
ನಾಳೆ ಮಂಗಳೂರು ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಮಂಗಳೂರು: ಬಿಜೈ, ಭಾರತೀನಗರ ಮತ್ತು ವಿವೇಕನಗರ ವಿದ್ಯುತ್ ಫೀಡರ್‌ಗಳಲ್ಲಿ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬುಧವಾರ (ಸೆ. 23) ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿವೇಕನಗರ, ಶ್ರೀದೇವಿ ಕಾಲೇಜ್ ರಸ್ತೆ, ಕೆ.ಎಸ್.ಆರ್.ಟಿ.ಸಿ, ಸಿ.ಜಿ ಕಾಮತ್ ರಸ್ತೆ, ಜೈಲ್ ರಸ್ತೆ, ಎಂ.ಜಿ ರಸ್ತೆ, ಲಾಲ್ ಬಾಗ್ ರಸ್ತೆ, ಬಳ್ಳಾಲ್‌ಬಾಗ್, ಮಾನಸ ಟವರ್ ಎದುರು, ಭಾರತೀನಗರ, ಚಂದ್ರಿಕಾ ಬಡಾವಣೆ ರಸ್ತೆ, ಕೊಡಿಯಾಲ್ ಬೈಲ್, ಕೊಡಿಯಾಲ್ ಗುತ್ತು, ಕೆ.ಎಸ್.ಆರ್.ಟಿ.ಸಿ ಎದುರು, ಬಿಜೈ ಮೈನ್ ರೋಡ್, ಬಿಜೈ ಚರ್ಚ್ ರಸ್ತೆ, ಬಿಜೈ ನ್ಯೂರೋಡ್, ಸಂಕೈಗುಡ್ಡ, ಎಂ.ಸಿ.ಎಫ್ ಕಾಲೊನಿ, ಆನೆಗುಂಡಿ, ಸಂಕೈಗುಡ್ಡ ಗ್ಯಾಸ್ ಗೋಡೌನ್, ರಾಮಕೃಷ್ಣ ಭಜನಾ ಮಂದಿರ, ನೋಡುಲೇನ್, ಬಟ್ಟಗುಡ್ಡ, ಬಿಜೈ ಮ್ಯೂಸಿಯಂ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಬೆಳಿಗ್ಗೆ 9.30ರಿಂದ ಸಂಜೆ 6ಗಂಟೆಯವರೆಗೆ ಬೆಳುವಾಯಿ ಮತ್ತು ಶಿರ್ತಾಡಿ ಫೀಡರ್ ವ್ಯಾಪ್ತಿಯ ಕಾನ, ಕಲ್ಲೋಳಿ, ನಡಿಗುಡ್ಡೆ, ಕಾಂತಾವರ ಕ್ರಾಸ್, ಬೆಳುವಾಯಿ, ಬನ್ನಡ್ಕ, ಕಾಯರ್ ಕಟ್ಟೆ, ಆಜಾದ್ ನಗರ, ಕರಿಯನಂಗಡಿ, ಮಲೆಬೆಟ್ಟು, ಮಂಜನಕಟ್ಟೆ, ಕಾಯದೆ, ಕೆಸರಗದ್ದೆ, ಪೆಲಕುಂಜ, ಮೂಡಾಯಿಕಾಡು, ಬೆಳುವಾಯಿ ಚರ್ಚ್, ಇರ್ವತ್ತೂರು ಕ್ರಾಸ್, ಗುಂಡುಕಲ್ಲು, ಮೂಡುಮಾರ್ನಾಡು, ಕೆಲ್ಲಪುತ್ತಿಗೆ ದರೆಗುಡ್ಡೆ, ಅರಸುಕಟ್ಟೆ, ಪಣಪಿಲ, ಅಳಿಯೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
ಅದರಂತೆ, ಕೂಳೂರು, ಚಿಲಿಂಬಿ, ಕುಂಜತ್ತಬೈಲ್ ಮತ್ತು ಮರಕಡ ವಿದ್ಯುತ್ ಮಾರ್ಗಗಳಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಗಾಂಧೀನಗರ, ಶಂಕರನಗರ, ಶಾಂತಿನಗರ, ಮಾಲಾಡಿ, ಮಲ್ಲಿ ಲೇಔಟ್, ಅಂಬಿಕಾನಗರ, ವಿದ್ಯಾನಗರ, ಪಂಜಿಮೊಗರು, ರಾಯಿಕಟ್ಟೆ, ಕೂಳೂರು ಜಂಕ್ಷನ್, ಮೇಲುಕೊಪ್ಪಳ, ಮಾಲೆಮಾರ್ ರಕ್ತೇಶ್ವರಿ ದೇವಸ್ಥಾನ, ರಾಷ್ಟ್ರೀಯ ಹೆದ್ದಾರಿಯ ಪೂರ್ವ ಭಾಗದ ಪ್ರದೇಶಗಳು, ಕೊಟ್ಟಾರ, ಪ್ರೇಮಾ ಲೇ ಔಟ್, ಬಂಗ್ರಕೂಳೂರು, ಮುಲ್ಲಕಾಡು ಸೀವೇಜ್ ಪ್ಲಾಂಟ್, ಬಂಗ್ರಕೂಳೂರು ವೆಟ್ ವೆಲ್, ಪ್ರೇಮಾ ಲೇ ಔಟ್ ವೆಟ್ ವೆಲ್, ಕುಂಜತ್ತ ಬೈಲ್, ಮರಕಡ, ಮಿಲ್ಲತ್ ನಗರ, ಕೊರಂಟಾಡಿ, ಜ್ಯೋತಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.