ಸಮಾಜ ಸೇವಕ ಜಿ.ಎನ್. ಗೋಪಿಕೃಷ್ಣ ನಿಧನ: ಲಕ್ಷ್ಮೇಶ್ವರದಲ್ಲಿ ಅಂತ್ಯಕ್ರಿಯೆ

ಸಮಾಜ ಸೇವಕ ಜಿ.ಎನ್. ಗೋಪಿಕೃಷ್ಣ ನಿಧನ: ಲಕ್ಷ್ಮೇಶ್ವರದಲ್ಲಿ ಅಂತ್ಯಕ್ರಿಯೆ

ಸಮಾಜ ಸೇವಕ ಜಿ.ಎನ್. ಗೋಪಿಕೃಷ್ಣ ನಿಧನ: ಲಕ್ಷ್ಮೇಶ್ವರದಲ್ಲಿ ಅಂತ್ಯಕ್ರಿಯೆ

ಲಕ್ಷ್ಮೇಶ್ವರ (ಗದಗ ಜಿಲ್ಲೆ): ಸಮಾಜ ಸೇವಕ ಜಿ.ಎನ್. ಗೋಪಿಕೃಷ್ಣ (75) ಈಚೆಗೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಿಧನರಾದರು. ಶಿಷ್ಯ ತವೆಲಪ್ಪ ಸಾತಮುದ್ದೆ ಅವರೊಂದಿಗೆ ವಾಸವಿದ್ದ ಅವರಿಗೆ ಅವರಿಗೆ ಪುತ್ರ ಇದ್ದಾರೆ. ಪಟ್ಟಣದ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ ನೆರವೇರಿತು.

ಬಳ್ಳಾರಿ ಮೂಲದ ಗೋಪಿಕೃಷ್ಣ ಅವರು ‘ಆಕ್ಸ್ ಫ್ಯಾಮ್’ ಸೇವಾ ಸಂಸ್ಥೆಯ ಭಾರತೀಯ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದ್ದರು. ಫ್ಯಾಬ್‌ ಇಂಡಿಯಾ ಖಾದಿ ಸಂಸ್ಥೆಯ ನಿರ್ದೇಶಕ ಮಂಡಳಿ ಸದಸ್ಯರಾಗಿದ್ದರು. ಕಳೆದ ವರ್ಷ ಬೆಂಗಳೂರಿಲ್ಲಿ ಒಂದು ತಿಂಗಳವರೆಗೆ ‘ಲಿವಿಂಗ್ ಲೈಟ್ಲಿ’ ಪ್ರದರ್ಶನ ಆಯೋಜಿಸಿದ್ದರು.

ಬೆಳಗಾವಿ ಜಿಲ್ಲೆ ಯರಗಟ್ಟಿ ಸಮೀಪದ ಮೇಕಲ್ಮರಡಿ ಗ್ರಾಮದಲ್ಲಿ ಮಿತಾನ ಸಂಸ್ಥೆ, ಕಡೋಳಿ ಗ್ರಾಮದಲ್ಲಿ ಗ್ರಾಮೀಣ ಕೌಶಲ ತರಬೇತಿ ಕೇಂದ್ರ, ತುಮಕೂರು ಜಿಲ್ಲೆಯ ದೇವರಾಯನದುರ್ಗ ಸಮೀಪ ಕರಕುಶಲ ವಸ್ತುಗಳ ಉತ್ಪಾದನೆ ಹಾಗೂ ಮಾರುಕಟ್ಟೆ ಕೇಂದ್ರ ಸ್ಥಾಪಿಸಿದ್ದರು.

ಬೆಳಗಾವಿಯ ಅಥಣಿಯಲ್ಲಿ ತಯಾರಾಗುವ ಕೊಲ್ಹಾಪುರಿ ಚಪ್ಪಲಿಗಳ ವಿನ್ಯಾಸವನ್ನು ಯುರೋಪಿನ ಪ್ರಾಡಾ ಕಂಪನಿಯು ಅನುಮತಿ ಇಲ್ಲದೆ ಬಳಸಲು ಆರಂಭಿಸಿದಾಗ ಗೋಪಿಕೃಷ್ಣ ಖಂಡಿಸಿದ್ದರು. ಅವರ ಹೋರಾಟದ ಫಲವಾಗಿ, ಪ್ರಾಡಾದ ಎಂಜಿನಿಯರ್‌ಗಳು ಅಥಣಿಗೆ ಬಂದು ಇಲ್ಲಿನ ಕೆಲಸಗಾರರಿಗೆ ತರಬೇತಿ ನೀಡಲು ಆರಂಭಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ