುತ್ತಿದ್ದಾರೆ.