ಆಳಂದದಲ್ಲಿ ಹಿಂದೂ ಸಮಾವೇಶದ ಪರ-ವಿರೋಧದ ಪೂರ್ವಭಾವಿ ಸಭೆ

ಆಳಂದದಲ್ಲಿ ಹಿಂದೂ ಸಮಾವೇಶದ ಪರ-ವಿರೋಧದ ಪೂರ್ವಭಾವಿ ಸಭೆ

ಆಳಂದದಲ್ಲಿ ಹಿಂದೂ ಸಮಾವೇಶದ ಪರ-ವಿರೋಧದ ಪೂರ್ವಭಾವಿ ಸಭೆ

ಆಳಂದ: ‘ಸನಾತನ ವರ್ಣಾಶ್ರಮ ಪದ್ಧತಿ ಹಾಗೂ ಧಾರ್ಮಿಕ ಶೋಷಣೆ, ಅಸಮಾನತೆ ವಿರುದ್ಧ ಹೋರಾಡಿದ ಬಸವಾದಿ ಶರಣರನ್ನು ಹಿಂದೂ ಧರ್ಮದೊಂದಿಗೆ ಜೋಡಿಸುವ ಷಡ್ಯಂತ್ರಕ್ಕೆ ಲಿಂಗಾಯತರು ಬಲಿಯಾಗಬಾರದು’ ಎಂದು ಹೋರಾಟಗಾರ್ತಿ ಮೀನಾಕ್ಷಿ ಬಾಳಿ ಎಚ್ಚರಿಸಿದರು.

ಪಟ್ಟಣದ ಶರಣ ಏಕಾಂತರಾಮಯ್ಯ ಅನುಭವ ಮಂಟಪದಲ್ಲಿ ಭಾನುವಾರ ಸೆ.27ರಂದು ಕಲಬುರಗಿಯಲ್ಲಿ ಹಮ್ಮಿಕೊಂಡಿರುವ ಬಸವಾದಿ ಶರಣರ ಹಿಂದೂ ಸಮಾವೇಶದ ವಿರುದ್ಧ ಬಸವತತ್ವ ಹಾಗೂ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡ ಪ್ರತಿಭಟನೆ ಅಂಗವಾಗಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ತೋಂಟದಾರ್ಯ ಅನುಭವ ಮಂಟಪದ ಕೋರಣೇಶ್ವರ ಸ್ವಾಮೀಜಿ, ಮುಖಂಡರಾದ ರವೀಂದ್ರ ಶಾಬಾದಿ, ರಾಜಶೇಖರ ಯಂಕಂಚಿ, ಅರ್ಜುನ ಭದ್ರೆ ಮಾತನಾಡಿ,‘ಸೆ.25ರಂದು ಕಲಬುರಗಿಯಲ್ಲಿ ನಡೆಯುವ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕೋಮುದ್ವೇಷ ಬಿತ್ತುವ ಹಾಗೂ ಧರ್ಮವನ್ನು ರಾಜಕೀಯಕರಣಗೊಳಿಸುವ ಶಕ್ತಿಗಳ ವಿರುದ್ಧ ಹೋರಾಟಕ್ಕೆ ಶಕ್ತಿ ತುಂಬಬೇಕು’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಾಬುರಾವ ಮಡ್ಡೆ, ಶಿವಶರಣಪ್ಪ ಮುಳೇಗಾಂವ, ಮಲ್ಲಿಕಾರ್ಜುನ ವಡ್ಡನಕೇರಿ, ಎಸ್‌ ಬಿ ಪಾಟೀಲ, ಅಪ್ಪಾಸಾಹೇಬ ತೀರ್ಥೆ, ಸುಭಾಷ ಪಾಟೀಲ, ರಮೇಶ ಲೋಹಾರ, ಸಂಜಯ ಪಾಟೀಲ, ಕಲ್ಯಾಣಿ ತುಕಾಣೆ, ಗುರಪ್ಪ ಶಹಾಪುರೆ, ಬಸವರಾಜ ಶೇರಿಕಾರ, ರೇವಣಸಿದ್ದಪ್ಪ ಸೇರಿದಂತೆ ಇತರರುಉಪಸ್ಥಿತರಿದ್ದರು.

ಆಳಂದ: ‘ಹಿಂದೂ ಧರ್ಮದ ಮುಂಬರುವ ಮಕ್ಕಳು, ಯುವಕರ ಆರೋಗ್ಯ, ಶಿಕ್ಷಣ ಹಾಗೂ ಸಂಸ್ಕಾರಯುತ ಬದುಕಿಗಾಗಿ ಕನೇರಿಮಠದ ಕಾಡಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಸೆ.27ರಂದು ಕಲಬುರಗಿಯಲ್ಲಿ ಹಮ್ಮಿಕೊಂಡ ಬಸವಾದಿ ಹಿಂದೂ ಸಮಾವೇಶದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು’ ಎಂದು ಮುಖಂಡ ಚಂದು ಪಾಟೀಲ ತಿಳಿಸಿದರು.

ಪಟ್ಟಣದ ಆರ್ಯಸಮಾಜ ಕಲ್ಯಾಣ ಮಂಟಪದಲ್ಲಿ ಶನಿವಾರ ಹಿಂದೂ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಮಾತನಾಡಿ,‘ಹಿಂದೂ ಧರ್ಮ ಒಡೆಯುವ ಹಾಗೂ ಹಿಂದೂ ದೇವರು, ಆಚರಣೆಗಳಿಗೆ ಅಗೌರವ, ಅವಮಾನಿಸುವ ಪ್ರಯತ್ನ ನಿರಂತರವಾಗಿ ನಡೆದಿದೆ. ಇಂತಹ ಸಮಾವೇಶವು ನಮ್ಮಲ್ಲಿ ಒಗ್ಗಟ್ಟು ಮೂಡಿಸಲು ಅವಶ್ಯಕವಾಗಿವೆ’ ಎಂದರು.

ಸವಿತಾನಂದ ಸ್ವಾಮೀಜಿ, ಬಿಜೆಪಿ ತಾಲ್ಲೂಕಾಧ್ಯಕ್ಷ ಮಲ್ಲಿಕಾರ್ಜುನ ಕಂದಗೋಳೆ, ಹಣಮಂತರಾವ ಮಲಾಜಿ, ಸಿ.ಕೆ. ಪಾಟೀಲ, ಬಸವರಾಜ ಬಿರಾದಾರ, ಬಾಬಾಸಾಹೇಬ ಪಾಟೀಲ, ಆನಂದ ಪಾಟೀಲ, ಸಚಿನ ಕಡಗಂಚಿ, ಮಹೇಶ ಗೌಳಿ, ಸಂತೋಷ ಹಾದಿಮನಿ, ಪ್ರಕಾಶ ಮಾನೆ ಉಪಸ್ಥಿತರಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ