ರಣಹದ್ದು ರಕ್ಷಣೆಗೆ ಜನ ಜಾಗೃತಿ: ಬನ್ನೇರುಘಟ್ಟದಲ್ಲಿ ಬ್ರೀಡಿಂಗ್ ಘಟಕ

ರಣಹದ್ದು ರಕ್ಷಣೆಗೆ ಜನ ಜಾಗೃತಿ: ಬನ್ನೇರುಘಟ್ಟದಲ್ಲಿ ಬ್ರೀಡಿಂಗ್ ಘಟಕ

ರಣಹದ್ದು ರಕ್ಷಣೆಗೆ ಜನ ಜಾಗೃತಿ: ಬನ್ನೇರುಘಟ್ಟದಲ್ಲಿ ಬ್ರೀಡಿಂಗ್ ಘಟಕ

ರಾಮನಗರ: ‘ಪರಿಸರ ಸಮತೋಲನ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸು ರಣಹದ್ದುಗಳು ಇಂದು ಅಳಿವಿನಂಚಿನಲ್ಲಿವೆ. ರಣಹದ್ದುಗಳ ಸಂತಾನ ಹೆಚ್ಚಿಸುವ ಸಲುವಾಗಿ ಬನ್ನೇರುಘಟ್ಟದಲ್ಲಿ ನಿರ್ಮಿಸಿರುವ ಬ್ರೀಡಿಂಗ್ ಘಟಕ ಶೀಘ್ರ ಪ್ರಾರಂಭವಾಗಲಿದೆ. ಇದರ ಜೊತೆಗೆ ಜನ ಜಾಗೃತಿ ಅಗತ್ಯ’ ಎಂದು ಬೆಂಗಳೂರು ದಕ್ಷಿಣ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ. ರಾಮಕೃಷ್ಣಪ್ಪ ಹೇಳಿದರು.

ನಗರದ ಹೊರವಲಯದ ರಾಮದೇವರ ಬೆಟ್ಟದ ರಣಹದ್ದು ವನ್ಯಜೀವಿ ಧಾಮದಲ್ಲಿ ಭಾನುವಾರ ಅರಣ್ಯ ಇಲಾಖೆ ಮತ್ತು ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ಭಾನುವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ರಣಹದ್ದು ಜಾಗೃತಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಣಹದ್ದು ಸಂರಕ್ಷಣೆ ನಿಟ್ಟಿನಲ್ಲಿ ‌‌ರಾಮದೇವರ ಬೆಟ್ಟದಲ್ಲಿ ರಿಲಿಸಿಂಗ್ ಸೆಂಟರ್ ತೆರೆಯಲಾಗುತ್ತದೆ’ ಎಂದರು.

‘ಬನ್ನೇರುಘಟ್ಟದಲ್ಲಿ ಸಿದ್ಧವಾದ ರಣಹದ್ದು ಮರಿಗಳನ್ನು ರಾಮದೇವರ ಬೆಟ್ಟದಲ್ಲಿ ಬಿಡಲಾಗುತ್ತದೆ. ಜಿಂಕೆ ಗಾತ್ರದಿಂದಿಡಿದು ಆನೆಗಾತ್ರದ ಮೃತ ಪ್ರಾಣಿಗಳ ಕಳೇಬರವನ್ನು ರಣಹದ್ದುಗಳು ತಮ್ಮ ಉದ್ದ ಕೊಕ್ಕಿನಿಂದ ತಿಂದು ಜೀವಿಸುತ್ತವೆ. ಜಿಂಕೆಗಿಂತ ಕಡಿಮೆ ಗಾತ್ರದ ಸತ್ತ ಮಾಂಸ ತಿನ್ನುವುದಿಲ್ಲ ಎಂಬುದು ವಿಶೇಷ. ಈಜಿಪ್ಟಿಯನ್ ವಲ್ಚರ್ ರಣಹದ್ದುಗಳು ಚಿಕ್ಕ ಚಿಕ್ಕ ಮತ್ತು ದೊಡ್ಡ ದೊಡ್ಡ ಪ್ರಾಣಿಗಳ ಸತ್ತ ಪ್ರಾಣಿಗಳನ್ನು ತಿನ್ನುತ್ತವೆ’ ಎಂದು ತಿಳಿಸಿದರು.

‘ಅಳಿವಿನಂಚಿನಲ್ಲಿರುವ ರಣಹದ್ದುಗಳ ವಾಸಸ್ಥಾನ ಹಾಗೂ ಸಂತತಿ ಸಂರಕ್ಷಣೆಗೆ ರಾಮದೇವರ ಬೆಟ್ಟವನ್ನು ದೇಶದ ಮೊದಲ ರಣಹದ್ದು ಅಭಯಾರಣ್ಯವಾಗಿ ಘೋಷಣೆ ಮಾಡಲಾಗಿದೆ. ಇಲ್ಲಿ ಮುಖ್ಯವಾಗಿ ಉದ್ದಕೊಕ್ಕಿನ ರಣಹದ್ದು, ಈಜಿಪ್ಟಿಯನ್ ವಲ್ಚರ್ (ಬಿಳಿ ರಣಹದ್ದು) ಸಂತಾನೋತ್ಪತ್ತಿ ಮಾಡುತ್ತಿವೆ. ರಣಹದ್ದುಗಳು ವರ್ಷಕ್ಕೆ ಒಂದು ಮೊಟ್ಟೆ ಮಾತ್ರ ಇಡುವುದರಿಂದ ಅವುಗಳ ಸಂತತಿ ನಿಧಾನವಾಗಿ ವೃದ್ಧಿಯಾಗುತ್ತಿದೆ’ ಎಂದು ಹೇಳಿದರು.

2 ರಣಹದ್ದು ದರ್ಶನ: ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಧಿಕಾರಿಗಳು, ವನ್ಯಜೀವಿ ತಜ್ಞರು ಹಾಗೂ ಪರಿಸರ ಪ್ರೇಮಿಗಳು ಬೆಳಿಗ್ಗೆ ರಣಹದ್ದುಗಳ ವೀಕ್ಷಣೆಗೆ ಬೆಟ್ಟಕ್ಕೆ ಭೇಟಿ ನೀಡಿದಾಗ ಎರಡು ರಣಹದ್ದು ದರ್ಶನ ನೀಡಿದವು.

ಟ್ರಸ್ಟ್ ಅಧ್ಯಕ್ಷ ಚಂದ್ರೇಗೌಡ, ಪಶು ವೈದ್ಯಾಧಿಕಾರಿ ಡಾ. ನಜೀರ್ ಅಹಮದ್, ಸಂಪನ್ಮೂಲ ವ್ಯಕ್ತಿಗಳಾದ ದರ್ಶನ್, ಸತ್ಯ ಪ್ರಮೋದ್, ತಮಿಳುನಾಡಿನ ಸುಂದರಿ ಜೋನಲ್, ಡಾ. ನವಾಜ್ ಷರೀಫ್, ಎಸಿಎಫ್‍ಗಳಾದ ಶ್ರೀನಿವಾಸ್, ಪುಟ್ಟಮ್ಮ, ಚೈತ್ರಾ, ರಾಮನಗರ ವಲಯ ಅರಣ್ಯಾಧಿಕಾರಿ ಮೊಹಮ್ಮದ್ ಮನ್ಸೂರ್, ಚನ್ನಪಟ್ಟಣದ ಮಲ್ಲೇಶ್, ಮಾಗಡಿಯ ನೇತ್ರಾವತಿ, ಕನಕಪುರದ ರಂಜಿತ, ಸಾತನೂರಿನ ಬಾಲಕೃಷ್ಣ, ವನ್ಯಜೀವಿ ವಿಭಾಗದ ಶ್ರೀಧರ್, ಪ್ರಮೋದ್, ಉಪ ವಲಯ ಅರಣ್ಯಾಧಿಕಾರಿ ಸುಷ್ಮಾ ಕಾರ್ಯಕ್ರಮದಲ್ಲಿದ್ದರು.

ಪ್ರಾಣಿ– ಪಕ್ಷಿಗಳ ಸಂರಕ್ಷಣೆ ಎಂದರೆ ಪರಿಸರದ ಸಂರಕ್ಷಣೆಯೇ ಆಗಿದೆ. ಮಾನವನ ಬದುಕಿನೊಂದಿಗೆ ಪ್ರಾಣಿ ಮತ್ತು ಪಕ್ಷಿಗಳ ಬದುಕು ಕೂಡ ಬೆಸೆದುಕೊಂಡಿದೆ. ಪರಿಸರ ಸಮತೋಲನಕ್ಕಾಗಿ ಅವುಗಳನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ

ಮರಸಪ್ಪ ರವಿ, ಪರಿಸರ ಕಾರ್ಯಕರ್ತ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ