ಧಾರವಾಡ | ಅರಣ್ಯ ಸಂರಕ್ಷಣೆ ಎಲ್ಲರ ಜವಾಬ್ದಾರಿ– ನ್ಯಾಯಾಧೀಶ ವಿಜಯ್‌

ಧಾರವಾಡ | ಅರಣ್ಯ ಸಂರಕ್ಷಣೆ ಎಲ್ಲರ ಜವಾಬ್ದಾರಿ– ನ್ಯಾಯಾಧೀಶ ವಿಜಯ್‌

ಧಾರವಾಡ | ಅರಣ್ಯ ಸಂರಕ್ಷಣೆ ಎಲ್ಲರ ಜವಾಬ್ದಾರಿ– ನ್ಯಾಯಾಧೀಶ ವಿಜಯ್‌

ಧಾರವಾಡ: ‘ಅರಣ್ಯ ಪ್ರದೇಶದ ಸಂರಕ್ಷಣೆ ಎಲ್ಲರ ಹೊಣೆ. ಅರಣ್ಯದ ಮಹತ್ವದ ಕುರಿತು ಜಾಗೃತಿ ಮೂಡಿಸಬೇಕು’ ಎಂದು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಧೀಶ ಎನ್‌.ವಿ.ವಿಜಯ್‌ ಹೇಳಿದರು.

ಅರಣ್ಯ ಸಂಕೀರ್ಣ ಆವರಣದಲ್ಲಿ ಶುಕ್ರವಾರ ನಡೆದ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದರು.

‘ಅರಣ್ಯ ಹುತಾತ್ಮರ ದಿನ ಮಹತ್ವದ ಹಾಗೂ ಭಾವನಾತ್ಮಕ ದಿನ. ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಅರಣ್ಯ ಸಿಬ್ಬಂದಿ ಶ್ರಮಿಸುತ್ತಾರೆ. ವಾಹನಗಳು ಹೋಗದ ಪ್ರದೇಶಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಾರೆ. ಕಾಡು ನಾಶ ತಡೆಗೆ ಶ್ರಮಿಸುತ್ತಾರೆ’ ಎಂದರು.

ಧಾರವಾಡ ಸಿಸಿಎಫ್‌ ವಸಂತರೆಡ್ಡಿ ಕೆ.ವಿ ಮಾತನಾಡಿ, ಪ್ರತಿ ವರ್ಷ ಸೆಪ್ಟೆಂಬರ್ 11ರಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ ಆಚರಿಸಲಾಗುತ್ತದೆ. 1730ರಲ್ಲಿ ರಾಜಸ್ಥಾನದ ಖೇಜರ್ಲಿ ಗ್ರಾಮದಲ್ಲಿ ನಡೆದ ಐತಿಹಾಸಿಕ ಬಲಿದಾನವನ್ನು ಸ್ಮರಿಸುತ್ತದೆ. ಖೇಜ್ರಿ ಮರಗಳನ್ನು ಕಡಿಯುವುದನ್ನು ವಿರೋಧಿಸಿ ಅಮೃತಾದೇವಿ ಬಿಷ್ಣೋಯಿ ನೇತೃತ್ವದಲ್ಲಿ 363 ಬಿಷ್ಣೋಯಿ ಸಮುದಾಯದವರು ಪ್ರಾಣ ಅರ್ಪಿಸಿದ್ದರು. ಇದು ಪ್ರೇರಣಾದಾಯಕ ಪರಿಸರ ಸಂರಕ್ಷಣಾ ಚಳವಳಿಗಳಲ್ಲೊಂದು’ ಎಂದರು.

ಹು–ಧಾ ಪೊಲೀಸ್ ಕಮಿಷನರ್‌ ಭೂಷಣ ಬೊರಸೆ, ಎಸ್ಪಿ ಗುಂಜನ್ ಆರ್ಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಲ್ಲಪ್ಪ ಬಡಿಗೇರ, ಉತ್ತರ ಕರ್ನಾಟಕ ನಿವೃತ್ತ ಅರಣ್ಯ ಅಧಿಕಾರಿಗಳ ಸಂಘದ ಅಧ್ಯಕ್ಷ ವಿ.ಎಂ. ಹಲಗತ್ತಿ, ಡಿಸಿಎಫ್‌ ವಿವೇಕ ಟಿ.ಕವರಿ, ಸುರೇಶ ತೇಲಿ, ಪರಿಮಳಾ ವಿ.ಎಚ್, ಎಸಿಎಫ್‌ ಸುನೀತಾ ನಿಂಬರಗಿ ಇದ್ದರು.

ಪ್ರಕೃತಿ ಶಕ್ತಿಯ ಅರಿವು ಇರಬೇಕು. ಪ್ರಕೃತಿ ರಕ್ಷಣೆ ಮಾಡಲು ಹೆಚ್ಚು ಮುತುವರ್ಜಿ ವಹಿಸಬೇಕು. ನಿಷ್ಠೆಯಿಂದ ಕೆಲಸ ಮಾಡಬೇಕು ಭೂಷಣ ಬೊರಸೆ, ಪೊಲೀಸ್ ಕಮಿಷನರ್‌, ಹುಬ್ಬಳ್ಳಿ–ಧಾರವಾಡ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ